IPL 2023 Final: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ದಾಖಲೆಯ 10 ನೇ ಫೈನಲ್ ತಲುಪಿದೆ. ಕ್ವಾಲಿಫೈಯರ್ 1 ನಲ್ಲಿ ಗುಜರಾತ್ ಟೈಟಾನ್ಸ್ ಅನ್ನು 15 ರನ್‌ಗಳಿಂದ ಸೋಲಿಸಿತು ಮಂಗಳವಾರ ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2023ರ ಕ್ವಾಲಿಫೈಯರ್ 1ನೇ ಪಂದ್ಯದಲ್ಲಿ ನಂತರ ಚೆನ್ನೈ ಸೂಪರ್ ಕಿಂಗ್ಸ್ 15 ರನ್‌ಗಳಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ದಾಖಲೆಯ 10ನೇ ಬಾರಿಗೆ ಐಪಿಎಲ್ ಫೈನಲ್ ( IPL 2023 Final) ತಲುಪಿತು.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆರಂಭಿಕ ಆಟಗಾರರಾದ ರುತುರಾಜ್ ಗಾಯಕ್ವಾಡ್ ಹಾಗೂ ಡಿವೊನ್ ಕಾನ್ವೆ ಉತ್ತಮ ಆರಂಭವೊದಗಿಸಿದ್ರು. ರುತುರಾಜ್ ಗಾಯಕ್ವಾಡ್ 44 ಎಸೆತಗಳಲ್ಲಿ 60 ರನ್ ಬಾರಿಸಿದ್ರೆ, ಡಿವೊನ್ ಕಾನ್ವೆ 34ಎಸೆತಗಳಲ್ಲಿ 40 ರನ್ ಸಿಡಿಸುವ ಮೂಲಕ ಮೊದಲ ವಿಕೆಟ್ ನಷ್ಟಕ್ಕೆ 87 ರನ್ ಬಾರಿಸಿದ್ರು. ನಂತರ ಕಾನ್ವೆ ಔಟಾಗುತ್ತಿದ್ದಂತೆಯೇ ಕ್ರೀಸ್‌ಗೆ ಬಂದ ಶಿವಂ ದುಬೆ ಕೇವಲ 1 ರನ್ ಗೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದ್ರು. ಇನ್ನು ಅಜಿಂಕ್ಯಾ ರಹಾನೆ 17 ಹಾಗೂ ಅಂಬಟಿ ರಾಯಡು 17 ರನ್ ಬಾರಿಸಿದ್ರು. ಅಂತಿಮ ಹಂತದಲ್ಲಿ ರವೀಂದ್ರ ಜಡೇಜಾ 16 ಎಸೆತಗಳಲ್ಲಿ 22 ರನ್ ಬಾರಿಸಿ ತಂಡಕ್ಕೆ ಆಸರೆಯಾದ್ರು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 172 ರನ್ ಬಾರಿಸಿತ್ತು. ಗುಜರಾತ್ ಟೈಟಾನ್ಸ್ ಪರ ಮೊಹಮ್ಮದ್ ಶೆಮಿ ಹಾಗೂ ಮೋಹಿತ್ ಶರ್ಮಾ ತಲಾ ಎರಡು ವಿಕೆಟ್ ಮತ್ತು ದರ್ಶನ್ ನೈಕಂಡೆ, ರಶೀದ್ ಖಾನ್ ಹಾಗೂ ನೂರ್ ಅಹಮ್ಮದ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 173 ರನ್ ಗುರಿಯನ್ನು ಪಡೆದ ಗುಜರಾತ್ ಟೈಟಾನ್ಸ್ ತಂಡಕ್ಕೆ ಆರಂಭಿಕ ಆಟಗಾರರಾದ ವೃದ್ದಿಮಾನ್ ಸಾಹ ಹಾಗೂ ಶುಭಮನ್ ಗಿಲ್ ನಿರಾಸೆ ಮೂಡಿಸಿದ್ದಾರೆ. ಈ ಬಾರಿ ಅತ್ಯುತ್ತಮ ಆಟ ಪ್ರದರ್ಶನ ನೀಡಿದ್ದ ಈ ಆಟಗಾರರು ಮಹತ್ವದ ಪಂದ್ಯದಲ್ಲಿಯೇ ಕೈ ಚೆಲ್ಲಿದ್ದರು. ಸಾಹಾ 12 ರನ್ ಗಳಿಸಿದ್ರೆ, ಶುಭಮನ್ ಗಿಲ್ 38ಎಸೆತಗಳಲ್ಲಿ 42 ರನ್ ಬಾರಿಸಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯ ಮಹತ್ವದ ಪಂದ್ಯದಲ್ಲಿಯೂ ಫಾರ್ಮ್‌ಗೆ ಮರಳಲಿಲ್ಲ. ಇನ್ನು ಶನಕ 17, ಡೇವಿಡ್ ಮಿಲ್ಲರ್ 4 ಹಾಗೂ ವಿಜಯ ಶಂಕರ್ 14 ರನ್ ಬಾರಿಸಿದ್ದಾರೆ.
ರಾಹುಲ್ ತೆವಾಟಿ ಆಟ ಕೇವಲ 3 ಕ್ಕೆ ಸೀಮಿತವಾಯ್ತು. ನಂತರ ರಶೀದ್ ಖಾನ್ 16 ಎಸೆತಗಳಲ್ಲಿ 30 ರನ್ ಬಾರಿಸಿದ್ರೆ ಅಂತಿಮ ಹಂತದಲ್ಲಿ ಶೆಮಿ, ನೂರ್ ಅಹ್ಮದ್ ಹಾಗೂ ದರ್ಶನ್ ತಂಡಕ್ಕೆ ನೆರವಾಗಲೇ ಇಲ್ಲ. ಅಂತಿಮವಾಗಿ ಗುಜರಾತ್ ಟೈಟಾನ್ಸ್ ತಂಡ 20 ಓವರ್ ಗಳಲ್ಲಿ 10 ವಿಕೆಟ್ ಕಳೆದುಕೊಂಡು 157 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಗುಜರಾತ್ ಟೈಟಾನ್ಸ್ ಸೋಲಿಗೆ ಶರಣಾಯ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್‌ಗಳು ಮಾರಕ ದಾಳಿ ನಡೆಸಿದ್ದಾರೆ. ದೀಪಕ್ ಚಹರ್ 29ಕ್ಕೆ 2, ಮಹೇಶ್ ತೀಕ್ಷ್ಣ 28ಕ್ಕೆ 2, ಮಾತೀಶ ಪತಿರಣ 37ಕ್ಕೆ 2, ರವೀಂದ್ರ ಜಡೇಜಾ 18 ಕ್ಕೆ 2 ಹಾಗೂ ತುಷಾರ್ ದೇಶಪಾಂಡೆ 43ಕ್ಕೆ ೧ ವಿಕೆಟ್ ಪಡೆದುಕೊಂಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 2021 ರ ಋತುವಿನಲ್ಲಿ ಕೊನೆಯದಾಗಿ ಫೈನಲ್ ತಲುಪಿತ್ತು. ದುಬೈನಲ್ಲಿ ನಡೆದ ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸುವ ಮೂಲಕ ನಾಲ್ಕನೇ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಆದರೆ ಕಳೆದ ಬಾರಿ 2022 ರ ಆವೃತ್ತಿಯಲ್ಲಿ 10 ತಂಡಗಳ ಪೈಕಿ ಒಂಬತ್ತನೇ ಸ್ಥಾನವನ್ನು ಪಡೆಯುವ ಮೂಲಕ ಐಪಿಎಲ್‌ನಲ್ಲಿ ಎರಡನೇ ಬಾರಿಗೆ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿತ್ತು. ಆದರೆ ಒಂದೇ ವರ್ಷದ ಅವಧಿಯಲ್ಲಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಪುಟಿದೆದ್ದಿದೆ. ಐಪಿಎಲ್‌ನಲ್ಲಿ ಪ್ಲೇಆಫ್ ವ್ಯವಸ್ಥೆಯ ಪ್ರಾರಂಭದ ನಂತರ ಕ್ವಾಲಿಫೈಯರ್ 1 ಪಂದ್ಯಗಳಲ್ಲಿ ಅದರ ಐದನೇ ಜಯ ದಾಖಲಿಸಿದೆ.
ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹತ್ತು ಬಾರಿ ಫೈನಲ್ (IPL 2023 Final) ಪ್ರವೇಶಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನಲ್ಲಿ ಒಟ್ಟು 7 ಕ್ವಾಲಿಫೈಯರ್ ಪಂದ್ಯಗಳನ್ನು ಆಡಿದ್ದು, ಈ ಪೈಕಿ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದು, ಎರಡು ಪಂದ್ಯಗಳಲ್ಲಿ ಸೋಲನ್ನು ಕಂಡಿದೆ.
ಚೆನ್ನೈ ಸೂಪರ್ ಕಿಂಗ್ಸ್ (CSK ) – IPL ಪ್ಲೇಆಫ್ ಪ್ರದರ್ಶನಗಳು :
ಐಪಿಎಲ್ 2023: ಸಿಎಸ್‌ಕೆಯಿಂದ 31 ಐಪಿಎಲ್ ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ಮೊದಲ ಬಾರಿಗೆ ಆಲೌಟ್
2011
ಕ್ವಾಲಿಫೈಯರ್ 1: ಸಿಎಸ್‌ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆರು ವಿಕೆಟ್‌ಗಳಿಂದ ಜಯಗಳಿಸಿತು – ವಾಂಖೆಡೆ ಸ್ಟೇಡಿಯಂ, ಮುಂಬೈ
ಫೈನಲ್: ಸಿಎಸ್‌ಕೆ 58 ರನ್‌ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿತು – ಎಂ. ಎ. ಚಿದಂಬರಂ ಸ್ಟೇಡಿಯಂ, ಚೆನ್ನೈ
2012
ಎಲಿಮಿನೇಟರ್: ಸಿಎಸ್‌ಕೆ ಮುಂಬೈ ಇಂಡಿಯನ್ಸ್ ವಿರುದ್ಧ 38 ರನ್‌ಗಳಿಂದ ಗೆಲುವು ಸಾಧಿಸಿದೆ – ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ಕ್ವಾಲಿಫೈಯರ್ 2: CSK 86 ರನ್‌ಗಳಿಂದ ಡೆಲ್ಲಿ ಡೇರ್‌ಡೆವಿಲ್ಸ್ ಅನ್ನು ಸೋಲಿಸಿತು – M. A. ಚಿದಂಬರಂ ಸ್ಟೇಡಿಯಂ, ಚೆನ್ನೈ
ಫೈನಲ್: CSK ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಐದು ವಿಕೆಟ್‌ಗಳಿಂದ ಸೋತಿತು – M. A. ಚಿದಂಬರಂ ಸ್ಟೇಡಿಯಂ, ಚೆನ್ನೈ
2013
ಕ್ವಾಲಿಫೈಯರ್ 1: CSK 48 ರನ್‌ಗಳಿಂದ ಮುಂಬೈ ಇಂಡಿಯನ್ಸ್ ಅನ್ನು ಸೋಲಿಸಿತು – ಫಿರೋಜ್ ಶಾ ಕೋಟ್ಲಾ, ದೆಹಲಿ
ಫೈನಲ್: ಮುಂಬೈ ಇಂಡಿಯನ್ಸ್ ವಿರುದ್ಧ CSK 23 ರನ್‌ಗಳಿಂದ ಸೋತಿತು – ಈಡನ್ ಗಾರ್ಡನ್ಸ್, ಕೋಲ್ಕತ್ತಾ
2014
ಎಲಿಮಿನೇಟರ್: ಮುಂಬೈ ಇಂಡಿಯನ್ಸ್ ವಿರುದ್ಧ ಸಿಎಸ್‌ಕೆ ಏಳು ವಿಕೆಟ್‌ಗಳಿಂದ ಜಯಗಳಿಸಿತು – ಬ್ರಬೋರ್ನ್ ಸ್ಟೇಡಿಯಂ, ಮುಂಬೈ
ಕ್ವಾಲಿಫೈಯರ್ 2: CSK ಕಿಂಗ್ಸ್ XI ಪಂಜಾಬ್ ವಿರುದ್ಧ 24 ರನ್‌ಗಳಿಂದ ಸೋತಿತು – ವಾಂಖೆಡೆ ಸ್ಟೇಡಿಯಂ, ಮುಂಬೈ
2015
ಕ್ವಾಲ್ಫೈಯರ್ 1: ಮುಂಬೈ ಇಂಡಿಯನ್ಸ್ ವಿರುದ್ಧ CSK 25 ರನ್‌ಗಳಿಂದ ಸೋತಿತು – ವಾಂಖೆಡೆ ಸ್ಟೇಡಿಯಂ, ಮುಂಬೈ
ಕ್ವಾಲ್ಫೈಯರ್ 2: CSK ಮೂರು ವಿಕೆಟ್‌ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಯಿಸಿತು – JSCA ಸ್ಟೇಡಿಯಂ, ರಾಂಚಿ
ಫೈನಲ್: CSK ಮುಂಬೈ ಇಂಡಿಯನ್ಸ್ ವಿರುದ್ಧ 41 ರನ್‌ಗಳಿಂದ ಸೋತಿತು – ಈಡನ್ ಗಾರ್ಡನ್ಸ್, ಕೋಲ್ಕತ್ತಾ
LSG vs MI, IPL 2023 ಎಲಿಮಿನೇಟರ್: ಐದು ಬಾರಿಯ ಚಾಂಪಿಯನ್ ಮುಂಬೈ ನಾಕೌಟ್ ಹಣಾಹಣಿಯಲ್ಲಿ ಲಕ್ನೋವನ್ನು ಎದುರಿಸುತ್ತದೆ
2018
ಕ್ವಾಲಿಫೈಯರ್ 1: CSK ಎರಡು ವಿಕೆಟ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಸೋಲಿಸಿತು – ವಾಂಖೆಡೆ ಸ್ಟೇಡಿಯಂ, ಮುಂಬೈ
ಫೈನಲ್: ಸಿಎಸ್‌ಕೆ ಎಂಟು ವಿಕೆಟ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತು – ವಾಂಖೆಡೆ ಸ್ಟೇಡಿಯಂ, ಮುಂಬೈ
2019
ಕ್ವಾಲಿಫೈಯರ್ 1: ಮುಂಬೈ ಇಂಡಿಯನ್ಸ್ ವಿರುದ್ಧ ಸಿಎಸ್‌ಕೆ ಆರು ವಿಕೆಟ್‌ಗಳಿಂದ ಸೋಲು – ಎಂ. ಎ. ಚಿದಂಬರಂ ಸ್ಟೇಡಿಯಂ, ಚೆನ್ನೈ
ಕ್ವಾಲಿಫೈಯರ್ 2: CSK ದೆಹಲಿ ಕ್ಯಾಪಿಟಲ್ಸ್ ಅನ್ನು ಆರು ವಿಕೆಟ್‌ಗಳಿಂದ ಸೋಲಿಸಿತು – ACA-VDCA ಕ್ರಿಕೆಟ್ ಸ್ಟೇಡಿಯಂ, ವಿಶಾಖಪಟ್ಟಣಂ
ಫೈನಲ್: ಮುಂಬೈ ಇಂಡಿಯನ್ಸ್ ವಿರುದ್ಧ ಸಿಎಸ್‌ಕೆ ಒಂದು ರನ್‌ನಿಂದ ಸೋತಿತು – ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಹೈದರಾಬಾದ್
2021
ಕ್ವಾಲಿಫೈಯರ್ 1: CSK ನಾಲ್ಕು ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸಿತು – ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ
ಫೈನಲ್: CSK 27 ರನ್‌ಗಳಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಸೋಲಿಸಿತು – ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ
2023
ಕ್ವಾಲಿಫೈಯರ್ 1: CSK 15 ರನ್‌ಗಳಿಂದ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸಿತು – M. A. ಚಿದಂಬರಂ ಸ್ಟೇಡಿಯಂ, ಚೆನ್ನೈ
ಇದನ್ನೂ ಓದಿ : WWE ತಾರೆ ಸಾರಾ ಲೀ ಸಾವಿನ ರಹಸ್ಯ ಕೊನೆಗೂ ಬಯಲು
ಇದನ್ನೂ ಓದಿ : ಈ ಬಾರಿಯೂ ನಮಗಿಲ್ಲ ಕಪ್ : ಪ್ಲೇ ಆಫ್‌ನಿಂದ ಹೊರ ಬಿದ್ದ ಆರ್‌ಸಿಬಿ