ಸೋಮವಾರ, ಏಪ್ರಿಲ್ 28, 2025
HomeSportsCricketTaskin Ahmed : ಲಕ್ನೋ ಸೂಪರ್ ಜೈಂಟ್ಸ್‌ಗೆ ಶಾಕ್‌ ಕೊಟ್ಟ ಬಿಸಿಬಿ : ಟಸ್ಕಿನ್ ಅಹ್ಮದ್...

Taskin Ahmed : ಲಕ್ನೋ ಸೂಪರ್ ಜೈಂಟ್ಸ್‌ಗೆ ಶಾಕ್‌ ಕೊಟ್ಟ ಬಿಸಿಬಿ : ಟಸ್ಕಿನ್ ಅಹ್ಮದ್ ಐಪಿಎಲ್‌ ಆಡೋದು ಅನುಮಾನ

- Advertisement -

ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಕೆ.ಎಲ್.ರಾಹುಲ್‌ ನೇತೃತ್ವದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ತಂಡಕ್ಕೆ ಒಂದರ ಮೇಲೊಂದರಂತೆ ಸವಾಲು ಎದುರಾಗುತ್ತಿದೆ. ವೇಗದ ಬೌಲರ್‌ ಮಾರ್ಕ್‌ವುಡ್‌ ಬದಲು ತಂಡಕ್ಕೆ ಸೇರ್ಪಡೆಯಾಗಿದ್ದ ಟಸ್ಕಿನ್ ಅಹ್ಮದ್‌ (Taskin Ahmed) ಸೇರ್ಪಡೆಗೆ ತೊಡಕಾಗಿದ್ದು, ಟಸ್ಕಿನ್ ಅಹ್ಮದ್‌ ಐಪಿಎಲ್‌ ಪಂದ್ಯಾವಳಿಯಲ್ಲಿ ಭಾಗಿಯಾಗಲು ಬಾಂಗ್ಲಾ ಕ್ರಿಕೆಟ್‌ ಮಂಡಳಿ ತೊಡಕಾಗಿ ಪರಿಣಮಿಸಿದೆ.

ಕ್ರಿಕ್‌ಬಜ್‌ನ ವರದಿಯ ಪ್ರಕಾರ ಬಾಂಗ್ಲಾದೇಶವು ದಕ್ಷಿಣ ಆಫ್ರಿಕಾ ಮತ್ತು ಭಾರತದ ವಿರುದ್ಧ ಎರಡು ಪ್ರಮುಖ ಸರಣಿಗಳನ್ನು ಆಡಲಿರುವುದರಿಂದ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸುವುದು ಸರಿಯಲ್ಲ ಎಂದು ಬಿಸಿಬಿ ಕ್ರಿಕೆಟ್ ಕಾರ್ಯಾಚರಣೆಗಳ ಅಧ್ಯಕ್ಷ ಜಲಾಲ್ ಯೂನಸ್ ಹೇಳಿದ್ದಾರೆ. ಬಾಂಗ್ಲಾ ದೇಶ ತಂಡ ದಕ್ಷಿಣ ಆಫ್ರಿಕಾ ಹಾಗೂ ಭಾರತ ವಿರುದ್ದ ಸರಣಿಯನ್ನು ಆಡಲಿದೆ. ಇಂತಹ ಸಂದರ್ಭದಲ್ಲಿ ಅವರು ಐಪಿಎಲ್‌ನಲ್ಲಿ ಭಾಗವಹಿಸುವುದು ಸರಿಯಲ್ಲ ಎಂದು ಜಲಾಲ್‌ ಯೂನಸ್‌ ಹೇಳಿದ್ದಾರೆ.

ನಾವು ಟಸ್ಕಿನ್ ಅಹಮದ್‌ ಅವರ ಜೊತೆಗೆ ಮಾತನಾಡಿದ್ದೇವೆ. ಅವರು ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ಐಪಿಎಲ್‌ ಪಂದ್ಯಾವಳಿಯಲ್ಲಿ ಭಾಗಿಯಾಗುವುದಿಲ್ಲ. ಬದಲಾಗಿ ಅವರು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಲಭ್ಯವಿರುತ್ತಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಅವರು ತವರಿಗೆ ಮರಳಲಿದ್ದಾರೆ ಎಂದಿದ್ದಾರೆ.

ಲಕ್ನೋ ತಂಡಕ್ಕೆ ಬಾಂಗ್ಲಾದೇಶದ ವೇಗದ ತಸ್ಕಿನ್ ಅಹ್ಮದ್ ಬೇಕು ಮತ್ತು ಅದು ಇಡೀ ಐಪಿಎಲ್ 2022 ಸೀಸನ್‌ಗಾಗಿ. ಅವರು ಈ ಪ್ರಸ್ತಾಪವನ್ನು ಒಪ್ಪಿಕೊಂಡರೆ, ದಕ್ಷಿಣ ಆಫ್ರಿಕಾ ವಿರುದ್ಧದ ಮುಂದಿನ ಎರಡು ಟೆಸ್ಟ್‌ಗಳಿಗೆ ಮೊದಲು ಟಸ್ಕಿನ್ ಅಹ್ಮದ್ ಭಾರತಕ್ಕೆ ತೆರಳಬೇಕಾಗುತ್ತದೆ. ಎಂದು ಲಕ್ನೋ ಸೂಪರ್‌ ಜೈಂಟ್ಸ್‌ ( LSG ) ಮಾರ್ಗದರ್ಶಕ ಗೌತಮ್ ಗಂಭೀರ್ ಕಾಲರ್ ಕಾಂತ್‌ಗೆ ಹೇಳಿದರು.

ಲಕ್ನೋ ಸೂಪರ್ ಜೈಂಟ್ಸ್ ತಂಡ : ಕೆಎಲ್ ರಾಹುಲ್ (ನಾಯಕ) , ಮಾರ್ಕಸ್ ಸ್ಟೊಯಿನಿಸ್, ರವಿ ಬಿಷ್ಣೋಯ್, ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಮನೀಶ್ ಪಾಂಡೆ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಅವೇಶ್ ಖಾನ್, ಅಂಕಿತ್ ರಜಪೂತ್, ಕೆ ಗೌತಮ್, ದುಷ್ಮಂತ ಚಮೀರಾ, ಶಹಬಾಜ್ ನದೀಮ್, ಮೊಹ್ ಮನನ್ ವೋಹ್ರಾ, ಮೊಹ್ ಮನನ್ ವೋಹ್ರಾ , ಆಯುಷ್ ಬಡೋನಿ, ಕರಣ್ ಶರ್ಮಾ, ಎವಿನ್ ಲೆವಿಸ್, ಮಯಾಂಕ್ ಯಾದವ್, ಕೈಲ್ ಮೇಯರ್ಸ್.

ಇದನ್ನೂ ಓದಿ : Rohit Sharma : ಖ್ಯಾತ ಆಟಗಾರನ ಜೊತೆ ಇನ್ನಿಂಗ್ಸ್‌ ಆರಂಭಿಸ್ತಾರೆ ರೋಹಿತ್‌ ಶರ್ಮಾ

ಇದನ್ನೂ ಓದಿ : Moeen Ali : ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಬಿಗ್‌ಶಾಕ್‌ : IPL 2022 ರಿಂದ ಹೊರಗುಳಿಯಲಿದ್ದಾರೆ ಆಲ್ ರೌಂಡರ್ ಮೊಯಿನ್ ಅಲಿ

(IPL 2022 BCB clarification About Taskin Ahmed Playing For Lucknow Super Giants ( LSG)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular