Ipl 2023: ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ರಮುಖ ತಂಡಗಳಲ್ಲಿ ಒಂದಾಗಿರುವ ಪಂಜಾಬ್ ಕಿಂಗ್ಸ್ ತಂಡವು ಟೀಂ ಇಂಡಿಯಾದ ಮಾಜಿ ಆಟಗಾರ ಹಾಗೂ ಮಾಜಿ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಜೊತೆಗಿ ಒಪ್ಪಂದಕ್ಕೆ ಅಂತ್ಯ ಹಾಡಿದೆ. ಅನಿಲ್ ಕುಂಬ್ಳೆ ಜಾಗಕ್ಕೆ ಪಂಜಾಬ್ ಕಿಂಗ್ಸ್ ಟ್ರೆವೋರ್ ಬೇಲಿಸ್ರನ್ನು ನೇಮಿಸಿದ್ದು ಇವರು 2023ರ ಐಪಿಎಲ್ ಪಂದ್ಯಾವಳಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಟ್ರೇವೋರ್ ಬೇಲಿಸ್ 2019ರಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ಗಳಾಗಿ ಹೊರ ಹೊಮ್ಮಿದ್ದ ಇಂಗ್ಲೆಂಡ್ ತಂಡದ ಕೋಚ್ ಆಗಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೆವೋರ್ ಬೇಲಿಸ್ರಿಗೆ ಹೊಸದೇನಲ್ಲ. ಈ ಹಿಂದೆ ಎರಡು ಬಾರಿ ಐಪಿಎಲ್ ಟ್ರೋಫಿಯನ್ನು ಅಲಂಕರಿಸಿದ ತಂಡಗಳಿಗೆ ಬೇಲಿಸ್ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಪಂಜಾಬ್ ಕಿಂಗ್ಸ್ ತಂಡವು ಟ್ರೆವೋರ್ ಬೇಲಿಸ್ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಇನ್ನು ಪಂಜಾಬ್ ಕಿಂಗ್ಸ್ ತಂಡಕ್ಕೆ ಕೋಚ್ ಆಗಿ ಆಯ್ಕೆ ಆದ ಬಳಿಕ ಪ್ರತಿಕ್ರಿಯೆ ನೀಡಿದ ಟ್ರೆವೋರ್ ಬೇಲಿಸ್, ಪಂಜಾಬ್ ಕಿಂಗ್ಸ್ ತಂಡವು ನನಗೆ ಮುಖ್ಯ ಕೋಚ್ ಸ್ಥಾನ ನೀಡಿರುವುದು ನನಗೆ ತುಂಬಾನೇ ಸಂತಸ ತಂದಿದೆ. ಐಪಿಎಲ್ ಮೊದಲ ಆವೃತ್ತಿಯಿಂದಲೂ ಆಡುತ್ತಿರುವ ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ ಟ್ರೋಫಿಯನ್ನು ಹಿಡಿಯಲು ಹಾತೊರೆಯುತ್ತಿದೆ. ಈ ತಂಡಕ್ಕೆ ಆ ಯಶಸ್ಸನ್ನು ತಂದುಕೊಡಲು ನಾನು ಯತ್ನಿಸುತ್ತೇನೆ ಎಂದು ಹೇಳಿದ್ದಾರೆ .
ಪಂಜಾಬ್ ಕಿಂಗ್ಸ್ ತಂಡವು ಈ ಹಿಂದೆ ಕಿಂಗ್ಸ್ ಇಲೆವನ್ ಪಂಜಾಬ್ ಎಂಬ ಹೆಸರನ್ನು ಹೊಂದಿತ್ತು. ಐಪಿಎಲ್ ಮೊದಲ ಆವೃತ್ತಿಯಿಂದಲೂ ಕಣದಲ್ಲಿರುವ ಈ ತಂಡಕ್ಕೆ ಹೆಸರು ಬದಲಾವಣೆ ಮಾಡಿದರೂ ಹಣಬರಹ ಮಾತ್ರ ಬದಲಾಗಿಲ್ಲ. 2014ರ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದ್ದು ಬಿಟ್ಟರೆ ಪಂಜಾಬ್ ಕಿಂಗ್ಸ್ ಐಪಿಎಲ್ನಲ್ಲಿ ಇನ್ಯಾವ ಗಮನಾರ್ಹ ಸಾಧನೆಯನ್ನು ಮಾಡಿಲ್ಲ. ಪ್ರೀತಿ ಝಿಂಟಾ, ನೆಸ್ ವಾಡಿಯಾ, ಮೋಹಿತ್ ಬುಮ್ರಾ ಹಾಗೂ ಕರುಣ್ ಪಾಲ್ ಜಂಟಿ ನಾಯಕತ್ವವನ್ನು ಹೊಂದಿರುವ ಪಂಜಾಬ್ ಕಿಂಗ್ಸ್ ತಂಡವು ಟ್ರೆವೋರ್ ಬೇಲಿಸ್ ಮಾರ್ಗದರ್ಶನದಲ್ಲಿ ಹೊಸ ಇತಿಹಾಸ ನಿರ್ಮಿಸುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನು ಓದಿ : Ravindra Jadeja: 10 ದಿನಗಳ ನಂತರ ಬೆಡ್‌ನಿಂದ ಮೇಲೆದ್ದು ನಿಂತ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜ
ಇದನ್ನೂ ಓದಿ : woman killed grandmother :ಆನ್ಲೈನ್ ಸಾಲದ ಆ್ಯಪ್ಗಳಿಂದ ಕಿರುಕುಳ : ಸಾಲ ತೀರಿಸಲೆಂದು ಅಜ್ಜಿಯನ್ನೇ ಕೊಂದ ಮೊಮ್ಮಗಳು ಅಂದರ್
Ipl 2023: Trevor Bayliss Replaces Anil Kumble As Head Coach Of Punjab Kings