ಬರ್ಮಿಂಗ್’ಹ್ಯಾಮ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ 5ನೇ ಟೆಸ್ಟ್ ( India Vs England test match) ಪಂದ್ಯದಲ್ಲಿ ಗೆಲುವಿನ ಅವಕಾಶವನ್ನು ಕೈಚೆಲ್ಲಿದ ಟೀಮ್ ಇಂಡಿಯಾ, 7 ವಿಕೆಟ್’ಗಳ ಸೋಲು ಕಂಡಿದೆ. ಈ ಮೂಲಕ 5 ಪಂದ್ಯಗಳ ಸರಣಿ 2-2ರಲ್ಲಿ ಸಮಬಲಗೊಂಡಿದ್ದು, (Reason behind India’s lost ) ಕ್ರಿಕೆಟ್ ಜನಕರ ನಾಡಿನಲ್ಲಿ 15 ವರ್ಷಗಳ ನಂತರ ಟೆಸ್ಟ್ ಸರಣಿ ಗೆಲ್ಲುವ ಭಾರತದ ಕನಸು ನುಚ್ಚುನೂರಾಗಿದೆ.
ಇಂಗ್ಲೆಂಡ್ ಗೆಲುವಿಗೆ 378 ರನ್”ಗಳ ದೊಡ್ಡ ಟಾರ್ಗೆಟ್ ನೀಡಿದ್ರೂ, ಪಂದ್ಯ ಗೆಲ್ಲಲು ಭಾರತಕ್ಕೆ ಸಾಧ್ಯವಾಗ್ಲಿಲ್ಲ,. ಇಂಗ್ಲೆಂಡ್ ಪರ ಮಾಜಿ ನಾಯಕ ಜೋ ರೂಟ್ (Joe Root) ಮತ್ತು ಜಾನಿ ಬೇರ್’ಸ್ಟೋ (Jonny Bairstow) ಅಮೋಘ ಶತಕಗಳನ್ನು ಬಾರಿಸಿ ಭಾರತ ಕೈಯಿಂದ ಗೆಲುವನ್ನು ಕಸಿದುಕೊಂಡ್ರು. 109 ರನ್ನಿಗೆ 3 ವಿಕೆಟ್ ಪತನಗೊಂಡಿದ್ದ ಸಂದರ್ಭದಲ್ಲಿ ಜೊತೆಗೂಡಿದ್ದ ರೂಟ್ ಮತ್ತು ಬೇರ್’ಸ್ಟೋ ಮುರಿಯದ 4ನೇ ವಿಕೆಟ್’ಗೆ 269 ರನ್’ಗಳ ಜೊತೆಯಾಟವಾಡಿ ಇಂಗ್ಲೆಂಡ್ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ರು. 28ನೇ ಟೆಸ್ಟ್ ಶತಕ ಬಾರಿಸಿದ ಜೋ ರೂಟ್ ಅಜೇಯ 142 ರನ್ ಬಾರಿಸಿದ್ರೆ, 12ನೇ ಟೆಸ್ಟ್ ಶತಕದೊಂದಿಗೆ ಅಬ್ಬರಿಸಿದ ಜಾನಿ ಬೇರ್’ಸ್ಟೋ ಅಜೇಯ 114 ರನ್ ಸಿಡಿಸಿದ್ರು.
ಇಂಗ್ಲೆಂಡ್ ಮೊತ್ತ 153 ರನ್”ಗಳಾಗಿದ್ದಾಗ ಜಾನಿ ಬೇರ್’ಸ್ಟೋ ನೀಡಿದ್ದ ಕ್ಯಾಚನ್ನು 3ನೇ ಸ್ಲಿಪ್’ನಲ್ಲಿ ಹನುಮ ವಿಹಾರಿ ( Hanuma Vihari dropped catch) ಕೈಚೆಲ್ಲಿದ್ದೇ ಭಾರತದ ಸೋಲಿಗೆ ಪ್ರಮುಖ ಕಾರಣ. ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್’ನಲ್ಲಿ ಬೇರ್’ಸ್ಟೋ ನೀಡಿದ ಕ್ಯಾಚನ್ನು ಹನುಮ ವಿಹಾರಿ ಪಡೆದಿದ್ದರೆ, ಪಂದ್ಯದ ಚಿತ್ರಣವೇ ಬದಲಾಗುವ ಸಾಧ್ಯತೆಯಿತು. ಯಾಕಂದ್ರೆ ಆಗಿನ್ನೂ ಬೇರ್’ಸ್ಟೋ ಕೇವಲ 14 ರನ್ ಗಳಿಸಿ ಆಡ್ತಾ ಇದ್ರು.
ಇನ್’ಫಾರ್ಮ್ ಬ್ಯಾಟ್ಸ್’ಮನ್ ಜಾನಿ ಬೇರ್’ಸ್ಟೋ ವಿಕೆಟ್ 38ನೇ ಓವರ್”ನಲ್ಲಿ ಉರುಳಿದ್ದಿದ್ರೆ, ಇಂಗ್ಲೆಂಡ್ ಬ್ಯಾಟಿಂಗ್ ಲೈನಪ್ ಒತ್ತಡಕ್ಕೆ ಸಿಲುಕುವ ಸಾಧ್ಯತೆಯಿತ್ತು. ಆದರೆ ಹನುಮ ವಿಹಾರಿ ಕ್ಯಾಚ್ ಕೈಚೆಲ್ಲಿದ ಕಾರಣ ಭಾರತಕ್ಕೆ ಅದೇ ದುಬಾರಿಯಾಯ್ತು. ಪಂದ್ಯದ ಎರಡೂ ಇನ್ನಿಂಗ್ಸ್”ಗಳಲ್ಲಿ ಶತಕ ಬಾರಿಸಿದ ಜಾನಿ ಬೇರ್’ಸ್ಟೋ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ್ರು.
5 ಪಂದ್ಯಗಳ ಟೆಸ್ಟ್ ಸರಣಿ 2-2ರಲ್ಲಿ ಸಮಬಲಗೊಂಡಿದ್ದು, ಉಭಯ ತಂಡಗಳು ಇದೀಗ ತಲಾ 3 ಪಂದ್ಯಗಳ ಟಿ20 ಹಾಗೂ ಏಕದಿನ ಸರಣಿಗಳಲ್ಲಿ ಮುಖಾಮುಖಿಯಾಗಲಿವೆ. ಟಿ20 ಸರಣಿಯ ಮೊದಲ ಪಂದ್ಯ ಗುರುವಾರ (ಜುಲೈ 7) ಸೌಥಾಂಪ್ಟನ್ ಮೈದಾನದಲ್ಲಿ ನಡೆಯಲಿದೆ. ಕೋವಿಡ್ ಕಾರಣದಿಂದ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದ ನಾಯಕ ರೋಹಿತ್ ಶರ್ಮಾ, ಇದೀಗ ಚೇತರಿಸಿಕೊಂಡಿದ್ದು ಟಿ20 ಹಾಗೂ ಏಕದಿನ ಸರಣಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ.
ಇದನ್ನೂ ಓದಿ : ಕಿಂಗ್ ಕೊಹ್ಲಿ Vs ಸ್ವಿಂಗ್ ಸುಲ್ತಾನ್… ಇದೇ ದಿಗ್ಗಜರ ಕೊನೆಯ ಮುಖಾಮುಖಿ !
ಇದನ್ನೂ ಓದಿ : ವಿಷ್ಣು ದಾದಾ ಎವರ್‌ಗ್ರೀನ್ ಸಾಂಗ್ ಯಾಕೋ ನೆನಪಾಗ್ತಿದೆ ಎಂದ ತಮಿಳುನಾಡು ಕ್ರಿಕೆಟರ್ !
India Vs England test match Reason behind India’s lost Hanuma Vihari dropped catch