ಬುಧವಾರ, ಏಪ್ರಿಲ್ 30, 2025
HomeSportsCricketICC Women’s Under-19 World Cup: ಕಿವೀಸ್ ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟ ಭಾರತದ...

ICC Women’s Under-19 World Cup: ಕಿವೀಸ್ ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟ ಭಾರತದ ವನಿತೆಯರು

- Advertisement -

ಪೋಚೆಫ್’ಸ್ಟ್ರೂಮ್ (Potchefstroom): ಸ್ಫೋಟಕ ಬ್ಯಾಟರ್ ಶೆಫಾಲಿ ವರ್ಮಾ ಸಾರಥ್ಯದ ಭಾರತ ಮಹಿಳಾ ತಂಡ, ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್-19 ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC Women’s Under-19 World Cup 2022-23) ಫೈನಲ್’ಗೆ ಲಗ್ಗೆ ಇಟ್ಟಿದೆ. ಪೋಚೆಫ್’ಸ್ಟ್ರೂಮ್’ನ ಸೆನ್ವೆಸ್ ಪಾರ್ಕ್ ಮೈದಾನದಲ್ಲಿ ಶುಕ್ರವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿ ಫೈನಲ್’ಗೆ ಎಂಟ್ರಿ ಕೊಟ್ಟಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ವನಿತೆಯರು ಭಾರತದ ಯುವ ಲೆಗ್ ಸ್ಪಿನ್ನರ್ ಪಾರ್ಷವಿ ಚೋಪ್ರಾ ದಾಳಿಗೆ ತತ್ತರಿಸಿದರು. ಶೆಫಾಲಿ ಪಡೆಯ ಸಂಘಟಿತ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ನಿಗದಿತ 20 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 107 ರನ್ ಗಳಿಸಲಷ್ಟೇ ಶಕ್ತವಾಯಿತು. ಅಮೋಘ ಬೌಲಿಂಗ್ ದಾಳಿ ಸಂಘಟಿಸಿದ ಪಾರ್ಷವಿ ಚೋಪ್ರಾ 4 ಓವರ್’ಗಳಲ್ಲಿ ಕೇವಲ 20 ರನ್ನಿತ್ತು 3 ವಿಕೆಟ್ ಉರುಳಿಸಿದರು.

ನಂತರ ಸುಲಭ ಗುರಿ ಬೆನ್ನಟ್ಟಿದ ಭಾರತ ನಾಯಕಿ ಶೆಫಾಲಿ ವರ್ಮಾ (10 ರನ್, 9 ಎಸೆತ) ಅವರನ್ನು 4ನೇ ಓವರ್’ನಲ್ಲಿ ಕಳೆದುಕೊಂಡಿತು. ಆದರೆ 2ನೇ ವಿಕೆಟ್’ಗೆ ಜೊತೆಯಾದ ಉಪನಾಯಕಿ ಶ್ವೇತಾ ಸೆಹ್ರಾವತ್ ಮತ್ತು ಸೌಮ್ಯ ತಿವಾರಿ 62 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ಉಪನಾಯಕಿಯ ಜವಾಬ್ದಾರಿ ಹೊತ್ತು ಆಟವಾಡಿದ ಶ್ವೇತಾ ಸೆಹ್ರಾವತ್ 45 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ ಅಜೇಯ 61 ರನ್ ಸಿಡಿಸಿ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಭರ್ಜರಿ ಬೌಲಿಂಗ್ ದಾಳಿ ನಡೆಸಿ ನ್ಯೂಜಿಲೆಂಡ್‌ ಅನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಲು ಕಾರಣರಾದ ಪಾರ್ಷವಿ ಚೋಪ್ರಾ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : ರಣಜಿ ಟ್ರೋಫಿಯಲ್ಲಿ ಜಡೇಜ ಕಮಾಲ್, 7 ವಿಕೆಟ್ ಪಡೆದು ಕಾಂಗರೂಗಳಿಗೆ ವಾರ್ನಿಂಗ್ ಕೊಟ್ಟ ರಾಕ್ ಸ್ಟಾರ್

ಇದನ್ನೂ ಓದಿ : KL Rahul starts training : ಮದುವೆ ಬೆನ್ನಲ್ಲೇ ಟ್ರೈನಿಂಗ್ ಶುರು ಮಾಡಿದ ಕೆ.ಎಲ್ ರಾಹುಲ್, ಕಾಂಗರೂ ಸರಣಿಗೆ ಕನ್ನಡಿಗನ ಭರ್ಜರಿ ಸಿದ್ಧತೆ

ICC Womens Under-19 World Cup 2022-23 Indian women entered the final after winning against the New zealand

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular