ಸೋಮವಾರ, ಏಪ್ರಿಲ್ 28, 2025
HomeSportsCricketIND vs SL Test Highlights : ಅಬ್ಬಾ! ಶ್ರೀಲಂಕಾ ವಿರುದ್ಧ ಗೆದ್ದ ಭಾರತ ತಂಡದ...

IND vs SL Test Highlights : ಅಬ್ಬಾ! ಶ್ರೀಲಂಕಾ ವಿರುದ್ಧ ಗೆದ್ದ ಭಾರತ ತಂಡದ ಫಾರ್ಮ್ ಅದ್ಭುತ!

- Advertisement -

ಇಂದು ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಜರುಗಿದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾವನ್ನು (Ind vs SL Test) ಇನ್ನಿಂಗ್ಸ್ ಮತ್ತು 122 ರನ್‌ಗಳಿಂದ ಭಾರತದ ವಿರುದ್ಧ ಸೋಲನುಭವಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ 174 ರನ್ ಗಳಿಸಿ ಹಿನ್ನೆಡೆ ಅನುಭವಿಸಿದ್ದ ಶ್ರೀಲಂಕಾ ತಂಡವು ಎರಡನೇ ಇನ್ನಿಂಗ್ಸ್‌ನಲ್ಲೂ (IND vs SL Test Highlights) ಹಿನ್ನೆಡೆ ಗಳಿಸಿ ಕೇವಲ 178 ರನ್ ಗಳಿಸಿತು. ಈಮೂಲಕ ಫಾಲೋ ಆನ್‌ಗೆ ಸಿಲುಕಿದ್ದ ಶ್ರೀಲಂಕಾವು ಸೋಲು ಅನುಭವಿಸುವಂತಾಯಿತು.ಮೊದಲ ಟೆಸ್ಟ್ ಪಂದ್ಯದ ಗೆಲುವಿನ ಮೂಲಕ ಭಾರತ ತಂಡವು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ (Test Series) ಆರಂಭದಲ್ಲಿಯೇ ಮುನ್ನಡೆ ಗಳಿಸುವಂತಾಯಿತು.

ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿಯೇ 400 ರನ್‌ಗಳ ಬೃಹತ್ ಮುನ್ನಡೆಯನ್ನು ಗಳಿಸಿತ್ತು. ಭಾರತದಿಂದ ಲಂಕಾ ಫಾಲೋ ಆನ್‌ ಎದುರಿಸಿತ್ತು. ಇಂದಿನ ಪಂದ್ಯದ ಸಾಧನೆಯ ಮೂಲಕ ರವಿಚಂದ್ರನ್ ಅಶ್ವಿನ್ ದಿಗ್ಗಜ ಬೌಲರ್ ಅನಿಲ್ ಕುಂಬ್ಳೆ ಅವರ ನಂತರ ಟೆಸ್ಟ್ ಪಂದ್ಯಾಟದಲ್ಲಿ ಭಾರತದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಜೊತೆಗೆ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಅವರ ಸಾಧನೆಯನ್ನು ಸಹ ರವಿಚಂದ್ರನ್ ಅಶ್ವಿನ್ ಮೀರಿಸಿದರು. ಮೊದಲ ಟೆಸ್ಟ್ ಪಂದ್ಯವು ಇಂದು ಅಂದರೆ ಮೂರೇ ದಿನಕ್ಕೆ ಮುಕ್ತಾಯವಾಗಿದೆ. ಇದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Turmeric lemon face pack : ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಬಳಸಿ ಅರಿಶಿನ – ನಿಂಬು ಫೇಸ್​ಪ್ಯಾಕ್​

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇಂದಿನ ಗೆಲುವಿಗೆ ಆಶ್ಚರ್ಯ ಸೂಚಿಸಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿಗೆ ನೀಡಿದ ಗಿಪ್ಟ್ ಎಂದು ಸಹ ಹೇಳಲಾಗಿದೆ. ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ತಲಾ ನಾಲ್ಕು ವಿಕೆಟ್, ಮೊಹಮ್ಮದ್ ಶಮಿ ಶ್ರೀಲಂಕಾದ ಬ್ಯಾಟರ್‌ಗಳನ್ನು ಎಡಬಿಡದೇ ಕಾಡಿ ವಿಕೆಟ್ ಕಿತ್ತರು. ಈ ಮೂಲಕ ಭಾರತದ ಬೌಲರ್‌ಗಳ ಅದ್ಭುತ ಪ್ರಯತ್ನ ಭಾರತ ತಂಡವನ್ನು ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಲು ಕಾರಣವಾಯಿತು. ಮುಂದಿನ ಟೆಸ್ಟ್ ಪಂದ್ಯದಲ್ಲಿ ಏನಾಗುತ್ತದೆಯೋ ಎಂದು ಎಲ್ಲರೂ ಕಾಯುವಂತೆ ಇಂದಿನ ಫಲಿತಾಂಶ ಮಾಡಿದೆ. ಏಕೆಂದರೆ ಭಾರತ ತಂಡ ಅದ್ಭುತ ಫಾರ್ಮ್ ಪ್ರದರ್ಶಿಸಿದೆ.

ಇದನ್ನೂ ಓದಿ: Mahindra Bolero Luxury Camper: ಮಹೀಂದ್ರಾ ಜೀಪ್‌ನಲ್ಲೇ ಅಡಿಗೆ, ಊಟ, ಸ್ನಾನ, ನಿದ್ದೆ, ಶೌಚ! ಐಷಾರಾಮಿ ಕಾರು ಭಾರತದಲ್ಲೂ ಬಿಡುಗಡೆ

(IND vs SL Test Highlights Jadeja R Ashwin Rohit Sharma Captaincy)

RELATED ARTICLES

Most Popular