Franco Nsubuga: ಗಯಾನ: ಐಸಿಸಿ ಟಿ20 ವಿಶ್ವಕಪ್’ನಲ್ಲಿ (ICC T20 World Cup 2024) 4 ಓವರ್ ಬೌಲಿಂಗ್ ಮಾಡಿ ಕೇವಲ 4 ರನ್ ನೀಡಿ 2 ವಿಕೆಟ್ ಪಡೆದ ಒಬ್ಬ ಬೌಲರ್ ಇಡೀ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಅಂದ ಹಾಗೆ, ಆ ಕ್ರಿಕೆಟಿಗನ ವಯಸ್ಸು ಜಸ್ಟ್ 43 ವರ್ಷ ! ಇದು ಉಗಾಂಡ (Uganda Cricket Team) ತಂಡದ ಆಫ್’ಸ್ಪಿನ್ನರ್ ಫ್ರಾಂಕೋ ಎನ್’ಸುಬುಗ (Franco Nsubuga) ಅವರ ಸಕ್ಸಸ್ ಸ್ಟೋರಿ.

ವೆಸ್ಟ್ ಇಂಡೀಸ್’ನ ಗಯಾನದ ಪ್ರಾವಿಡೆನ್ಸ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಉಗಾಂಡ ತಂಡ, ಪಪುವಾ ನ್ಯೂಗಿನಿ ವಿರುದ್ಧ 3 ವಿಕೆಟ್’ಗಳ ರೋಚಕ ಗೆಲುವು ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ ಪಪುವಾ ನ್ಯೂಗಿನಿ ತಂಡ 19.1 ಓವರ್’ಗಳಲ್ಲಿ 77 ರನ್’ಗಳಿಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಉಗಾಂಡ 18.2 ಓವರ್’ಗಳಲ್ಲಿ 7 ವಿಕೆಟ್ ಕಳೆದುಕೊಂಡು 78 ರನ್ ಗಳಿಸುವ ಮೂಲಕ ಪ್ರಯಾಸದ ಜಯ ಸಾಧಿಸಿತು.
ಉಗಾಂಡ ತಂಡದ 43 ವರ್ಷಗ ಆಫ್’ಸ್ಪಿಪ್ನರ್ ಫ್ರಾಂಕೋ ಎನ್’ಸುಬುಗ 4 ಓವರ್’ಗಳಲ್ಲಿ 2 ಓವರ್ ಮೇಡನ್ ಮಾಡಿ, ಕೇವಲ 4 ರನ್ನಿತ್ತು 2 ವಿಕೆಟ್ ಉರುಳಿಸಿದರು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೋಸ್ಟ್ ಎಕನಾಮಿಕಲ್ ಬೌಲಿಂಗ್ ಪರ್ಫಾಮೆನ್ಸ್ ಎಂಬ ಹಿರಿಮೆಗೆ ಪಾತ್ರವಾಗಿದೆ. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಆನ್ರಿಚ್ ನೋಕ್ಯಾ ಜೂನ್ 3ರಂದು ನಡೆದ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ 4 ಓವರ್’ಗಳಲ್ಲಿ 7 ರನ್ನಿತ್ತು 4 ವಿಕೆಟ್ ಪಡೆದಿದ್ದರು. ಆ ವಿಶ್ವದಾಖಲೆಯನ್ನು ಉಗಾಂಡದ ಫ್ರಾಂಕೋ ಎನ್’ಸುಬುಗ ಪುಡಿಗಟ್ಟಿದ್ದಾರೆ.
ಇದನ್ನೂ ಓದಿ : Virat Kohli: ಆರಂಭಿಕನಾಗಿ ಮೊದಲ ಪಂದ್ಯದಲ್ಲೇ ಎಡವಿದ ಕಿಂಗ್ ಕೊಹ್ಲಿ!
ಫ್ರಾಂಕೋ ಎನ್’ಸುಬುಗ ತಮ್ಮ 16ನೇ ವರ್ಷದಲ್ಲೇ ಈಸ್ಟ್ ಮತ್ತು ಸೆಂಟ್ರಲ್ ಆಫ್ರಿಕಾ ತಂಡದ ಪರವಾಗಿ ಐಸಿಸಿ ಟ್ರೋಫಿ ಟೂರ್ನಿಯಲ್ಲಿ ಆಡುವ ಮೂಲಕ 1997ರಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಉಗಾಂಡ ಪರ ಇಲ್ಲಿವರೆಗೆ ಒಟ್ಟು 55 ಟಿ20 ಪಂದ್ಯಗಳನ್ನಾಡಿರುವ ಫ್ರಾಂಕೋ ಎನ್’ಸುಬುಗ 4.71ರ ಎಕಾನಮಿಯಲ್ಲಿ 57 ವಿಕೆಟ್’ಗಳನ್ನು ಪಡೆದಿದ್ದಾರೆ. ಐಸಿಸಿ ಟಿ20 ವಿಶ್ವಕಪ್”ನಲ್ಲಿ ಆಡಿದ 2ನೇ ಅತ್ಯಂತ ಹಿರಿಯ ಆಟಗಾರನೆಂಬ ದಾಖಲೆಯನ್ನೂ ಎನ್’ಸುಬುಗ ಬರೆದಿದ್ದಾರೆ.

ಐಸಿಸಿ ಟಿ20 ವಿಶ್ವಕಪ್’ನಲ್ಲಿ ಆಡಿದ ಅತ್ಯಂತ ಹಿರಿಯ ಆಟಗಾರರು:
1. ರಿಯಾನ್ ಕ್ಯಾಂಪ್’ಬೆಲ್ (ಹಾಂಕಾಗ್) : 44 ವರ್ಷ, 34 ದಿನ (2016)
2. ಫ್ರಾಂಕೋ ಎನ್’ಸುಬುಗ (ಉಗಾಂಡ) : 43 ವರ್ಷ, 282 ದಿನ (2024)
3. ಬ್ರಾಂಡ್ ಹಾಗ್ (ಆಸ್ಟ್ರೇಲಿಯಾ) : 43 ವರ್ಷ, 45 ದಿನ (2014)
ಇದನ್ನೂ ಓದಿ : T20 World Cup Nosthush Kenjige: ಅಮೆರಿಕ ಪರ ಆಡುತ್ತಿರುವ ಚಿಕ್ಕಮಗಳೂರು ಪ್ರತಿಭೆಗೆ ‘ನಂದಿನಿ’ ಸ್ಪಾನ್ಸರ್ !
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಆಡುತ್ತಿರುವ ಉಗಾಂಡ ’ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಆಡಿರುವ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ ಒಂದು ಸೋಲು ಕಂಡಿದೆ. ಭಾನುವಾರ (ಜೂನ್ 9) ಗಯಾನದಲ್ಲಿ ನಡೆಯಲಿರುವ ತನ್ನ 3ನೇ ಲೀಗ್ ಪಂದ್ಯದಲ್ಲಿ ಉಗಾಂಡ ತಂಡ, ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ : Rohit Sharma 600: ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾರೂ ಮಾಡಲಾಗದ ದಾಖಲೆ ಬರೆದ ಹಿಟ್ ಮ್ಯಾನ್ !
Franco Nsubuga 4 overs, 4 runs, 2 wickets: 43-year-old spinner Record in the T20 World Cup