Rath Saptami 2023 : ರಥ ಸಪ್ತಮಿ 2023 : ಸೂರ್ಯನ ಆರಾಧನೆಯ ದಿನ

ರಥಸಪ್ತಮಿ (Rath Saptami 2023), ಸೂರ್ಯ ದೇವನನ್ನು ಆರಾಧಿಸುವ ದಿನ. ಹಿಂದೂಗಳು ಆಚರಿಸುವ ಈ ಹಬ್ಬ ಚಳಿಗಾಲದ (Winter) ಅಂತ್ಯ ಮತ್ತು ವಸಂತ ಋತುವಿನ ಆರಂಭ (Spring) ಹಾಗೂ ಸುಗ್ಗಿಯ ಕಾಲವನ್ನು ಸೂಚಿಸುತ್ತದೆ. ಸೂರ್ಯ ಉಪಾಸನೆಯಿಂದ ಅನೇಕ ರೋಗಗಳು ಗುಣವಾಗುತ್ತದೆ ಮತ್ತು ದೀರ್ಘಾಯುಷ್ಯ ಹಾಗೂ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ . ರಥ ಸಪ್ತಮಿ ಮಾಘ ಮಾಸದ ಶುಕ್ಲ ಪಕ್ಷದ ಏಳನೇ ದಿನ ಸಪ್ತಮಿಯ ತಿಥಿಯಂದು ಆಚರಿಸುವ ಹಬ್ಬವಾಗಿದೆ. ಈ ವರ್ಷ ರಥ ಸಪ್ತಮಿಯನ್ನು ಜನವರಿ 28 ರಂದು ಆಚರಿಸಲಾಗುತ್ತಿದೆ.

ರಥ ಸಪ್ತಮಿಯ ಮಹತ್ವ:
ಸೂರ್ಯನು ಮಳೆಬಿಲ್ಲಿನ ಏಳು ಬಣ್ಣಗಳನ್ನು ಪ್ರತಿನಿಧಿಸುವ ಏಳು ಕುದುರೆಗಳ ಮೇಲೇರಿ ಬರುತ್ತಾನೆ ಎಂದು ನಂಬಲಾಗಿದೆ. ಅದು ಸೂರ್ಯನ ದಿನವಾದ ಭಾನುವಾರದಿಂದ ಪ್ರಾರಂಭವಾಗುವ ಏಳು ದಿನಗಳನ್ನು ಪ್ರತಿನಿಧಿಸುತ್ತದೆ. ಸೂರ್ಯನ ರಥವು 12 ಚಕ್ರಗಳನ್ನು ಹೊಂದಿದೆ. ಇದು ರಾಶಿ ಚಕ್ರದ 12 ಚಿಹ್ನೆಗಳನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು 30 ಡಿಗ್ರಿ ಹೊಂದಿದ್ದು ಅದು 360 ಡಿಗ್ರಿಯನ್ನು ಸೂಚಿಸುತ್ತದೆ. ಅಂದರೆ ಒಂದು ಪೂರ್ಣ ವರ್ಷವನ್ನು ರೂಪಿಸುತ್ತದೆ. ಸೂರ್ಯನು ಪ್ರತಿ ತಿಂಗಳು ಒಂದು ಮನೆಯಿಂದ ಮತ್ತೊಂದು ಮನೆಗೆ ಹೋಗುತ್ತಾನೆ ಹಾಗೆ ಒಟ್ಟು ಚಕ್ರವು ಪೂರ್ಣಗೊಳ್ಳಲು 365 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಹಾಗಾಗಿ ಈ ದಿನವನ್ನು ಸೂರ್ಯನ ಜನ್ಮ ದಿನ ಎಂದು ಕೆಲವರು ಆಚರಿಸುತ್ತಾರೆ. ರಥ ಸಪ್ತಮಿಯು ಚಳಿಗಾಲದಿಂದ ವಸಂತ ಋತುಗೆ ಬದಲಾವಣೆಯಾಗುವ ಸಂಕೇತವಾಗಿದೆ. ಇದು ಸುಗ್ಗಿಯ ಋತುವಿನ ಆರಂಭವನ್ನೂ ಸೂಚಿಸುತ್ತದೆ. ಈ ನಂತರ ದಕ್ಷಿಣ ಭಾರತದಲ್ಲಿ ತಾಪಮಾನ ಕ್ರಮೇಣ ಏರುತ್ತದೆ.

ರಥಸಪ್ತಮಿಯ ಆಚರಣೆ ಹೇಗೆ?
ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಆಚರಿಸಲಾಗುವ ರಥ ಸಪ್ತಮಿಯು ಸೂರ್ಯ ದೇವನ ಪೂಜೆಯ ದಿನವಾಗಿದೆ. ಈ ದಿನದಂದು ಪವಿತ್ರ ಸ್ನಾನ ಮಾಡುವುದು, ದಾನ ಮಾಡುವುದು ಮತ್ತು ಸೂರ್ಯ ದೇವನ ಆರಾಧನೆ ಮಾಡಲಾಗುವುದು. ಸೂರ್ಯೋದಯದ ಸಮಯದಲ್ಲಿ ತೀರ್ಥ ಸ್ನಾನ ಮಾಡುವುದರಿಂದ ರೋಗಗಳು ದೂರವಾಗುತ್ತವೆ ಮತ್ತು ಉತ್ತಮ ಆರೋಗ್ಯ ಲಭಿಸುತ್ತದೆ ಎಂದು ನಂಬಲಾಗಿದೆ. ಕೆಲವರು ಈ ದಿನದಂದು ಉಪವಾಸ ವೃತವನ್ನು ಕೈಗೊಳ್ಳುತ್ತಾರೆ. ತುಪ್ಪದ ದೀಪ, ಕೆಂಪು ಹೂವುಗಳು, ಕರ್ಪೂರ ಮತ್ತು ಧೂಪಗಳಿಂದ ಪೂಜಿಸುತ್ತಾರೆ.

ಇದನ್ನೂ ಓದಿ : Avoid Fruits In Cough : ನಿಮ್ಮ ಮಕ್ಕಳು ಅತಿಯಾಗಿ ಕೆಮ್ಮುತ್ತಿದ್ದರೆ ಈ ಹಣ್ಣುಗಳಿಂದ ದೂರವಿಡಿ

ಇದನ್ನೂ ಓದಿ : Construction of a new chariot: 400 ವರ್ಷಗಳ ಬಳಿಕ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ಹೊಸ ರಥ ನಿರ್ಮಾಣ

(This year Rath Saptami 2023 is celebrated on January 28)

Comments are closed.