ದುಬೈ : ಚಾಂಪಿಯನ್ಸ್ ಟ್ರೋಫಿ ((#ChampionsTrophy2025)ಸೆಮಿಫೈನಲ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದೆ. ಈ ಮೂಲಕ ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡಿದೆ. ವಿರಾಟ್ ಕೊಹ್ಲಿ (Virat Kohli) ಆಬ್ಬರದ ಬೆನ್ನಲ್ಲೇ ಕನ್ನಡಿಗ ಕೆಎಲ್ ರಾಹುಲ್ (KL Rahul) ಮ್ಯಾಚ್ ಫಿನಿಶ್ ಮಾಡಿದ್ದು ವಿಶೇಷವಾಗಿತ್ತು.
ದುಬೈನ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆಸ್ಟ್ರೇಲಿಯಾ ಹಾಗೂ ಭಾರತ ( Indian Cricket Team) ನಡುವಿನ ಕಾದಾಟಕ್ಕೆ ವೇದಿಕೆಯಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡಕ್ಕೆ ಮೊಹಮ್ಮದ್ ಸೆಮಿ ಆರಂಭಿಕ ಆಘಾತ ನೀಡಿದ್ರು, ಕೂಪರ್ ಕಾನೋಲಿ ಖಾತೆ ತೆರೆಯುವ ಮೊದಲೇ ಫೆವಿಲಿಯನ್ ಹಾದಿ ಹಿಡಿದಿದ್ರು.
ನಂತರ ಟ್ರಾವೆಸ್ ಹೆಡ್ ಜೊತೆಯಾದ ಸ್ಟೀವನ್ ಸ್ಮಿತ್ ಭರ್ಜರಿ ಅರ್ಧ ಶತಕದ ಜೊತೆಯಾಟ ಆಡಿದ್ದಾರೆ. ಟ್ರಾವೆಸ್ ಹೆಡ್ 33 ಎಸೆತಗಳಲ್ಲಿ 39 ರನ್ ಬಾರಿಸಿ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದ್ರೆ, ಸ್ಟೀವನ್ ಸ್ಮಿತ್ ಮಾತ್ರ ಉತ್ತಮ ಇನ್ನಿಂಗ್ಸ್ ಕಟ್ಟಿದ್ರು. ನಂತರ ಜೊತೆಯಾದ ಲ್ಯಾಬುಶೇನ್ 29, ಜೋಸ್ ಇಗ್ನಿಸ್ 11 ರನ್‌ಗಳಿಸಿ ಔಟಾದ್ರು.
ಸ್ಟೀವನ್ ಸ್ಮಿತ್ ಜೊತೆಯಾದ ಅಲೆಕ್ಸ್ ಕ್ಯಾರಿ ಉತ್ತಮ ಜೊತೆಯಾಟ ಆಡಿದ್ರು, ಈ ಮೂಲಕ ಆಸ್ಟ್ರೇಲಿಯಾ 200ರ ಗಡಿ ದಾಟುವಂತೆ ಮಾಡಿದ್ರು. ಸ್ಟೀವನ್ ಸ್ಮಿತ್ 96 ಎಸೆತಗಳನ್ನು ಎದುರಿಸಿ 73 ರನ್ ಬಾರಿಸಿದ್ರೆ, ಅಲೆಕ್ಸ್ ಕ್ಯಾರಿ 57 ಎಸೆತಗಳಲ್ಲಿ 61 ರನ್ ಬಾರಿಸಿದ್ರು. ಅಂತಿಮವಾಗಿ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 264 ರನ್ ಬಾರಿಸಿದೆ.
ಭಾರತ ಕ್ರಿಕೆಟ್ ತಂಡದ ಪರವಾಗಿ ಮೊಹಮ್ಮದ್ ಶೆಮಿ 43ಕ್ಕೆ 3 ವಿಕೆಟ್ ಪಡೆದುಕೊಂಡ್ರೆ, ವರುಣ್ ಚಕ್ರವರ್ತಿ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನು ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದುಕೊಂಡ್ರು.

ಆಸ್ಟ್ರೇಲಿಯಾ ನೀಡಿದ್ದ 264ರನ್ ಗಳ ಸವಾಲು ಬೆನ್ನತ್ತಲು ಹೊರಟ ಭಾರತ ಕ್ರಿಕೆಟ್ ತಂಡಕ್ಕೆ ದ್ವಾವರಿಶ್ ಶುಭಮನ್ ಗಿಲ್ ಬಲಿ ಪಡೆಯುವ ಮೂಲಕ ಆರಂಭಿಕ ಆಘಾತ ನೀಡಿದ್ರು. ನಂತರ ರೋಹಿತ್ ಶರ್ಮಾ ಜೊತೆಯಾದ ವಿರಾಟ್ ಕೊಹ್ಲಿ ಉತ್ತಮ ಇನ್ನಿಂಗ್ಸ್ ಕಟ್ಟುವ ಯತ್ನ ಮಾಡಿದ್ರು.
ಆದರೆ ಭಾರತ ತಂಡ 43 ರನ್‌ಗಳಿಸಿದ್ದಾಗ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದ್ರು. ವಿರಾಟ್ ಕೊಹ್ಲಿಗೆ ಜೊತೆಯಾದ ಶ್ರೇಯಸ್ ಅಯ್ಯರ್ ಉತ್ತಮ ಆಟ ಆಡಿದ್ದಾರೆ. ಶ್ರೇಯಸ್ ಅಯ್ಯರ್ 42 ರನ್‌ಗಳಿಸಿ ಔಟಾದ್ರೆ, ನಂತರ ಬಂದ ಅಕ್ಷರ್ ಪಟೇಲ್ 27ರನ್ ಬಾರಿಸಿದ್ರು.
ಭಾರತ ತಂಡ 200ರ ಗಡಿ ದಾಟುತ್ತಲೇ 84ರನ್ ಗಳಿಸಿದ ಆಡುತ್ತಿದ್ದ ವಿರಾಟ್ ಕೊಹ್ಲಿ ಚಂಪಾ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ್ರು. ಆದರೆ ಕನ್ನಡಿಗ ಕೆಎಲ್ ರಾಹುಲ್ ಮಾತ್ರ ಸೆಮಿ ಫೈನಲ್ ಪಂದ್ಯದಲ್ಲಿ ಜವಾಬ್ದಾರಿಯುತ ಆಟವನ್ನು ಆಡಿದ್ದಾರೆ. ಹಾರ್ದಿಕ್ ಪಾಂಡ್ಯ ಜೊತೆಯಾದ ಕೆಎಲ್ ರಾಹುಲ್ ಭಾರತವನ್ನು ಗೆಲುವಿನ ದಡ ತಲುಪಿಸಿದ್ದಾರೆ.
Also Read : IPL 2025 RCB : ಐಪಿಎಲ್ 2025 ಕ್ಕೆ ಆರ್‌ಸಿಬಿಯ ಅತ್ಯುತ್ತಮ ಪ್ಲೇಯಿಂಗ್ 11
ಕೇವಲ 34 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ 2 ಸಿಕ್ಸರ್ ಹಾಗೂ 2 ಬೌಂಡರಿ ನೆರವಿನಿಂದ 42ರನ್ ಬಾರಿಸಿದ್ರೆ ಹಾರ್ದಿಕ್ ಪಾಂಡ್ಯ 20 ರನ್ ಬಾರಿಸಿದ್ರು, ಅಂತಿಮವಾಗಿ ಮ್ಯಾಕ್ಸ್‌ವೆಲ್ ಎಸೆತದಲ್ಲಿ ಕೆಎಲ್ ರಾಹುಲ್ ಸಿಕ್ಸರ್ ಬಾರಿಸುವ ಮೂಲಕ ಭಾರತಕ್ಕೆ ಜಯ ದೊರಕಿಸಿದ್ದು ವಿಶೇಷವಾಗಿತ್ತು.

ಅಂತಿಮವಾಗಿ ಭಾರತ ತಂಡ 48.1 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 267ರನ್ ಬಾರಿಸಿ ಗೆಲುವಿನ ನಗೆ ಬೀರಿದೆ. ಈ ಮೂಲಕ ಭಾರತ ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿಯ ಪಟ್ಟಕ್ಕೇರಿದೆ. ಆಸ್ಟ್ರೇಲಿಯಾ ಪರ ನಥನ್ ಎಲ್ಲಿಸ್ ಹಾಗೂ ಆಡಂ ಜಂಪಾ ತಲಾ 2 ವಿಕೆಟ್ ಪಡೆದುಕೊಂಡ್ರೆ, ದಾವರಿಶ್ ಹಾಗೂ ಕೂಪರ್ ತಲಾ 1 ವಿಕೆಟ್ ಪಡೆದಿದ್ದಾರೆ.
Also Read : IPL 2025 Unsold Players: ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದ ಟಾಪ್ ಆಟಗಾರರು..!
ind vs Aus Champions Trophy 2025 India win enter final Kannada News