Radhika Kumaraswamy video : ಸಂಚಲನ ಮೂಡಿಸಿದೆ ರಾಧಿಕಾ ಕುಮಾರಸ್ವಾಮಿ ಲೈವ್ ವಿಡಿಯೋ

ಸ್ಯಾಂಡಲ್ ವುಡ್ ನ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಹೊಸ ಹೊಸ ರೂಪದಲ್ಲಿ ಚಂದನವನಕ್ಕೆ ಎಂಟ್ರಿಕೊಡುತ್ತಲೇ ಇರುತ್ತಾರೆ. ನಟಿಯಾಗಿ ಕೆರಿಯರ್ ಆರಂಭಿಸಿದ ರಾಧಿಕಾ ಕುಮಾರಸ್ವಾಮಿ ಬಳಿಕ ನಿರ್ಮಾಪಕಿ ಹಾಗೂ ರಿಯಾಲಿಟಿ ಶೋ ಜಡ್ಜ್ ಆಗಿಯೋ ಮಿಂಚಿದ್ದಾರೆ. ಈಗ ಸಾಲು ಸಾಲು ಸಿನಿಮಾ ರಿಲೀಸ್ ಗೆ ಪೆಂಡಿಂಗ್‌ ಇರುವಾಗಲೇ ಅಭಿಮಾನಿಗಳಿಗೆ ರಾಧಿಕಾ ಕುಮಾರಸ್ವಾಮಿ ( Radhika Kumaraswamy video ) ಸಿಹಿಸುದ್ದಿ‌ ನೀಡಿದ್ದಾರೆ. ಇಷ್ಟಕ್ಕೂ ಸ್ವೀಟಿ ಕೊಟ್ಟ ಸ್ವೀಟ್ ನ್ಯೂಸ್ ಏನು ಅಂದ್ರಾ ಈ ಸ್ಟೋರಿ ಓದಿ.

ರಾಧಿಕಾ ಕುಮಾರಸ್ವಾಮಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ ಇನ್ಮುಂದೆ ಸದಾ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ಭರವಸೆ ನೀಡಿದ್ದಾರೆ. ಹೌದು ಮಂಗಳವಾರ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದ ರಾಧಿಕಾ ಕುಮಾರಸ್ವಾಮಿ, ತಮ್ಮ ಹೆಸರಿನಲ್ಲೊಂದು ಫೇಸ್ ಬುಕ್ ಪೇಜ್ ತೆರೆಯುತ್ತಿರುವುದಾಗಿ ನಟಿ ರಾಧಿಕಾ ಘೋಷಿಸಿದ್ದಾರೆ.

ಈಗಾಗಲೇ ರಾಧಿಕಾ ಕುಮಾರಸ್ವಾಮಿ ಹೆಸರಿನಲ್ಲಿ ಸಾಕಷ್ಟು ಖಾತೆಗಳಿವೆ. ಆದರೆ ಈ ವಿಚಾರವನ್ನು ಸ್ಪಷ್ಟಪಡಿಸಿರುವ ರಾಧಿಕಾ ಈಗಾಗಲೇ ನನ್ನ ಹೆಸರಿನಲ್ಲಿ ಸಾಕಷ್ಟು ಖಾತೆಗಳಿವೆ. ಆದರೆ ಇದು ನನ್ನ ಅಧಿಕೃತ ಪೇಜ್. ಇನ್ಮುಂದೆ ನಾನು ನನ್ನ ಎಲ್ಲ ಅಪ್ಡೇಟ್ ಮಾಹಿತಿಯನ್ನು ಇದೇ ಪೇಜ್ ಮೂಲಕ ಹಂಚಿಕೊಳ್ಳಲಿದ್ದೇನೆ. ನನ್ನನ್ನು ಫಾಲೋಮಾಡಿ ಲೈಕ್ಸ್ ಮಾಡಿ ಬೆಳೆಸಿ ಎಂದು ಮನವಿ ‌ಮಾಡಿದ್ದಾರೆ.

ಅಷ್ಟೇ ಅಲ್ಲ ರಾಧಿಕಾ ಕುಮಾರಸ್ವಾಮಿ ಜಡ್ಜ್ ಆಗಿರೋ ಡ್ಯಾನ್ಸ್ ಡ್ಯಾನ್ಸ್ ಜ್ಯೂನಿಯರ್ ರಿಯಾಲಿಟಿ ಶೋದ ಗ್ರ್ಯಾಂಡ್ ಫಿನಾಲೆಯಂದು ಅದೇ ಚಾನೆಲ್ ನಿಂದ ಲೈವ್ ಬರಲಿದ್ದೇನೆ ಎಂದು ರಾಧಿಕಾ ಕುಮಾರಸ್ವಾಮಿ ಮಾಹಿತಿ‌ ನೀಡಿದ್ದಾರೆ. ಇತ್ತೀಚಿಗೆ ನಟಿ ರಾಧಿಕಾ ಕುಮಾರಸ್ವಾಮಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲೂ ಸಖತ್ ಆಕ್ಟಿವ್ ಆಗಿರೋ ರಾಧಿಕಾ ರೆಸಾರ್ಟ್ ವೊಂದರಲ್ಲಿ ಜುಗ್ನು ಹಾಡಿಗೆ ಸಖತ್ ಸ್ಟೆಪ್ ಹಾಕಿ ಗಮನಸೆಳೆದಿದ್ದರು. ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತಷ್ಟು ಸಕ್ರಿಯರಾಗೋ ಮುನ್ಸೂಚನೆ ನೀಡಿದ್ದಾರೆ.

2002 ರಲ್ಲಿ‌ ನಿನಗಾಗಿ ಸಿನಿಮಾದ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟ ರಾಧಿಕಾ ಕುಮಾರಸ್ವಾಮಿ, 2007 ರವರೆಗೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದರು. ಬಳಿಕ ಚಿತ್ರರಂಗದಿಂದ ಬ್ರೇಕ್ ಪಡೆದ ರಾಧಿಕಾ, 2012 ರಲ್ಲಿ ನಿರ್ಮಾಪಕಿಯಾಗಿ ರ್ರೀ ಎಂಟ್ರಿ ಪಡೆದರು. ಮಾತ್ರವಲ್ಲ ಲಕ್ಕಿಯಂತಹ ಸಿನಿಮಾ ನಿರ್ಮಿಸಿ ಗಮನ ಸೆಳೆದಿದ್ದರು. ಸ್ವೀಟಿ ನನ್ ಜೋಡಿ ಸಿನಿಮಾ ನಿರ್ಮಿಸಿ ನಟಿಸಿದರು. ಇತ್ತೀಚಿಗೆ ವರ್ಷಕ್ಕೊಂದರಂತೆ ಸಿನಿಮಾದಲ್ಲಿ ಕಾಣಿಸಿಕೊಳ್ತಿರೋ ರಾಧಿಕಾ ಈ ವರ್ಷ ರಾಜೇಂದ್ರ ಪೊನ್ನಪ್ಪ ಹಾಗೂ ಭೈರಾ ದೇವಿ ಸಿನಿಮಾ ರಿಲೀಸ್ ಗೆ ಕಾದಿದ್ದಾರೆ.

ಇದನ್ನೂ ಓದಿ : ಸೆಟ್ ನಲ್ಲಿ ಮೇಘನಾ ರಾಜ್‌ ಸರ್ಜಾ ನೋಡಿ ಭಾವುಕರಾದ ನಿರ್ದೇಶಕ : ಶಬ್ದ ಸಿನಿಮಾದಲ್ಲಿ ಅಂತಹದ್ದೇನಾಯ್ತು ಗೊತ್ತಾ !

ಇದನ್ನೂ ಓದಿ : ಜೇಮ್ಸ್ ಗೆ ಅದ್ದೂರಿ ಸ್ವಾಗತ : ದೇಶದ ಹಲವೆಡೆ ಗ್ರ್ಯಾಂಡ್ ಫ್ರೀ ರಿಲೀಸ್ ಇವೆಂಟ್ ಆಯೋಜಿಸಿದ ಚಿತ್ರತಂಡ

(sensation created Sandalwood Actress Radhika Kumaraswamy Live Video)

Comments are closed.