ವೆಸ್ಟ್ ಇಂಡೀಸ್ ವಿರುದ್ದ ಸರಣಿಯನ್ನು ವೈಟ್‌ವಾಶ್ ಮಾಡಿದ ಬಳಿಕ ಭಾರತ ಶ್ರೀಲಂಕಾ ವಿರುದ್ದ ಸರಣಿಗೆ ಮುಂದಾಗಿದೆ. ಭಾರತ ಶ್ರೀಲಂಕಾ ವಿರುದ್ದ ಒಟ್ಟು ಮೂರು ಟಿ20 ಪಂದ್ಯ ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಮೂರು ಪಂದ್ಯಗಳ ಸರಣಿ ಟಿ20 ಸರಣಿ ಫೆಬ್ರವರಿ 24 ರಿಂದ ಆರಂಭಗೊಳ್ಳಲಿದೆ. ಆದರೆ ಭಾರತ ಹಾಗೂ ಶ್ರೀಲಂಕಾ (IND vs SL Series))ವಿರುದ್ದ ಸರಣಿಗೆ ಆಯ್ಕೆ ಮಾಡಲಾಗಿದ್ದ ಶ್ರೀಲಂಕಾದ ಖ್ಯಾತ ಆಲ್‌ರೌಂಡರ್ (Vanindu Hasaranga) ವನಿಂದು ಹಸರಂಗಾ ಸರಣಿಯಿಂದ ಹೊರಬಿದ್ದಿದ್ದಾರೆ.
ಮುಂಬರುವ ICC T20 ವಿಶ್ವಕಪ್ 2022ರ ಹಿನ್ನೆಲೆಯಲ್ಲಿ ಈ ಸರಣಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ವಿರಾಟ್ ಕೊಹ್ಲಿ, ಪಂತ್, ರಾಹುಲ್ ಅನುಪಸ್ಥಿತಿಯಲ್ಲಿ ಭಾರತ ತಂಡ ಯುವ ಪಡೆಯನ್ನು ಶ್ರೀಲಂಕಾ ವಿರುದ್ದದ ಸರಣಿಗೆ ಕಣಕ್ಕೆ ಇಳಿಯುತ್ತಿದೆ. ಆದರೆ ಶ್ರೀಲಂಕಾ ತಂಡಕ್ಕೆ ಭರವಸೆಯ ಆಲ್‌ರೌಂಡರ್ ವನಿಂದು ಹಸರಂಗ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಲೆಗ್ ಸ್ಪಿನ್ ಬೌಲಿಂಗ್ ಮಾಡುವ ಹಸರಂಗ ಅವರನ್ನು ಕಳೆದ ಮಂಗಳವಾರ ಕ್ಯಾನ್‌ಬೆರಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾದ ಮೂರನೇ ಟಿ 20 ಪಂದ್ಯದ ಮೊದಲು ಪ್ರತ್ಯೇಕವಾಗಿ ಇರಿಸಲಾಗಿತ್ತು. ಮಂಗಳವಾರ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ನಡೆಸಿದಾಗ ಅವರ ವರದಿಯು ಪಾಟಿಸಿವ್ ಆಗಿತ್ತು. ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ.
ಕೋವಿಡ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ವನಿಂದು ಹಸರಂಗ ಅವರನ್ನು ಕ್ಯಾನ್‌ಬೆರಾದಿಂದ ಮೆಲ್ಬೋರ್ನ್‌ಗೆ ಶೀಫ್ಟ್ ಮಾಡಲಾಗಿದೆ. ಕೋವಿಡ್ ವರದಿ ನೆಗೆಟಿವ್ ಬರುವವರೆಗೆ ಕೂಡ ಅವರನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ. 24 ವರ್ಷದ ವನಿಂದು ಹಸರಂಗ ಶ್ರೀಲಂಕಾ ತಂಡದ ಭರವಸೆಯ ಆಲ್‌ರೌಂಡರ್ ಅಲ್ಲದೇ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಅವರನ್ನು ಬರೋಬ್ಬರಿ 1.44 ಮಿಲಿಯನ್ ಡಾಲರ್‌ಗೆ ಖರೀದಿ ಮಾಡಿದೆ.
ಶ್ರೀಲಂಕಾ ತಂಡ ಸದ್ಯದ ಸ್ಥಿತಿಯಲ್ಲಿ ಉತ್ತಮ ಲಯದಲ್ಲಿಲ್ಲ. ಆಸ್ಟ್ರೇಲಿಯಾ ವಿರುದ್ದ ಐದು ಪಂದ್ಯಗಳ ಐದು ಪಂದ್ಯಗಳ T20 ಸರಣಿಯನ್ನು 1-4 ಅಂತರದಿಂದ ಕಳೆದುಕೊಂಡಿದೆ. ಆದರೆ ಭಾರತ ತಂಡ ರೋಹಿತ್ ಶರ್ಮಾ ನಾಯಕತ್ವದಲ್ಲಿ ವೆಸ್ಟ್ ಇಂಡಿಸ್ ವಿರುದ್ದದ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ.
IND vs SL T20 ವೇಳಾಪಟ್ಟಿ:
1 ನೇ T20 ಅಂತರಾಷ್ಟ್ರೀಯ ಪಂದ್ಯ IND vs SL: ಫೆಬ್ರವರಿ 24, ಲಕ್ನೋ, 7:00 PM IST
2 ನೇ T20 ಅಂತರಾಷ್ಟ್ರೀಯ ಪಂದ್ಯ: ಫೆಬ್ರವರಿ 26, ಧರ್ಮಶಾಲಾ, 7:00 PM IST
3 ನೇ T20 ಅಂತರಾಷ್ಟ್ರೀಯ ಪಂದ್ಯ: ಫೆಬ್ರವರಿ 27, ಧರ್ಮಶಾಲಾ, 7:00 PM IST.
IND vs SL T20I ಸರಣಿಗಾಗಿ ಭಾರತ ತಂಡವು ಈ ಕೆಳಗಿನಂತಿದೆ:
ರೋಹಿತ್ ಶರ್ಮಾ (ನಾಯಕ ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್ ), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಬುಮ್ರಾ (ಉಪನಾಯಕ ), ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮದ್ ಸಿರಾಜ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) , ರವೀಂದ್ರ ಜಡೇಜಾ, ಯಜುವೇಂದ್ರ ಚಹಾಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅವೇಶ್ ಖಾನ್.
ಇದನ್ನೂ ಓದಿ : ವಿಶ್ವ ಚಾಂಪಿಯನ್ ನನ್ನು ಬಗ್ಗುಬಡಿದ ಭಾರತದ ಲಿಟ್ಲ್ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಗ್ನಾನಂದ
ಇದನ್ನೂ ಒದಿ : ಐಪಿಎಲ್ 2022ಕ್ಕೂ ಮೊದಲೇ ಈ ತಂಡದ ಮುಖ್ಯ ಕೋಚ್ ಆಗ್ತಿದ್ದಾರೆ ಕ್ರಿಸ್ ಗೇಲ್
(IND vs SL Series: Top all-rounder Ruled out from T20 series)