Indian Cricket Team: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಔಟಾದ್ರೆ ಟಿ20ಯಲ್ಲಿ ಭಾರತ 60 ರನ್ನಿಗೆ ಆಲೌಟ್

ಬೆಂಗಳೂರು:(Indian Cricket Team) ಭಾರತ ಕ್ರಿಕೆಟ್ ತಂಡದ ಟಿ20 ಕ್ರಿಕೆಟ್’ನಲ್ಲಿ ಜಗತ್ತಿನ ಬಲಿಷ್ಠ ತಂಡಗಳಲ್ಲೊಂದು. ಇತ್ತೀಚೆಗೆ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಫೈನಲ್ ತಲುಪುವಲ್ಲಿ ವಿಫಲರಾದ್ರೂ, ಟೀಮ್ ಇಂಡಿಯಾ ಅಪಾಯಕಾರಿ ಎಂಬುದರಲ್ಲಿ ಎರಡು ಮಾತೇ ಇಲ್ಲ.

(Indian Cricket Team)ಆಸ್ಟ್ರೇಲಿಯಾ, ಇಂಗ್ಲೆಂಡ್ ನೆಲಗಳಲ್ಲಿ ಟಿ20 ಸರಣಿ ಗೆದ್ದು ಬಂದಿರುವ ಭಾರತ, 2007ರಲ್ಲಿ ನಡೆದ ಚೊಚ್ಚಲ ಐಸಿಸಿ ಟಿ20 ವಿಶ್ವಕಪ್’ನ ಚಾಂಪಿಯನ್ ತಂಡವೂ ಹೌದು. ಈಗಿನ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ(Rohith Sharma) ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli)ಅವರೇ ಪ್ರಮುಖ ಆಧಾರಸ್ಥಂಭಗಳು. ಇವರನ್ನು ಹೊರತು ಪಡಿಸಿಯೂ ಟೀಮ್ ಇಂಡಿಯಾದಲ್ಲಿ ಕೆ.ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರಿಷಭ್ ಪಂತ್ ಅವರಂತಹ ಸ್ಟಾರ್ ಆಟಗಾರರಿದ್ದಾರೆ. ಇಷ್ಟೊಂದು ಬಲಿಷ್ಠ ಬ್ಯಾಟಿಂಗ್ ಲೈನಪ್ ಬಲ ಭಾರತ ತಂಡಕ್ಕಿದ್ರೂ, ವಿರಾಟ್ ಕೊಹ್ಲಿ(Virat Kohli) ಮತ್ತು ರೋಹಿತ್ ಶರ್ಮಾ (Rohith Sharma)ಔಟಾದ್ರೆ ಟೀಮ್ ಇಂಡಿಯಾ ಟಿ20 ಕ್ರಿಕೆಟ್’ನಲ್ಲಿ 60 ರನ್ನಿಗೆ ಆಲೌಟಾಗಲಿದ್ಯಂತೆ. ಇಂತಹ ಒಂದು ಹಾಸ್ಯಾಸ್ಪದ ಹೇಳಿಕೆ ಕೊಟ್ಟಿರುವ ಮಹಾನುಭಾವ ಅಫ್ಘಾನಿಸ್ತಾನ ತಂಡದ ಮಾಜಿ ನಾಯಕ ಅಸ್ಘರ್ ಅಫ್ಘಾನ್ (Asghar Afghan).

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಫ್ಘಾನಿಸ್ತಾನ ತಂಡದ ಮಾಜಿ ನಾಯಕ (Asghar Afghan). ಅಸ್ಫರ್ ಅಫ್ಘಾನ್, ಭಾರತ ತಂಡದ ಬಗ್ಗೆ ಲಘುವಾಗಿ ಹೇಳಿಕೆ ನೀಡಿದ್ದಾರೆ. ಭಾರತ ತಂಡದ ಶಕ್ತಿಯನ್ನು ಪ್ರಶ್ನಿಸಿದ್ದಾರೆ. “ನಾವು ಭಾರತ ವಿರುದ್ಧ ಆಡುವಾಗಲೆಲ್ಲಾ ನಮ್ಮ ಯೋಜನೆಗಳು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸುತ್ತ ಸುತ್ತುತ್ತಿರುತ್ತವೆ. ಇವರಿಬ್ಬರನ್ನು ಔಟ್ ಮಾಡಿದರೆ ಭಾರತ ತಂಡದ ಫಿನಿಷ್ ಎಂಬುದು ನಮಗೆ ತಿಳಿದಿದೆ. ಹೀಗಾಗಿ ಆರಂಭದಲ್ಲೇ ನಾವು ರೋಹಿತ್ (Rohith Sharma) ಮತ್ತು ಕೊಹ್ಲಿ (Virat Kohli)ವಿರುದ್ಧ ಆಕ್ರಮಣ ನಡೆಸುತ್ತೇವೆ. ವಿಶೇಷ ವಾಗಿ (Virat Kohli)ವಿರಾಟ್ ಕೊಹ್ಲಿ, ಅವರೊಬ್ಬ ಅದ್ಭುತ ಆಟಗಾರ. ಅವರು ಒಮ್ಮೆ ಲಯ ಕಂಡುಕೊಂಡರೆ ಅವರನ್ನು ಮತ್ತೆ ಔಟ್ ಮಾಡುವುದು ಕಷ್ಟ. ಕೊಹ್ಲಿ ಜೊತೆ ರೋಹಿತ್ ಶರ್ಮಾ (Rohith Sharma)ಅವರನ್ನೂ ಬೇಗನೆ ಔಟ್ ಮಾಡಿದರೆ, ಭಾರತಕ್ಕೆ 100-120 ರನ್ ನಷ್ಟವಾಗುತ್ತದೆ. ಆಗ ಭಾರತ ತಂಡ 6-70 ರನ್ನಿಗೆ ಆಲೌಟಾಗುತ್ತದೆ” ಎಂದಿದ್ದಾರೆ.

ಇದನ್ನೂ ಓದಿ :  ಭಾರತ Vs ದಕ್ಷಿಣ ಆಫ್ರಿಕಾ ಟಿ20 ಪಂದ್ಯದಲ್ಲಿ ಬಿಸಿಸಿಐ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ ಸಂಜು ಸ್ಯಾಮ್ಸನ್ ಫ್ಯಾನ್ಸ್

ಇದನ್ನೂ ಓದಿ : 10 ದಿನಗಳ ನಂತರ ಬೆಡ್‌ನಿಂದ ಮೇಲೆದ್ದು ನಿಂತ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜ

ಇದನ್ನೂ ಓದಿ : ಲಂಡನ್‌ನಲ್ಲಿ ವಿರಾಟ್ ಕೊಹ್ಲಿಯನ್ನು ನೋಡಿ ಹೌಹಾರಿದ ಪತ್ನಿಯ ಜೊತೆಗಿದ್ದ ಬಾಲಿವುಡ್ ನಟಿ !

ಇದನ್ನೂ ಓದಿ : ರಾಬಿನ್ ಉತ್ತಪ್ಪ ಅಭಿಮಾನಿಗಳಿಗೆ ಗುಡ್ ನ್ಯೂಸ್.. ನಿವೃತ್ತಿಯಾದರೂ ಮತ್ತೆ ಆಡಲಿದ್ದಾರೆ ಕೊಡಗಿನ ವೀರ

ಇದನ್ನೂ ಓದಿ : ಐಸಿಸಿ ಟಿ20 ವಿಶ್ವಕಪ್ ನಂತರ ಚುಟುಕು ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ?

ಏಷ್ಯಾ ಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಸೂಪರ್-4 ಪಂದ್ಯದದಲ್ಲಿ ಭಾರತ 101 ರನ್’ಗಳ ಭರ್ಜರಿ ಗೆಲುವು ದಾಖಲಿಸಿತ್ತು. ವಿರಾಟ್ ಕೊಹ್ಲಿ ಕೇವಲ 61 ಎಸೆತಗಳಲ್ಲಿ ಅಜೇಯ 122 ರನ್ ಸಿಡಿಸಿದ್ರೆ, ಉಪನಾಯಕ ಕೆ.ಎಲ್ ರಾಹುಲ್ 41 ಎಸೆತಗಳಲ್ಲಿ 62 ರನ್ ಸಿಡಿಸಿ ಅಬ್ಬರಿಸಿದ್ದರು.

Virat Kohli, Rohit Sharma bowl India out for 60 in T20I

Comments are closed.