BCCI offers equal pay : ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಇನ್ಮುಂದೆ ಎಲ್ಲಾ ಪುರುಷ ಹಾಗೂ ಮಹಿಳಾ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸಮಾನ ವೇತನ ನೀಡುತ್ತೇವೆ ಎಂದು ಘೋಷಿಸಿದೆ. ಮಹಿಳಾ ಹಾಗೂ ಪುರುಷ ಕ್ರಿಕೆಟಿಗರ ನಡುವಿನ ತಾರತಮ್ಯವನ್ನು ತೆಗೆದು ಹಾಕುವ ಸಲುವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವಿಟರ್ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮಹಿಳಾ ಹಾಗೂ ಪುರುಷ ಕ್ರಿಕೆಟಿಗರ ನಡುವೆ ಇರುವ ತಾರತಮ್ಯವನ್ನು ನಿಯಂತ್ರಿಸಲು ಬಿಸಿಸಿಐ ಇಟ್ಟಿರುವ ಮೊದಲ ಹೆಜ್ಜೆಯನ್ನು ಘೋಷಿಸಲು ನನಗೆ ಸಂತೋಷವಿದೆ. ನಮ್ಮ ಕಾಂಟ್ರ್ಯಾಕ್ಟ್ ಮಹಿಳಾ ಕ್ರಿಕೆಟಿಗರಿಗೆ ನಾವು ಸಮಾನತೆ ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ಲಿಂಗ ಸಮಾನತೆಗೆ ಪ್ರಾಮುಖ್ಯತೆಯನ್ನು ನೀಡುವ ನಿಟ್ಟಿನಲ್ಲಿ ಮಹಿಳಾ ಕ್ರಿಕೆಟಿಗರಿಗೆ ಪುರುಷ ಕ್ರಿಕೆಟಿಗರಷ್ಟೇ ಸಮಾನ ವೇತನ ಸಿಗಲಿದೆ ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.
ಬಿಸಿಸಿಐನ ಈ ಘೋಷಣೆಯ ಬಳಿಕ ಟೀಂ ಇಂಡಿಯಾದ ಮಹಿಳಾ ಕ್ರಿಕೆಟಿಗರು ಪುರುಷ ಕ್ರಿಕೆಟಿಗರಿಗೆ ಸಮನಾದ ಪಂದ್ಯ ಶುಲ್ಕವನ್ನು ಸ್ವೀಕರಿಸಲಿದ್ದಾರೆ . ಟೆಸ್ಟ್ ಪಂದ್ಯಗಳಿಗೆ 15 ಲಕ್ಷ ರೂಪಾಯಿ, ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆರು ಲಕ್ಷ ರೂಪಾಯಿ ಹಾಗೂ ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮೂರು ಲಕ್ಷ ರೂಪಾಯಿ ವೇತನ ಸಿಗಲಿದೆ ಎಂದು ಜಯ್ ಶಾ ಮಾಹಿತಿ ನೀಡಿದ್ದಾರೆ.
I’m pleased to announce @BCCI’s first step towards tackling discrimination. We are implementing pay equity policy for our contracted @BCCIWomen cricketers. The match fee for both Men and Women Cricketers will be same as we move into a new era of gender equality in 🇮🇳 Cricket. pic.twitter.com/xJLn1hCAtl
— Jay Shah (@JayShah) October 27, 2022
ಟೀಂ ಇಂಡಿಯಾ ಪುರುಷ ಹಾಗೂ ಮಹಿಳಾ ಕ್ರಿಕೆಟಿಗರ ಪಂದ್ಯದ ಶುಲ್ಕದ ನಡುವೆ ಗಮನಾರ್ಹ ವೇತನ ಅಂತರವಿದೆ . ಮಹಿಳಾ ಹಾಗೂ ಪುರುಷ ಕ್ರಿಕೆಟಿಗರಿಗೆ ಸಮಾನ ವೇತನವನ್ನು ಮೊದಲು ಘೋಷಣೆ ಮಾಡಿದ ರಾಷ್ಟ್ರ ನ್ಯೂಜಿಲೆಂಡ್. ಜುಲೈ ತಿಂಗಳಲ್ಲಿ ಈ ಹೊಸ ಆದೇಶವನ್ನು ನ್ಯೂಜಿಲೆಂಡ್ನಲ್ಲಿ ಜಾರಿಗೆ ತರಲಾಗಿತ್ತು. ಇದೀಗ ಬಿಸಿಸಿಐ ಕೂಡ ಲಿಂಗ ಸಮಾನತೆಗೆ ತನ್ನ ಬೆಂಬಲವನ್ನು ಸೂಚಿಸಿದಂತಾಗಿದೆ.
ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ಪುರುಷ ಹಾಗೂ ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ ಘೋಷಣೆ ಮಾಡಿದ್ದ ಬಗ್ಗೆ ಅಂದು ಮಾತನಾಡಿದ್ದ ಟೀಂ ಇಂಡಿಯಾ ನಾಯಕ ಕೇನ್ ವಿಲಿಯಮ್ಸನ್, ಹಿಂದಿನ ಆಟಗಾರರು ನಡೆಸಿಕೊಂಡು ಬಂದ ಪರಂಪರೆಯನ್ನು ಈಗಿನ ಆಟಗಾರರು ಮುಂದುವರಿಸಿಕೊಂಡು ಹೋಗುವುದು ಮುಖ್ಯವಾಗಿದೆ. ಎಲ್ಲಾ ಹಂತಗಳಲ್ಲಿಯೂ ಮಹಿಳಾ ಹಾಗೂ ಪುರುಷರ ತಂಡವನ್ನು ಬೆಂಬಲಿಸುವುದು ನಿಜಕ್ಕೂ ಮುಖ್ಯವಾಗಿದೆ ಎಂದಿದ್ದರು.
2017 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಮಹಿಳಾ ODI ವಿಶ್ವಕಪ್‌ನಲ್ಲಿ ಭಾರತದ ಅದ್ಭುತ ಪ್ರದರ್ಶನದ ನಂತರ ಮಹಿಳಾ ಕ್ರಿಕೆಟ್ ಗಮನಕ್ಕೆ ಬಂದಿತು. ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡ ಫೈನಲ್‌ನಲ್ಲಿ ಸೋತಿದ್ದರೂ, ಮಹಿಳಾ ಕ್ರಿಕೆಟ್ ಬಗ್ಗೆ ಕ್ರೇಜ್ ಹೊಸ ಎತ್ತರವನ್ನು ಮುಟ್ಟಿತು.
ಇದನ್ನು ಓದಿ : UP Kannauj : ಸರಕಾರಿ ಅತಿಥಿ ಗೃಹದಲ್ಲಿ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ
In a first, BCCI offers equal pay to men and women Indian cricketers