Sexual harassment case: ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ : ವಸತಿ ಶಾಲೆಯ ಪ್ರಾಂಶುಪಾಲ ಅರೆಸ್ಟ್

ಹಾಸನ: (Sexual harassment case) ವಸತಿ ಶಾಲೆಯೊಂದರ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವಸತಿ ಶಾಲೆಯ ಪ್ರಾಂಶುಪಾರನ್ನು‌ ಬಂಧಿಸಿದ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ನಡೆದಿದೆ. ವಸತಿ ಶಾಲೆಯ ಪ್ರಾಂಶುಪಾಲ ಶಿವಕುಮಾರ್ ಬಂಧಿತ ಆರೋಪಿ.

ವಿದ್ಯಾರ್ಥಿನಿಯರ ಜೊತೆ ಅಶ್ಲೀಲ(Sexual harassment case)ವಾಗಿ ಮಾತನಾಡುವುದು, ತಮ್ಮ ವೈಯುಕ್ತಿಕ ಜೀವನದ ಪ್ರೇಮದ ವಿಚಾರಗಳನ್ನು ವಿದ್ಯಾರ್ಥಿಗಳೆದುರು ಹಂಚಿಕೊಳ್ಳುವುದು ಸೇರಿದಂತೆ ಕೆಲವೊಂದು ಗಂಭೀರ ಆರೋಪಗಳನ್ನು ಮಾಡಿರುವ ವಿದ್ಯಾರ್ಥಿಗಳು, ಕ್ರಮಕ್ಕೆ ಆಗ್ರಹಿಸಿದ್ದರು. ನ.26ರಂದು ವಸತಿ ನಿಲಯದ ಸಂರಕ್ಷಕರಿಗೆ ಕರೆ ಮಾಡಿ ವಿದ್ಯಾರ್ಥಿನಿಯೊಬ್ಬಳಿಗೆ ಮೊಬೈಲ್‌ ನೀಡುವಂತೆ ಹೇಳುತ್ತಾರೆ. ನಂತರ, ವಿದ್ಯಾರ್ಥಿಯ ಜೊತೆ ಮಾತನಾಡುತ್ತ, ಅಶ್ಲೀಲವಾಗಿ ಮಾತನಾಡುವುದು, ಮನೆಗೆ ಬರುವಂತೆ ಕರೆಯುವುದು, ಪ್ರೇಮ ನಿವೇದನೆ ಮಾಡಿದ್ದಾರೆಂದು ದೂರಲಾಗಿದೆ.

ಇದರಿಂದಾಗಿ ನೊಂದ ವಿದ್ಯಾರ್ಥಿನಿಯರು ಜಿಲ್ಲಾ ಮಕ್ಕಳ‌ ಕಲ್ಯಾಣ ಸಮಿತಿಗೆ ವಸತಿ ಶಾಲೆ ವಿದ್ಯಾರ್ಥಿನಿಯರು ದೂರು ನೀಡಿದ್ದು, ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಪ್ರಾಂಶುಪಾಲ ಶಿವಕುಮಾರ್‌ ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಶಿವಕುಮಾರ್‌ ವಿರುದ್ದ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Ahmedabad Double Murder : ಆಸ್ಪತ್ರೆಯಲ್ಲಿ ಡಬ್ಬಲ್ ಮರ್ಡರ್ : ಆಪರೇಷನ್ ಥಿಯೇಟರ್ ನಲ್ಲಿ ತಾಯಿ ಮಗಳ ಶವ ಪತ್ತೆ

ಇದನ್ನೂ ಓದಿ : Hubballi accident: ಬುಲ್ಡೋಜರ್ ಗೆ ಬೈಕ್ ಢಿಕ್ಕಿ : ಹೊತ್ತಿ ಉರಿದ ಬೈಕ್, ಸವಾರ ಸಾವು

ಇದನ್ನೂ ಓದಿ : Terrible Accident : ಎರಡು ಶಾಲಾ ಬಸ್‌ಗಳ ನಡುವೆ ಭೀಕರ ಅಪಘಾತ : 15 ವಿದ್ಯಾರ್ಥಿಗಳು ಬಲಿ

ಇದನ್ನೂ ಓದಿ : ಚಿಕ್ಕಮಗಳೂರಿನ ಕೆರೆಯಲ್ಲಿ ಮುಳುಗಿ ತಾಯಿ ಮತ್ತು ಮಗಳು ಸಾವು

ಇದನ್ನೂ ಓದಿ : Assault by students: ಅಯ್ಯಪ್ಪ ಮಾಲಾಧಾರಿಗೆ ವಿದ್ಯಾರ್ಥಿಗಳಿಂದ ಹಲ್ಲೆ: ಮಾಲೆ ಧರಿಸಿ ಶಾಲೆಗೆ ಬರದಂತೆ ಶಿಕ್ಷಕರಿಂದ ಸೂಚನೆ

(Sexual harassment case) The incident of arresting the principal of a residential school on the charge of sexually harassing a minor girl student took place in Arakalagudu taluk of Hassan district. Sivakumar, the principal of the residential school, is the arrested accused.

Comments are closed.