Murder for electricity bill: 3,000 ವಿದ್ಯುತ್ ಬಿಲ್ ಪಾವತಿಸದಿದ್ದಕ್ಕೆ ವ್ಯಕ್ತಿಯ ಕೊಲೆ

ನವದೆಹಲಿ: (Murder for electricity bill) ವ್ಯಕ್ತಿಯೋರ್ವ ವಿದ್ಯುತ್‌ ಬಿಲ್‌ ಪಾವತಿಸಲು ವಿಫಲವಾಗಿದ್ದು, ಆತನಿಗೆ ನಾಲ್ವರು ಥಳಿಸಿದ ಘಟನೆ ಗುರುಗ್ರಾಮ್‌ನ ಘೋಷ್‌ಗಢ ಗ್ರಾಮದಲ್ಲಿ ನಡೆದಿದೆ. ವ್ಯಕ್ತಿ ಇಂದರ್ ಕುಮಾರ್ ಎನ್ನುವಾತ ಕೊಲೆಯಾದ ವ್ಯಕ್ತಿ. ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೇಳೆ ಸಾವನ್ನಪ್ಪಿದ್ದಾನೆ.

ಮೃತ ಇಂದರ್ ಕುಮಾರ್ ಗ್ರಾಮದ ತನ್ನ ಮನೆಯಿಂದಲೇ ದಿನಸಿ ಅಂಗಡಿ ನಡೆಸುತ್ತಿದ್ದು, ನಾಲ್ಕು ದಿನಗಳ ಹಿಂದೆ ಅದೇ ಗ್ರಾಮದ ಸಾಗರ್ ಯಾದವ್ ಎನ್ನುವವರು ಕುಮಾರ್ ಅವರಿಗೆ ವಿದ್ಯುತ್ ಬಿಲ್ ಪಾವತಿಸಲು 19,000 ರೂ ನೀಡಿದ್ದರು. ಆದರೆ, ಕುಮಾರ್ ಅದರಲ್ಲಿ 3,000 ರೂಪಾಯಿ ಖರ್ಚು ಮಾಡಿ ನಂತರ ವಿದ್ಯುತ್‌ ಬಿಲ್ ಪಾವತಿಸಲು ವಿಫಲರಾಗಿದ್ದಾರೆ. ಸೋಮವಾರ, ಯಾದವ್ ಅವರ ಮನೆಗೆ ಬಂದು 16,000 ರೂಗಳನ್ನು ತೆಗೆದುಕೊಂಡು ಉಳಿದ ಮೊತ್ತವನ್ನು ಶೀಘ್ರವಾಗಿ ಹಿಂದಿರುಗಿಸುವಂತೆ ಕುಮಾರ್‌ಗೆ ಎಚ್ಚರಿಕೆ ನೀಡಿದ್ದಾರೆ.

ಆದರೆ ಮಂಗಳವಾರ ರಾತ್ರಿ ಯಾದವ್‌ ಕುಮಾರ್‌ ಗೆ ಕರೆ ಮಾಡಿದ್ದು, ಒಂದು ಗಂಟೆಯ ನಂತರ ಯಾದವ್‌ ಇತರ ಮೂವರೊಂದಿಗೆ ಬಂದು ಕುಮಾರ್‌ ಗೆ ದೊಣ್ಣೆಯಿಂದ ಥಳಿಸಿದ್ದಾರೆ. ಕುಮಾರ್‌ ಇದರಿಂದ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಕುಮಾರ್ ಅವರನ್ನು ಚಿಕಿತ್ಸೆಗಾಗಿ ಪಟೌಡಿಯ ಆಸ್ಪತ್ರೆಗೆ ಸಾಗಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಅಲ್ಲಿಂದ ಅವರನ್ನು ಗುರುಗ್ರಾಮ್ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ವೇಳೆ ಕುಮಾರ್‌ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಮೃತ ಕುಮಾರ್‌ ಸಾಯುವ ಮೊದಲು ಅದೇ ಗ್ರಾಮದ ಯಾದವ್, ಆಜಾದ್, ಮುಖೇಶ್ ಮತ್ತು ಹಿತೇಶ್ ಎನ್ನುವವರು ಹಲ್ಲೆ ನಡೆಸಿರುವುದಾಗಿ ತನ್ನ ತಂದೆಗೆ ತಿಳಿಸಿದ್ದು, ಮೃತ ಕುಮಾರ್‌ ನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಮೃತ ವ್ಯಕ್ತಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಇದೀಗ ಕುಮಾರ್‌ ಮೃತದೇಹದ ಶವ ಪರೀಕ್ಷೆ ಮುಗಿದಿದ್ದು, ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಆದರೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಪೊಲೀಸ್ ತಂಡವು ಬಲೆ ಬೀಸಿರುವುದಾಗಿ ಗುರುಗ್ರಾಮ್ ಪೊಲೀಸ್ ವಕ್ತಾರ ಸುಭಾಷ್ ಬೋಕೆನ್ ವರದಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : Drunk and Drive: ಉಡುಪಿಯಲ್ಲಿ ಕುಡಿದ ಮತ್ತಿನಲ್ಲಿ ಟೆಂಪೋ ಚಲಾಯಿಸಿದ ಚಾಲಕ: ಬೈಕ್ ಸವಾರನಿಂದ ಕಪಾಳಮೋಕ್ಷ

ಇದನ್ನೂ ಓದಿ : Husband surrendered to the police: ‘ನಾನು ನನ್ನ ಹೆಂಡತಿಯನ್ನು ಕೊಂದಿದ್ದೇನೆ’: ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ

ಇದನ್ನೂ ಓದಿ : selfie with the snake: ಯುವಕನ ಜೀವಕ್ಕೆ ಕಂಟಕವಾಯ್ತು ಹಾವಿನೊಂದಿಗೆ ತೆಗೆದ ಆ ಒಂದು ಸೆಲ್ಫಿ

Murder for electricity bill: Murder of a person for non-payment of 3,000 electricity bill

Comments are closed.