ಮಂಗಳವಾರ, ಏಪ್ರಿಲ್ 29, 2025
HomeSportsCricketIndia Vs new Zealand T20: ನಾಳೆ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20, ಭಾರತಕ್ಕೆ ಸರಣಿ...

India Vs new Zealand T20: ನಾಳೆ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20, ಭಾರತಕ್ಕೆ ಸರಣಿ ಮುನ್ನಡೆಯ ನಿರೀಕ್ಷೆ

- Advertisement -

ಮೌಂಟ್ ಮೌಂಗನ್ಯಯ್: ಭಾರತ ಮತ್ತು ಆತಿಥೇಯ ನ್ಯೂಜಿಲೆಂಡ್ (India Vs New Zealand T20) ತಂಡಗಳ ನಡುವಿನ 3 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯ ನಾಳೆ (ಭಾನುವಾರ) ಮೌಂಟ್ ಮೌಂಗನ್ಯುಯ್’ ನಲ್ಲಿರುವ ಬೇ ಓವಲ್ ಮೈದಾನದಲ್ಲಿ ನಡೆಯಲಿದೆ. ವೆಲ್ಲಿಂಗ್ಟನ್’ನಲ್ಲಿ ಶುಕ್ರವಾರ ನಡೆಯಬೇಕಿದ್ದ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗಿದ್ದು, ಕುತೂಹಲ 2ನೇ ಪಂದ್ಯದ ಮೇಲೆ ಶಿಫ್ಟ್ ಆಗಿದೆ.

ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡ ಯುವ ಆಟಗಾರರಿಂದಲೇ ಕೂಡಿದ್ದು ನ್ಯೂಜಿಲೆಂಡನ್ನು ಮಣಿಸುವ ವಿಶ್ವಾಸದಲ್ಲಿದೆ. ಟಿ20 ವಿಶ್ವಕಪ್ ವೈಫಲ್ಯದ ನಂತರ ನಾಯಕ ರೋಹಿತ್ ಶರ್ಮಾ, ಉಪನಾಯಕ ಕೆ.ಎಲ್ ರಾಹುಲ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ನ್ಯೂಜಿಲೆಂಡ್ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ನ್ಯೂಜಿಲೆಂಡ್ ಟೂರ್ ದೊಡ್ಡ ವೇದಿಕೆ.

2024ರ ಟಿ20 ವಿಶ್ವಕಪ್ ಟೂರ್ನಿಗೆ ಈಗಿಂದ್ಲೇ ತಂಡ ಕಟ್ಟುವ ಸಿದ್ಧತೆ ಆರಂಭಿಸಿರುವ ಬಿಸಿಸಿಐ, ಮೊದಲ ಭಾಗವಾಗಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ವಹಿಸಿದೆ. ಮುಂದಿನ ಜನವರಿಯಲ್ಲಿ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಟಿ20 ತಂಡದ ಕಾಯಂ ನಾಯಕನಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ. ಮುಂಬರುವ ದಿನಗಳಲ್ಲಿ ಭಾರತ ಟೆಸ್ಟ್/ ಏಕದಿನ ತಂಡಕ್ಕೆ ಮತ್ತು ಟಿ20 ತಂಡಕ್ಕೆ ಪ್ರತ್ಯೇಕ ನಾಯಕರ ನೇಮಕವಾಗಲಿದೆ.

2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ನಂತರ ರೋಹಿತ್ ಶರ್ಮಾ ಎಲ್ಲಾ ಪ್ರಕಾರಗಳಲ್ಲಿ ನಾಯಕತ್ವ ಕಳೆದುಕೊಳ್ಳಲಿದ್ದು,ಉಪನಾಯಕ ಕೆ.ಎಲ್ ರಾಹುಲ್ ಅಥವಾ ವಿಕೆಟ್ ಕೀಪರ್ ರಿಷಬ್ ಪಂತ್ ಟೆಸ್ಟ್ ಮತ್ತು ಏಕದಿನ ತಂಡದ ನಾಯಕನಾಗಿ ನೇಮಕಗೊಳ್ಳಲಿದ್ದಾರೆ.

India Vs New Zealand T20 : ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI


ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ಉಪನಾಯಕ, ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್/ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್.

ಭಾರತ Vs ನ್ಯೂಜಿಲೆಂಡ್ ಮೊದಲ ಟಿ20
ಪಂದ್ಯ ಆರಂಭ: ಮಧ್ಯಾಹ್ನ 12.00 (ಭಾರತೀಯ ಕಾಲಮಾನ)
ಸ್ಥಳ: ಬೇ ಓವಲ್, ಮೌಂಟ್ ಮೌಂಗನ್ಯಯ್ (Bay Oval, Mount Maunganui)
ನೇರ ಪ್ರಸಾರ: ಅಮೆಜಾನ್ ಪ್ರೈಮ್ ವೀಡಿಯೊ

ಇದನ್ನೂ ಓದಿ : 2023ರ ವಿಶ್ವಕಪ್ ನಂತರ ಏಕದಿನ, ಟೆಸ್ಟ್ ತಂಡಕ್ಕೆ ಕೆ ಎಲ್ ರಾಹುಲ್ ಅಥವಾ ರಿಷಭ್ ಪಂತ್ ಕ್ಯಾಪ್ಟನ್

ಇದನ್ನೂ ಓದಿ : Virat Kohli : ಪತ್ನಿ, ಪುತ್ರಿಯೊಂದಿಗೆ ಉತ್ತರಾಖಂಡ್ ಪ್ರವಾಸದಲ್ಲಿ ಕಿಂಗ್ ಕೊಹ್ಲಿ, ಅಭಿಮಾನಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ವಿರಾಟ್

India Vs new Zealand T20 2nd match India Playing XI Live Telecast Venue Details

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular