ದುಬೈ: ಏಷ್ಯಾ ಕಪ್ ಟೂರ್ನಿಯಲ್ಲಿ (Asia Cup 2022) ಟೀಮ್ ಇಂಡಿಯಾ (Indian Cricket Team) ಆಟಗಾರರಿಗೆ ಕೊಂಚ ಬಿಡುವು ಸಿಕ್ಕಿದ್ದು, ಬಿಡುವಿನ ಸಮಯವನ್ನು ರೋಹಿತ್ ಶರ್ಮಾ (Rohith Sharma) ಬಳಗ ದುಬೈ ಬೀಚ್’ನಲ್ಲಿ ಬಿಂದಾಸ್ ಆಗಿ ಕಳೆದಿದೆ.
ಬುಧವಾರ ದುಬೈ ಅಂತಾರಾಷ್ಟ್ರೀ ಕ್ರೀಡಾಂಗಣದಲ್ಲಿ ನಡೆದ ಹಾಂಕಾಂಗ್ ವಿರುದ್ಧದ ಪಂದ್ಯವನ್ನು 40 ರನ್’ಗಳಿಂದ ಗೆದ್ದಿದ್ದ ಟೀಮ್ ಇಂಡಿಯಾ ’ಎ’ ಗ್ರೂಪ್’ನಿಂದ ಅಜೇಯವಾಗಿ ಸೂಪರ್-4 ಹಂತಕ್ಕೇರಿತ್ತು. ಆ ಪಂದ್ಯದ ನಂತರ ಭಾರತಕ್ಕೆ 3 ದಿನಗಳ ಬಿಡುವು ಸಿಕ್ಕಿದೆ. ಹೀಗಾಗಿ ನಾಯಕ ರೋಹಿತ್ ಶರ್ಮಾ (Rohith Sharma), ಮಾಜಿ ನಾಯಕ ವಿರಾಟ್ ಕೊಹ್ಲಿ(Virat Kohli), ಉಪನಾಯಕ ಕೆ.ಎಲ್ ರಾಹುಲ್(KL Rahul), ಸೂರ್ಯಕುಮಾರ್ ಯಾದವ್(Suryakumar Yadav), ರವೀಂದ್ರ ಜಡೇಜ (Ravindra Jadeja) ಸಹಿತ ಟೀಮ್ ಇಂಡಿಯಾದ ಬಹುತೇಕ ಆಟಗಾರರು ದುಬೈ ಬೀಚ್’ಗೆ ತೆರಳಿದರು. ಬೀಚ್’ನಲ್ಲಿ ವಾಟರ್ ಸರ್ಫಿಂಗ್ ನಡೆಸಿ ಎಂಜಾಯ್ ಮಾಡಿದ್ದಾರೆ. ಈ ವೀಡಿಯೊವನ್ನು ಬಿಸಿಸಿಐ ತನ್ನ ಟ್ವಿಟರ್’ನಲ್ಲಿ ಪ್ರಕಟಿಸಿದೆ.
ವಾಟರ್ ಸರ್ಫಿಂಗ್ ಬಳಿಕ ಟೀಮ್ ಇಂಡಿಯಾ ಆಟಗಾರರು ಬೀಚ್’ನಲ್ಲಿ ವಾಲಿಬಾಲ್ ಆಡಿದ್ದಾರೆ. ಅದರಲ್ಲೂ ಕನ್ನಡಿಗ ಕೆ.ಎಲ್ ರಾಹುಲ್ (KL Rahul)ವಾಲಿಬಾಲ್’ನಲ್ಲೂ ತಮ್ಮ ಕೌಶಲ್ಯ ತೋರಿಸಿದ್ದು ಭರ್ಜರಿ ಸ್ಮ್ಯಾಷ್’ಗಳಿಂದ ಮಿಂಚಿದರು. ಇತ್ತ ಕೋಚ್ ರಾಹುಲ್ ದ್ರಾವಿಡ್ (Rahul Dravid) ಸಹಿತ ತಂಡದ ಸಹಾಯಕ ಸಿಬ್ಬಂದಿ, ಟೀಮ್ ಇಂಡಿಯಾ ಆಟಗಾರರ ವಾಲಿಬಾಲ್ ಮೋಡಿಯನ್ನು ಬೀಚ್’ನಲ್ಲಿ ಕುಳಿತು ವೀಕ್ಷಿಸಿದರು.
ಹಾಲಿ ಚಾಂಪಿಯನ್ ಭಾರತ ತಂಡ ಏಷ್ಯಾ ಕಪ್ (Asia Cup 2022)ಟೂರ್ನಿಯಲ್ಲಿ ಅಜೇಯವಾಗಿ ಸೂಪರ್-4 ಹಂತಕ್ಕೇರಿದೆ. ಕಳೆದ ಭಾನುವಾರ ನಡೆದಿದ್ದ ತನ್ನ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ (Rohith Sharma) ಬಳಗ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 5 ವಿಕೆಟ್’ಗಳಿಂದ ಮಣಿಸಿತ್ತು.
ಇದೇ ಭಾನುವಾರ (ಸೆಪ್ಟೆಂಬರ್ 4) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಸೂಪರ್-4 ಹಂತದ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಬಹುತೇಕ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಶುಕ್ರವಾರ ನಡೆಯುವ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ ಮಾತ್ರ ಸೂಪರ್-4 ಹಂತಕ್ಕೇರಲಿದೆ. ಒಂದು ವೇಳೆ ಪಾಕ್ ಸೋತರೆ, ಸೂಪರ್-4 ಹಂತದಲ್ಲಿ ಭಾರತಕ್ಕೆ ಎದುರಾಳಿ ಹಾಂಕಾಂಗ್.
ಸೆಪ್ಟೆಂಬರ್ 6ರಂದು ನಡೆಯುವ ಪಂದ್ಯದಲ್ಲಿ ಭಾರತಕ್ಕೆ ಎದುರಾಳಿ ’ಬಿ’ ಗ್ರೂಪ್’ನ ಅಗ್ರಸ್ಥಾನಿ ಅಫ್ಘಾನಿಸ್ತಾನ. ಸೆಪ್ಟೆಂಬರ್ 8ರಂದು ನಡೆಯುವ ಪಂದ್ದಲ್ಲಿ ಭಾರತ ತಂಡ ಶ್ರೀಲಂಕಾ ಸವಾಲನ್ನು ಎದುರಿಸಲಿದೆ. ಸೂಪರ್-4 ಹಂತದಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಫೈನಲ್ ಪ್ರವೇಶಿಸಲಿವೆ. ಫೈನಲ್ ಪಂದ್ಯ ಸೆಪ್ಟೆಂಬರ್ 11ರಂದು ನಡೆಯಲಿದೆ.
ಸೂಪರ್-4 ಹಂತದ ವೇಳಾಪಟ್ಟಿ:
- ಅಫ್ಘಾನಿಸ್ತಾನ Vs ಶ್ರೀಲಂಕಾ: 03 ಸೆಪ್ಟೆಂಬರ್, ಶಾರ್ಜಾ
- ಭಾರತ Vs A2: 04 ಸೆಪ್ಟೆಂಬರ್, ದುಬೈ
- ಭಾರತ Vs ಅಫ್ಘಾನಿಸ್ತಾನ: 06 ಸೆಪ್ಟೆಂಬರ್, ದುಬೈ
- A2 Vs ಶ್ರೀಲಂಕಾ: 07 ಸೆಪ್ಟೆಂಬರ್, ದುಬೈ
- ಭಾರತ Vs ಶ್ರೀಲಂಕಾ: 08 ಸೆಪ್ಟೆಂಬರ್, ದುಬೈ
- ಅಫ್ಘಾನಿಸ್ತಾನ Vs A2: 09 ಸೆಪ್ಟೆಂಬರ್, ದುಬೈ
ಇದನ್ನೂ ಓದಿ: ಪ್ರಧಾನಿ ಮಂಗಳೂರು ಭೇಟಿ ವಿಕಾಸ ದರ್ಶನಕ್ಕೋ..?ವಿನಾಸ ದರ್ಶನಕ್ಕೋ..? : ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆ
ಇದನ್ನೂ ಓದಿ: 2018ರಲ್ಲಿ 17 ವರ್ಷ, 2022ರಲ್ಲಿ 19 ವರ್ಷ, ಪಾಕ್ ವೇಗಿಯ ವಯಸ್ಸಿನ ಕಳ್ಳಾಟವನ್ನು ಬಯಲಿಗೆಳೆದ ಪಾಕ್ ಪತ್ರಕರ್ತ
ಇದನ್ನೂ ಓದಿ: ಐಪಿಎಲ್‌ನಲ್ಲಿ ಸೂರ್ಯನನ್ನು ಗುರಾಯಿಸಿದ್ದ ಕಿಂಗ್ ಕೊಹ್ಲಿ ಏಷ್ಯಾ ಕಪ್‌ನಲ್ಲಿ ಅದೇ ಸೂರ್ಯನಿಗೆ ತಲೆ ಬಾಗಿ ನಮಿಸಿದ