ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ತಂಡದ ಪ್ರಮುಖ ಆಟಗಾರ, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (Dinesh Karthik ಆರೋಗ್ಯದಲ್ಲಿ ಏರುಪೇರು ಕಂಡಿದೆ. ಈ ಕುರಿತು ತಂಡದ ಕೋಚ್ ಸಂಜಯ್ ಬಂಗಾರ್ ಅವರು ಆರೋಗ್ಯದ ಕುರಿತು ಮಾಹಿತಿ ನೀಡಿದ್ದಾರೆ.
ಕಾರ್ತಿಕ್ ಅವರು ಔಟ್ ಆಗಿ ಡಗ್‌ಔಟ್ ಸೇರುತ್ತಿದ್ದಂತೆಯೇ ದಿನೇಶ್ ಕಾರ್ತಿಕ್ ಅವರು ಹಲವು ಬಾರಿ ವಾಂತಿ ಮಾಡಿಕೊಂಡಿದ್ದರು. ಅಲ್ಲದೇ ಕೆಮ್ಮು ಕಾಣಿಸಿಕೊಂಡಿದ್ದರು. ಅನಾರೋಗ್ಯ ದ ಸಮಸ್ಯೆಯ ನಡುವಲ್ಲೇ ದಿನೇಶ್ ಕಾರ್ತಿಕ್ ಅವರು ಕ್ರೀಸ್‌ಗೆ ತೆರಳಿ ಬ್ಯಾಟಿಂಗ್ ನಡೆದಿದ್ದರು. ಮುಂಬೈ ಇಂಡಿಯನ್ಸ್ ತಂಡದ ವಿರುದ್ದ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಭರ್ಜರಿ ಬ್ಯಾಟಿಂಗ್ ನಡೆಸಿದ್ದರು. ನಂತರದಲ್ಲಿ ದಿನೇಶ್ ಕಾರ್ತಿಕ್ ಅವರು ಸ್ಪೋಟಕ ಬ್ಯಾಟಿಂಗ್ ನಡೆಸಿದ್ದರು. ದಿನೇಶ್ ಕಾರ್ತಿಕ್ ಅವರು ಸಿಡಿಸಿದ ೩೦ ರನ್ ನೆರವಿನಿಂದ ಆರ್‌ಸಿಬಿ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 199 ರನ್ ಗಳಿಸಿತ್ತು.
ಅನಾರೋಗ್ಯದ ನಡುವಲ್ಲೇ ದಿನೇಶ್ ಕಾರ್ತಿಕ್ (Dinesh Karthik) ಅವರು ತಂಡಕ್ಕಾಗಿ ಆಡಿದ್ದಾರೆ. ಬ್ಯಾಟಿಂಗ್ ಮಾಡುವ ವೇಳೆಯಲ್ಲಿ ಅವರು ಅಸ್ವಸ್ಥರಾಗಿದ್ದರು. ಅಲ್ಲದೇ ನಿರ್ಲಲೀಕರಣ ಗೊಂಡಿದ್ದರು. ಇನ್ನು ಔಟ್ ಆಗಿ ಡಗ್‌ಔಟ್‌ಗೆ ತೆರಳುವ ವೇಳೆಯಲ್ಲಿಯೂ ದಿನೇಶ್ ಕಾರ್ತಿಕ್ ವಾಂತಿ ಮಾಡಿಕೊಂಡಿದ್ದರು. ಇದೀಗ ದಿನೇಶ್ ಕಾರ್ತಿಕ್ ಅವರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಅವರು ಮುಂದಿನ ಪಂದ್ಯದಲ್ಲಿ ಅವರು ಆಡುತ್ತಾರಾ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ.
ದಿನೇಶ್ ಕಾರ್ತಿಕ್ ಅವರ ಆಟದ ನಡುವಲ್ಲೇ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ದ ಸೋಲನ್ನು ಕಂಡಿತ್ತು. ಇದರಿಂದಾಗಿ ಐಪಿಎಲ್ ಪಾಯಿಂಟ್ಸ್ ಪಟ್ಟಿಯಲ್ಲಿಯೂ ಆರ್‌ಸಿಬಿ ಇಳಿಕೆಯಾಗಿದೆ. ಸದ್ಯ ಐಪಿಎಲ್ ಪಾಯಿಂಟ್ಸ್ ಪಟ್ಟಿಯಲ್ಲಿ ಬೆಂಗಳೂರು ತಂಡ 7 ಸ್ಥಾನದಲ್ಲಿದೆ. ಹೀಗಾಗಿ ಮುಂದಿನ ಪಂದ್ಯಗಳು ಮಹತ್ವದ್ದಾಗಿದೆ. ಸದ್ಯ 11 ಪಂದ್ಯಗಳನ್ನು ಆಡಿರುವ ಗುಜರಾತ್ ಟೈಟಾನ್ಸ್ ತಂಡ 16 ಅಂಕ ಪಡೆಯುವ ಮೂಲಕ ಅಗ್ರಸ್ಥಾನದಲ್ಲಿದೆ. ಉಳಿದಂತೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ವಿರುದ್ದ ಗೆಲುವು ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡನೇ ಸ್ಥಾನದಲ್ಲಿದೆ. ಇನ್ನು ಮುಂಬೈ ಇಂಡಿಯನ್ಸ್ ತಂಡ ಒಟ್ಟು 11 ಪಂದ್ಯಗಳ ಪೈಕಿ 6 ಗೆಲುವು ಕಂಡಿರುವ ಮುಂಬೈ ಇಂಡಿಯ್ಸ್ 12 ಅಂಕಗಳನ್ನು ಪಡೆದು ಮೂರನೇ ಸ್ಥಾನಗಳಿಸಿದೆ. ಉಳಿದಂತೆ ಲಕ್ನೋ ಸೂಪರ್ ಜೈಂಟ್ಸ್ ತಂಡ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಯಾವುದೇ ತಂಡಗಳಿಗೂ ಇನ್ನೂ ಪ್ಲೈ ಆಪ್ ಪ್ರವೇಶದ ಖಚಿತತೆ ಇನ್ನೂ ಸಿಕ್ಕಿಲ್ಲ.
ಇದನ್ನೂ ಓದಿ : Rahul out of WTC final : ರಾಹುಲ್‌ಗೆ ಮತ್ತೊಮ್ಮೆ ಕೈ ಕೊಟ್ಟ ಅದೃಷ್ಟ, WTC ಫೈನಲ್‌ನಿಂದ ಔಟ್
ಇದನ್ನೂ ಓದಿ : ಬಾಕ್ಸಿಂಗ್: ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಮಲ್ಪೆಯ ಕಣ್ಣಿ ಹುಡುಗ ವಿರಾಜ್ ಮೆಂಡನ್