ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಳಯದಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ತಂಡದ ಖ್ಯಾತ ಆಟಗಾರ ಹರ್ಷಲ್ ಪಟೇಲ್ (Harshal Patel) ಸಹೋದರಿ ನಿಧನವಾಗಿದ್ದು, ಇದೀಗ ಪಟೇಲ್ ತಮ್ಮ ಕುಟುಂಬವನ್ನು ಸೇರಲು ಬಯೋ ಬಬಲ್ ತೊರೆದಿದ್ದಾರೆ. ಗೆಲುವಿನ ಖುಷಿಯಲ್ಲಿದ್ದ ಬೆಂಗಳೂರು ತಂಡಕ್ಕೆ ಆಘಾತವಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಳೆದ ಬಾರಿಯಿಂದಲೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಹರ್ಷಲ್ ಪಟೇಲ್, ಈ ಬಾರಿಯೂ ಅದೇ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಲ್ಕು ಪಂದ್ಯಗಳ ಪೈಕಿ ಮೂರು ಪಂದ್ಯಗಳನ್ನು ಗೆದ್ದು ಈ ಬಾರಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯನ್ನು ಹುಟ್ಟಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ದದ ಮೊದಲ ಪಂದ್ಯದಲ್ಲಿ36/1, ಎರಡನೇ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ದ ಪಂದ್ಯದಲ್ಲಿ ಹರ್ಷಲ್ ಪಟೇಲ್ 45/2, ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ 18/1 ಹಾಗೂ ಮುಂಬೈ ವಿರುದ್ದದ ಪಂದ್ಯದಲ್ಲಿ 23/2 ವಿಕೆಟ್ ಪಡೆಯಲು ಮೂಲಕ ರಾಯಲ್ ಚಾಲೆಂಜರ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದ ಗೆಲುವಿನ ಬೆನ್ನಲ್ಲೇ ಹರ್ಷಲ್ ಪಟೇಲ್ ಅವರಿಗೆ ಸಹೋದರಿ ನಿಧನದ ಸುದ್ದಿ ತಿಳಿದಿತ್ತು. ಕೂಡಲೇ ಅವರು ಬಯೋ ಬಬಲ್ ತೊರೆದು ಕುಟುಂಬವನ್ನು ಸೇರಿಕೊಂಡಿದ್ದಾರೆ. ಅಂತ್ಯಕ್ರೀಯೆಯ ಬೆನ್ನಲ್ಲೇ ಹರ್ಷಲ್ ಪಟೇಲ್ ಮತ್ತೆ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ. ವರದಿಯ ಪ್ರಕಾರ ಮಂಗಳವಾರ (ಏಪ್ರಿಲ್ 12) ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮೊದಲೇ ಅವರು IPL ಬಯೋ-ಬಬಲ್‌ಗೆ ಮರಳುತ್ತಾರೆ ಎನ್ನಲಾಗುತ್ತಿದೆ.
This is how we stand after playing our first 4️⃣ games in #IPL2022. 👊🏻🤩#PlayBold #WeAreChallengers #Mission2022 #RCB #ನಮ್ಮRCB pic.twitter.com/OTEe06yC2n
— Royal Challengers Bangalore (@RCBTweets) April 10, 2022
ಇದನ್ನೂ ಓದಿ : Anrich Nortje : ಲಕ್ನೋ ವಿರುದ್ದ ಅನ್ರಿಚ್ ನಾಟ್ರೆಜ್ ಅರ್ಧಕ್ಕೆ ಬೌಲಿಂಗ್ ನಿಲ್ಲಿಸಿದ್ದು ಯಾಕೆ ಗೊತ್ತಾ ?
ಇದನ್ನೂ ಓದಿ : IPL 2022 ಗಾಗಿ ದೆಹಲಿ ಕ್ಯಾಪಿಟಲ್ಸ್ ಸೇರಿಕೊಂಡ ಸನ್‌ರೈಸಸ್ ನಾಯಕ
IPL 2022: RCB pacer Harshal Patel leaves bio-bubble following Sister death