ಕೊಚ್ಚಿ: ಐಪಿಎಲ್-2023ರ ಟೂರ್ನಿಗೆ ಆಟಗಾರರ ಹರಾಜು ಪ್ರಕ್ರಿಯೆ ನಾಳೆ (ಡಿಸೆಂಬರ್ 23) ಕೇರಳದ ಕೊಚ್ಚಿಯಲ್ಲಿ ನಡೆಯಲಿದ್ದು, ಒಟ್ಟು 405 ಮಂದಿ ಆಟಗಾರರು ಹರಾಜು (IPL 2023 Auction) ಪಟ್ಟಿಯಲ್ಲಿದ್ದಾರೆ. ಇದರಲ್ಲಿ 273 ಭಾರತೀಯರು ಮತ್ತು 132 ಮಂದಿ ವಿದೇಶಿ ಆಟಗಾರರು ಸೇರಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಒಟ್ಟು 119 ಆಟಗಾರರು ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 10 ತಂಡಗಳಲ್ಲಿ ಒಟ್ಟು 87 ಸ್ಥಾನಗಳು ಖಾಲಿಯಿದ್ದು, ಇದರಲ್ಲಿ 30 ಮಂದಿ ವಿದೇಶಿ ಆಟಗಾರರಿಗೆ ಅವಕಾಶವಿದೆ.
ಐಪಿಎಲ್ ಹರಾಜಿನಲ್ಲಿ ಒಟ್ಟು 19 ಮಂದಿ ವಿದೇಶಿ ಆಟಗಾರರು 2 ಕೋಟಿ ರೂ.ಗಳ ಮೂಲ ಬೆಲೆಯನ್ನು ನಿಗದಿ ಪಡಿಸಿಕೊಂಡಿದ್ದಾರೆ. ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್, ಸ್ಯಾಮ್ ಕರನ್, ಕ್ರಿಸ್ ಜೋರ್ಡನ್, ಆಸ್ಟ್ರೇಲಿಯಾದ ನೇಥನ್ ಕುಲ್ಟರ್’ನೈಲ್, ಕ್ಯಾಮರೂನ್ ಗ್ರೀನ್, ಟ್ರಾವಿಸ್ ಹೆಡ್, ಕ್ರಿಸ್ ಲಿನ್, ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್, ಜೇಮ್ಸ್ ನೀಶಮ್, ದಕ್ಷಿಣ ಆಫ್ರಿಕಾದ ರಾಲೀ ರೊಸೋ, ರಾಸೀ ವಾನ್ ಡರ್ ಡ್ಯುಸೆನ್, ವೆಸ್ಟ್ ಇಂಡೀಸ್’ನ ಜೇಸನ್ ಹೋಲ್ಡನ್ ಮತ್ತು ನಿಕೋಲಸ್ ಪೂರನ್ 2 ಕೋಟಿ ಮೂಲೆ ಬೆಲೆ ಹೊಂದಿರುವ ಆಟಗಾರರ ಪಟ್ಟಿಯಲ್ಲಿದ್ದಾರೆ.
ಆಸ್ಟ್ರೇಲಿಯಾ ಶಾನ್ ಅಬಾಟ್, ರೀಲೀ ಮೆರಿಡಿತ್, ಆಡಂ ಜಾಂಪಾ, ಬಾಂಗ್ಲಾದೇಶದ ಶಾಕಿಬ್ ಅಲ್ ಹಸನ್, ಇಂಗ್ಲೆಂಡ್’ನ ಜೇಸನ್ ರಾಯ್, ಹ್ಯಾರಿ ಬ್ರೂಕ್, ಡಾವಿಡ್ ಮಲಾನ್ ಸಹಿತ ಒಟ್ಟು 11 ಮಂದಿ ಆಟಗಾರರು 1.5 ಕೋಟಿಯ ಮೂಲ ಬೆಲೆ ಹೊಂದಿದ್ದಾರೆ. ಕರ್ನಾಟಕದ ಮನೀಶ್ ಪಾಂಡೆ ಮತ್ತು ಮಯಾಂಕ್ ಅಗರ್ವಾಲ್ ಸೇರಿದಂತೆ 20 ಆಟಗಾರರು 1 ಕೋಟಿ ರೂ. ಮೂಲ ಬೆಲೆ ನಿಗದಿ ಪಡಿಸಿಕೊಂಡಿದ್ದಾರೆ.
ಐಪಿಎಲ್ 2023 ಹರಾಜು :
ಹರಾಜು ಆರಂಭ: ಮಧ್ಯಾಹ್ನ 2.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಜಿಯೊ ಸಿನೆಮಾ
ಹರಾಜು ನಡೆಯುವ ಸ್ಥಳ: ಕೊಚ್ಚಿ, ಕೇರಳ
ಐಪಿಎಲ್ 2023 ಹರಾಜು: ಫ್ರಾಂಚೈಸಿಗಳ ಬಳಿ ಉಳಿದಿರುವ ಮೊತ್ತ :
- ಚೆನ್ನೈ ಸೂಪರ್ ಕಿಂಗ್ಸ್: 20.45 ಕೋಟಿ
- ಡೆಲ್ಲಿ ಕ್ಯಾಪಿಟಲ್ಸ್: 19.45 ಕೋಟಿ
- ಗುಜರಾತ್ ಟೈಟನ್ಸ್: 19.25 ಕೋಟಿ
- ಕೋಲ್ಕತಾ ನೈಟ್ ರೈಡರ್ಸ್: 7.05 ಕೋಟಿ
- ಲಕ್ನೋ ಸೂಪರ್ ಜೈಂಟ್ಸ್: 23.35 ಕೋಟಿ
- ಮುಂಬೈ ಇಂಡಿಯನ್ಸ್: 20.55 ಕೋಟಿ
- ಪಂಜಾಬ್ ಕಿಂಗ್ಸ್: 32.20 ಕೋಟಿ
- ರಾಯಲ್ ಚಾಲೆಂಜರ್ಸ್ ಬೆಂಗಳೂರು: 8.75 ಕೋಟಿ
- ರಾಜಸ್ಥಾನ್ ರಾಯಲ್ಸ್: 13.20 ಕೋಟಿ
- ಸನ್ ರೈಸರ್ಸ್ ಹೈದರಾಬಾದ್: 42.25 ಕೋಟಿ
ಐಪಿಎಲ್ 2023 ಹರಾಜು: ವಿವಿಧ ತಂಡಗಳಲ್ಲಿ ಲಭ್ಯವಿರುವ ಸ್ಥಾನ
- ಚೆನ್ನೈ ಸೂಪರ್ ಕಿಂಗ್ಸ್: 07 (ವಿದೇಶಿ ಆಟಗಾರರು: 02)
- ಡೆಲ್ಲಿ ಕ್ಯಾಪಿಟಲ್ಸ್: 05 (ವಿದೇಶಿ ಆಟಗಾರರು: 02)
- ಗುಜರಾತ್ ಟೈಟನ್ಸ್: 07 (ವಿದೇಶಿ ಆಟಗಾರರು: 03)
- ಕೋಲ್ಕತಾ ನೈಟ್ ರೈಡರ್ಸ್: 11 (ವಿದೇಶಿ ಆಟಗಾರರು: 03)
- ಲಕ್ನೋ ಸೂಪರ್ ಜೈಂಟ್ಸ್: 10 (ವಿದೇಶಿ ಆಟಗಾರರು: 04)
- ಮುಂಬೈ ಇಂಡಿಯನ್ಸ್: 09 (ವಿದೇಶಿ ಆಟಗಾರರು: 03)
- ಪಂಜಾಬ್ ಕಿಂಗ್ಸ್: 09 (ವಿದೇಶಿ ಆಟಗಾರರು: 03)
- ರಾಯಲ್ ಚಾಲೆಂಜರ್ಸ್ ಬೆಂಗಳೂರು: 07 (ವಿದೇಶಿ ಆಟಗಾರರು: 02)
- ರಾಜಸ್ಥಾನ್ ರಾಯಲ್ಸ್: 09 (ವಿದೇಶಿ ಆಟಗಾರರು: 04)
- ಸನ್ ರೈಸರ್ಸ್ ಹೈದರಾಬಾದ್: 13 (ವಿದೇಶಿ ಆಟಗಾರರು: 04)
ಐಪಿಎಲ್ 2023 ಹರಾಜು ಪಟ್ಟಿಯಲ್ಲಿರುವ ಕರ್ನಾಟಕದ ಆಟಗಾರರು:
- ಆಟಗಾರ ಮೂಲಬೆಲೆ
- ಮಯಾಂಕ್ ಅಗರ್ವಾಲ್ 1 ಕೋಟಿ
- ಮನೀಶ್ ಪಾಂಡೆ 1 ಕೋಟಿ
- ಕರುಣ್ ನಾಯರ್ 50 ಲಕ್ಷ
- ಜೆ.ಸುಚಿತ್ 20 ಲಕ್ಷ
- ವಾಸುಕಿ ಕೌಶಿಕ್ 20 ಲಕ್ಷ
- ಮನೋಜ್ ಭಾಂಡಗೆ 20 ಲಕ್ಷ
- ಚೇತನ್ ಎಲ್.ಆರ್ 20 ಲಕ್ಷ
- ಶ್ರೇಯಸ್ ಗೋಪಾಲ್ 20 ಲಕ್ಷ
- ಲವ್ನೀತ್ ಸಿಸೋಡಿಯಾ 20 ಲಕ್ಷ
- ಅನೀಶ್ವರ್ ಗೌತಮ್ 20 ಲಕ್ಷ
- ವಿದ್ವತ್ ಕಾವೇರಪ್ಪ 20 ಲಕ್ಷ
- ವೈಶಾಖ್ ವಿಜಯ್ 20 ಲಕ್ಷ
- ರೋಹನ್ ಪಾಟೀಲ್ 20 ಲಕ್ಷ
- ಬಿ.ಆರ್ ಶರತ್ 20 ಲಕ್ಷ
- ವೆಂಕಟೇಶ್ ಎಂ. 20 ಲಕ್ಷ
- ಶುಭಾಂಗ್ ಹೆಗ್ಡೆ 20 ಲಕ್ಷ
ಇದನ್ನೂ ಓದಿ : Suryakumar Yadav: ರಣಜಿ ಪಂದ್ಯದಲ್ಲೂ ಮುಂದುವರಿದ “ಸೂರ್ಯ” ಶಿಕಾರಿ, ಹತ್ತೇ ರನ್ನಿಂದ ಸೆಂಚುರಿ ಮಿಸ್, ಸಿಗಲಿದ್ಯಾ ಟೆಸ್ಟ್ ಕ್ಯಾಪ್..?
ಇದನ್ನೂ ಓದಿ : Rahul Kohli Drinks Tender Coconut : ಬಾಂಗ್ಲಾದೇಶದಲ್ಲಿ ಎಳನೀರು ಕುಡಿದ ಟೀಮ್ ಇಂಡಿಯಾ ಕ್ಯಾಪ್ಟನ್ ರಾಹುಲ್, ಕಿಂಗ್ ಕೊಹ್ಲಿ
ಐಪಿಎಲ್ 2023 ಹರಾಜು: ಯಾವ ದೇಶದಿಂದ ಎಷ್ಟು ಆಟಗಾರರು ರೇಸ್’ನಲ್ಲಿದ್ದಾರೆ?
- ಭಾರತ : 273
- ಇಂಗ್ಲೆಂಡ್ : 27
- ದಕ್ಷಿಣ ಆಫ್ರಿಕಾ : 22
- ಆಸ್ಟ್ರೇಲಿಯಾ : 21
- ವೆಸ್ಟ್ ಇಂಡೀಸ್ : 20
- ನ್ಯೂಜಿಲೆಂಡ್ : 10
- ಶ್ರೀಲಂಕಾ : 10
- ಅಫ್ಫಾನಿಸ್ತಾನ: 08
- ಬಾಂಗ್ಲಾದೇಶ : 04
- ಐರ್ಲೆಂಡ್ : 04
- ಜಿಂಬಾಬ್ವೆ : 02
- ನಮೀಬಿಯಾ : 02
- ನೆದರ್ಲೆಂಡ್ಸ್ : 01
- ಯುಎಇ : 01
IPL 2023 Auction: IPL players auction tomorrow: Who are the eyes of the franchises on..? Auction time, Live telecast.. Complete information is here