ಸೋಮವಾರ, ಏಪ್ರಿಲ್ 28, 2025
HomeSportsCricketWashington Sundar : ಟೀಮ್ ಇಂಡಿಯಾ ಸ್ಟಾರ್ ವಾಷಿಂಗ್ಟನ್ ಸುಂದರ್‌ಗೆ ಒಂದು ಕಿವಿ ಕಿವುಡು; ಅಚ್ಚರಿಯಾದ್ರೂ...

Washington Sundar : ಟೀಮ್ ಇಂಡಿಯಾ ಸ್ಟಾರ್ ವಾಷಿಂಗ್ಟನ್ ಸುಂದರ್‌ಗೆ ಒಂದು ಕಿವಿ ಕಿವುಡು; ಅಚ್ಚರಿಯಾದ್ರೂ ಇದು ಸತ್ಯ

- Advertisement -

ಬೆಂಗಳೂರು: ಟೀಮ್ ಇಂಡಿಯಾದ ಯುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (Washington Sundar) ತಮ್ಮ ಅದ್ಭುತ ಆಟದ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಸದ್ದು ಮಾಡ್ತಿದ್ದಾರೆ. ಆದರೆ ವಾಷಿಂಗ್ಟನ್ ಸುಂದರ್ ಅವರಿಗೆ ಒಂದು ಕಿವಿಯಲ್ಲಿ ಸದ್ದೇ ಕೇಳಿಸಲ್ಲ. ಅರ್ಥಾತ್ ವಾಷಿಂಗ್ಟನ್ ಅವರ ಒಂದು ಕಿವಿ ಇಂದಿಗೂ ಕಿವುಡು.

23 ವರ್ಷದ ವಾಷಿಂಗ್ಟನ್ ಸುಂದರ್ ಇತ್ತಿಚೆಗೆ ಅಂತ್ಯಗೊಂಡ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದರು. ಜಾರ್ಖಂಡ್’ನ ರಾಂಚಿಯಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಆಲ್ರೌಂಡ್ ಆಟದಿಂದ ಮಿಂಚಿದ್ದ ವಾಷಿಂಗ್ಟನ್ ಬೌಲಿಂಗ್’ನಲ್ಲಿ 2 ವಿಕೆಟ್ ಪಡೆದ್ರೆ, ಬ್ಯಾಟಿಂಗ್’ನಲ್ಲೂ ಅಬ್ಬರಿಸಿ ಕೇವಲ 28 ಎಸೆತಗಳಲ್ಲಿ 50 ರನ್ ಸಿಡಿಸಿದ್ದರು. ವಾಷಿಂಗ್ಟನ್ ಸಾಹಸದ ನಡುವೆಯೂ ಭಾರತ 21 ರನ್’ಗಳಿಂದ ಪಂದ್ಯ ಸೋತಿತ್ತು.

ಆಫ್’ಸ್ಪಿನ್ನರ್ ಆಗಿರುವ ವಾಷಿಂಗ್ಟನ್ ಸುಂದರ್ ಕೆಳ ಕ್ರಮಾಂಕದಲ್ಲಿ ಸ್ಫೋಟಕ ಆಟಕ್ಕೆ ಹೆಸರುವಾಸಿ. ಈಗಾಗ್ಲೇ ಕೆಲ ಸ್ಮರಣೀಯ ಇನ್ನಿಂಗ್ಸ್’ಗಳ ಮೂಲಕ ಭರವಸೆ ಮೂಡಿಸಿರುವ ವಾಷಿಂಗ್ಟನ್ ಭಾರತ ತಂಡದ ಭವಿಷ್ಯದ ತಾರೆ. ಕ್ರಿಕೆಟ್ ಮೈದಾನದಲ್ಲಿ ಆಟದಿಂದಲೇ ಸದ್ದು ಮಾಡುವ ವಾಷಿಂಗ್ಟನ್ ಸುಂದರ್ ಅವರಿಗೆ ಒಂದು ಕಿವಿಯಲ್ಲಿ ಸದ್ದೇ ಕೇಳಿಸುವುದಿಲ್ಲ. ಅಚ್ಚರಿಯಾದ್ರೂ ಇದು ಸತ್ಯ. ಈ ವಿಚಾರವನ್ನು ಕೆಲ ವರ್ಷಗಳ ಹಿಂದೆ ಸ್ವತಃ ವಾಷಿಂಗ್ಟನ್ ಸುಂದರ್ ಅವರೇ ಬಹಿರಂಗ ಪಡಿಸಿದ್ದರು.

2017ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ತಮಿಳುನಾಡಿನ ವಾಷಿಂಗ್ಟನ್ ಸುಂದರ್ ಭಾರತ ಪರ 4 ಟೆಸ್ಟ್ ಪಂದ್ಯಗಳನ್ನಾಡಿದ್ದು 265 ರನ್ ಗಳಿದ್ದು, 6 ವಿಕೆಟ್ ಪಡೆದಿದ್ದಾರೆ. 16 ಏಕದಿನ ಪಂದ್ಯಗಳಿಂದ 233 ರನ್ ಗಳಿಸಿರುವ ವಾಷಿಂಗ್ಟನ್ 16 ವಿಕೆಟ್ ಕಬಳಿಸಿದ್ದಾರೆ. 35 ಟಿ20 ಪಂದ್ಯಗಳಿಂದ 107 ರನ್ ಮತ್ತು 29 ವಿಕೆಟ್ ಪಡೆದಿದ್ದಾರೆ. ತಮಿಳುನಾಡಿನ ವಾಷಿಂಗ್ಟನ್’ಗೆ ಈ ಹೆಸರು ಬಂದದ್ದೇ ಸ್ವಾರಸ್ಯಕರ. ತಂದೆಯ ಹೆಸರು ಸುಂದರ್. ಬಾಲ್ಯದಲ್ಲಿ ಪಿ.ಡಿ ವಾಷಿಂಗ್ಟನ್ ಎಂಬ ಹೆಸರಿನ ನಿವೃತ್ತ ಸೇನಾಧಿಕಾರಿಯೊಬ್ಬರು ಕ್ರಿಕೆಟ್ ಆಡಲು ನೆರವು ನೀಡಿದ್ದರಿಂದ ಅವರ ಹೆಸರನ್ನೇ ಸುಂದರ್ ತಮ್ಮ ಮಗನಿಗೆ ಇಟ್ಟಿದ್ದಾರೆ.

ಇದನ್ನೂ ಓದಿ : Shreyas Iyer out : ಭಾರತ Vs ಆಸ್ಟ್ರೇಲಿಯಾ ಪ್ರಥಮ ಟೆಸ್ಟ್‌ನಿಂದ ಶ್ರೇಯಸ್ ಅಯ್ಯರ್ ಔಟ್, ಸೂರ್ಯ ಪದಾರ್ಪಣೆ!

ಇದನ್ನೂ ಓದಿ : Karnataka vs Uttarkhand : ಮೂರೂವರೆ ದಿನಗಳಲ್ಲೇ ಉತ್ತರಾಖಂಡ್ ಉಡೀಸ್, ರಣಜಿ ಟ್ರೋಫಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

Indian cricket Team Player Washington Sundar can hear only with one ear

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular