ರಾಂಚಿ : ನ್ಯೂಜಿಲೆಂಡ್ ವಿರುದ್ದದ ಸರಣಿಯನ್ನು (IND vs NZ T20) ಕ್ಲೀನ್ ಸ್ವೀಪ್ ಮಾಡಿರುವ ಭಾರತ ಇಂದಿನಿಂದ ಟಿ20 ಸರಣಿಯನ್ನು ಆಡಲಿದೆ. ಟೀಂ ಇಂಡಿಯಾವನ್ನು ರೋಹಿತ್ ಶರ್ಮಾ ಸೇರಿದಂತೆ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವವಹಿಸಲಿದ್ದಾರೆ. ರಾಂಚಿಯಲ್ಲಿ ನಡೆಯಲಿರುವ ಮೊದಲ T20 ಪಂದ್ಯ ಆಡುವ ಬಳಗ ಸೇರಿದಂತೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ರಾಂಚಿಯ ಜೆಎಸ್ ಸಿಎ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ ಹೈವೋಲ್ಟೆಜ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಭಾರತ ತಂಡದ ನೇತೃತ್ವವನ್ನು ಹಾರ್ದಿಕ್ ಪಾಂಡ್ಯ ವಹಿಸಿಕೊಳ್ಳುತ್ತಿದ್ರೆ, ನ್ಯೂಜಿಲೆಂಡ್ ತಂಡವನ್ನು ಆಲ್ ರೌಂಡರ್ ಮಿಚೆಲ್ ಸ್ಯಾಂಟ್ನರ್ ಮುನ್ನಡೆಸಲಿದ್ದಾರೆ.
ಭಾರತ ತಂಡ ಯುವ ಆಟಗಾರರನ್ನೇ ಹೊಂದಿದೆ. ಬರೋಬ್ಬರಿ ಒಂದೂವರೆ ವರ್ಷದ ತರುವಾಯ ಪ್ರಥ್ವಿಶಾ ಟೀಂ ಇಂಡಿಯಾಕ್ಕೆ ಮರಳಿದ್ದಾರೆ. ಹೀಗಾಗಿ ಶುಭಮನ್ ಗಿಲ್, ಪ್ರಥ್ವಿ ಶಾ ಹಾಗೂ ಇಶಾನ್ ಕಿಶನ್ ನಡುವೆ ಆರಂಭಿಕ ಆಟಗಾರರ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ. ಇನ್ನೊಂದೆಡೆಯಲ್ಲಿ ಯುಜ್ವೇಂದ್ರ ಚಹಾಲ್ ಹಾಗೂ ಕುಲದೀಪ್ ಯಾದವ್ ನಡುವೆ ಪೈಪೋಟಿ ಏರ್ಪಟ್ಟಿದೆ. ಏಕದಿನ ಸರಣಿಯಲ್ಲಿ ಸ್ಪೋಟಕ ಆಟವನ್ನಾಡಿರುವ ಶುಭಮನ್ ಗಿಲ್ ಇದೀಗ ಟಿ20 ಸರಣಿಯಲ್ಲಿಯೂ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಐಪಿಎಲ್ 2022ಯಲ್ಲಿ ಗುಜರಾತ್ ಟೈಟಾನ್ಸ್ ಪರ ಶುಭಮನ್ ಗಿಲ್ ಉತ್ತಮ ಆಟವಾಡಿದ್ದು, ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಇನ್ನೊಂದೆಡೆಯಲ್ಲಿ ಮಣಿಕಟ್ಟಿನ ಸಮಸ್ಯೆಯಿಂದಾಗಿ ಟೀಂ ಇಂಡಿಯಾದ ಖ್ಯಾತ ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಸರಣಿಯಿಂದ ಹೊರಬಿದ್ದಿದ್ದು, ಪ್ರಥ್ವಿ ಶಾ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಮತ್ತೊಂದೆಡೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದ ನ್ಯೂಜಿಲೆಂಡ್ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಕೇನ್ ವಿಲಿಯಮ್ಸನ್, ಟ್ರೆಂಟ್ ಬೌಲ್ಟ್, ಟಿಮ್ ಸೌಥಿ ಮತ್ತು ಜಿಮ್ಮಿ ನೀಶಮ್ ಅವರಂತಹ ಪ್ರಮುಖ ಆಟಗಾರರ ಅನುಪಸ್ಥಿತಿ ನ್ಯೂಜಿಲೆಂಡ್ ಗೆ ಹೊಡೆತ ಕೊಟ್ಟದೆ. ಇನ್ನೊಂದೆಡೆಯಲ್ಲಿ ರಾಂಚಿಯಲ್ಲಿ ಭಾರತ ಎಂದಿಗೂ ಟಿ20 ಪಂದ್ಯವನ್ನು ಸೋತಿಲ್ಲಿ. ರಾಂಚಿಯ ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಇಲ್ಲಿಯವರೆಗೆ ನಡೆದ ಎಲ್ಲಾ ಮೂರು T20I ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ. ಅಲ್ಲದೇ ಭಾರತವು ನವೆಂಬರ್ 2021 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟಿ20 ಪಂದ್ಯವನ್ನು ಜಯಿಸಿತ್ತು.
IND vs NZ T20 ತಂಡ : Playing XI
ಭಾರತ: ಶುಭಮನ್ ಗಿಲ್, ಇಶಾನ್ ಕಿಶನ್/ ಪ್ರಥ್ವಿಶಾ, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಸಿ), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್
ನ್ಯೂಜಿಲೆಂಡ್: ಡೆವೊನ್ ಕಾನ್ವೇ, ಫಿನ್ ಅಲನ್, ಮಾರ್ಕ್ ಚಾಪ್ಮನ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಡೇನ್ ಕ್ಲೀವರ್, ಮಿಚೆಲ್ ಸ್ಯಾಂಟ್ನರ್ (ಸಿ), ಇಶ್ ಸೋಧಿ, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್
ಇದನ್ನೂ ಓದಿ :ಗೆಳಯನಿಂದಲೇ 44 ಲಕ್ಷ ರೂ. ವಂಚನೆಗೆ ಒಳಗಾದ ಟೀಮ್ ಇಂಡಿಯಾ ವೇಗಿ ಉಮೇಶ್ ಯಾದವ್
ಇದನ್ನೂ ಓದಿ: RCB ಆಟಗಾರ ಮೊಹಮ್ಮದ್ ಸಿರಾಜ್ ವಿಶ್ವದ ನಂ 1 ಬೌಲರ್
IND vs NZ T20 India Vs New Zealand First T20 Match From Today in Ranchi Playing XI