ಭಾನುವಾರ, ಏಪ್ರಿಲ್ 27, 2025
HomeSportsCricketಐಪಿಎಲ್‌ ಹರಾಜಿಗೆ ಆಟಗಾರರ ಬಿಡುಗಡೆ ಪಟ್ಟಿ : 10 ಐಪಿಎಲ್ ತಂಡಗಳ ಸಂಪೂರ್ಣ ಪಟ್ಟಿ‌ ಇಲ್ಲಿದೆ

ಐಪಿಎಲ್‌ ಹರಾಜಿಗೆ ಆಟಗಾರರ ಬಿಡುಗಡೆ ಪಟ್ಟಿ : 10 ಐಪಿಎಲ್ ತಂಡಗಳ ಸಂಪೂರ್ಣ ಪಟ್ಟಿ‌ ಇಲ್ಲಿದೆ

- Advertisement -

IPL 2024 Auction Players List : ಐಪಿಎಲ್ 2024ರ ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಐಪಿಎಲ್‌ (IPL 2024) ತಂಡಗಳು ಈಗಾಗಲೇ ಹೊಸ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಸಿದ್ದತೆ ನಡೆಸುತ್ತಿವೆ. ಐಪಿಎಲ್ ಹರಾಜು ಪ್ರಕ್ರಿಯೆಗೂ ಮೊದಲೇ ತಂಡಗಳು ಉಳಿಸಿ ಕೊಂಡಿರುವ ಹಾಗೂ ಕೈಬಿಟ್ಟಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ (indian premier league) ತನ್ನ 17ನೇ ಆವೃತ್ತಿಗೆ ಸಜ್ಜಾಗುತ್ತಿದ್ದಂತೆ ಹರಾಜು ಕಾರ್ಯಕ್ಕೆ ಸಿದ್ದತೆ ಜೋರಾಗಿದೆ. ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಈ ಬಾರಿ ಮಿನಿ ಹರಾಜು ಕಾರ್ಯ ನಡೆಯಲಿದ್ದು, ತಂಡಗಳು ತಮ್ಮಲ್ಲಿ ಉಳಿಸಿಕೊಂಡಿರುವ ಹಣದಲ್ಲಿ ಹೊಸ ಆಟಗಾರರನ್ನು ಖರೀದಿ ಮಾಡಲಿವೆ.

IPL 2024 Auction Here is 10 Team Complete Players List
Image Credit to Original Source

ಬಹುತೇಕ ತಂಡಗಳು ಈಗಾಗಲೇ ತಮ್ಮ ತಂಡದಲ್ಲಿ ಉಳಿಸಿ ಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಜೊತೆಗೆ ತಂಡಗಳು ಈಗಾಗಲೇ ಆಟಗಾರರನ್ನು ವಿನಿಮಯ ಮಾಡಿ ಕೊಂಡಿವೆ. ರೊಮಾರಿಯೋ ಶೆಫರ್ಡ್ (INR 50 ಲಕ್ಷ) ಅವರನ್ನು ಲಕ್ನೋ ಸೂಪರ್ ಜೈಂಟ್ಸ್‌ನಿಂದ ಮುಂಬೈ ಇಂಡಿಯನ್ಸ್‌ ಖರೀದಿ ಮಾಡಿದ್ದರೆ, ದೇವದತ್ ಪಡಿಕ್ಕಲ್ (INR 7.5 ಕೋಟಿ) ರಾಜಸ್ಥಾನ ರಾಯಲ್ಸ್‌ನಿಂದ ಲಕ್ನೋ ಸೂಪರ್ ಜೈಂಟ್ಸ್‌ ಖರೀದಿ ಮಾಡಿದೆ.

ಇದನ್ನೂ ಓದಿ : ಐಪಿಎಲ್ 2024 : ನಿವೃತ್ತಿ ಘೋಷಿಸಿದ ಲಕ್ನೋ ಸೂಪರ್ ಜೈಂಟ್ಸ್ ಆರಂಭಿಕ ಆಟಗಾರ

ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಆಟಗಾರ ಆವೇಶ್‌ ಖಾನ್‌ (INR 10 ಕೋಟಿ) ಅವರನ್ನು ಲಕ್ನೋ ಸೂಪರ್ ಜೈಂಟ್ಸ್‌ನಿಂದ ರಾಜಸ್ಥಾನ್ ರಾಯಲ್ಸ್‌ ಖರೀದಿ ಮಾಡಿದೆ. ಗುಜರಾತ್‌ ಟೈಟಾನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಅವರು ಈ ಬಾರಿ ಗುಜರಾತ್‌ ಟೈಟಾನ್ಸ್‌ನಿಂದ ಮುಂಬೈ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಹಾರ್ದಿಕ್ ಪಾಂಡ್ಯ ಅವರ ಖರೀದಿಗಾಗಿ ಮುಂಬೈ ಇಂಡಿಯನ್ಸ್‌ ತಂಡ ಜೋಫ್ರಾ ಆರ್ಚರ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

10 ಐಪಿಎಲ್‌ ತಂಡಗಳು ಬಿಡುಗಡೆ ಮಾಡಿದ ಐಪಿಎಲ್‌ ಆಟಗಾರರ ಪಟ್ಟಿ :

ಚೆನ್ನೈ ಸೂಪರ್ ಕಿಂಗ್ಸ್ (CSK) : ಬೆನ್ ಸ್ಟೋಕ್ಸ್, ಡೆಲ್ಲಿ ಕ್ಯಾಪಿಟಲ್ಸ್ (DC) ಪೃಥ್ವಿ ಶಾ, ಮನೀಶ್ ಪಾಂಡೆ,

ಗುಜರಾತ್ ಟೈಟಾನ್ಸ್ (GT) : ಯಶ್ ದಯಾಳ್, ದಾಸುನ್ ಶನಕ, ಓಡಿಯನ್ ಸ್ಮಿತ್, ಪ್ರದೀಪ್ ಸಾಂಗ್ವಾನ್, ಉರ್ವಿಲ್ ಪಟೇಲ್.

ಪಂಜಾಬ್ ಕಿಂಗ್ಸ್ (PBKS) : ಹರ್‌ಪ್ರೀತ್ ಭಾಟಿಯಾ, ರಿಷಿ ಧವನ್, ಭಾನುಕಾ ರಾಜಪಕ್ಸೆ, ಮ್ಯಾಥ್ಯೂ ಶಾರ್ಟ್, ರಾಜ್ ಅಂಗದ್ ಬಾವಾ.

ಇದನ್ನೂ ಓದಿ : IPL 2024 Auction : ಐಪಿಎಲ್ ಹರಾಜು, ಖ್ಯಾತ ಆಟಗಾರನನ್ನು ಕೈ ಬಿಟ್ಟ RCB

ರಾಜಸ್ಥಾನ್ ರಾಯಲ್ಸ್ (RR) : ಜೇಸನ್ ಹೋಲ್ಡರ್, ಜೋ ರೂಟ್, ಕೆಸಿ ಕಾರಿಯಪ್ಪ, ಮುರುಗನ್ ಅಶ್ವಿನ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) : ಹರ್ಷಲ್ ಪಟೇಲ್, ದಿನೇಶ್ ಕಾರ್ತಿಕ್. ಫಿನ್ ಅಲೆನ್ ಅನುಜ್ ರಾವತ್

ಸನ್ ರೈಸರ್ಸ್ ಹೈದರಾಬಾದ್ (SRH) : ಹ್ಯಾರಿ ಬ್ರೂಕ್.

ಲಕ್ನೋ ಸೂಪರ್ ಜೈಂಟ್ಸ್ (LSG) : ಮಾರ್ಕಸ್ ಸ್ಟೊಯಿನಿಸ್, ಎವಿನ್ ಲೆವಿಸ್, ಕೈಲ್ ಜೇಮಿಸನ್, ಮನೀಶ್ ಪಾಂಡೆ, ಕೆ ಗೌತಮ್, ಐಡೆನ್ ಮಾರ್ಕ್ರಾಮ್.

ಮುಂಬೈ ಇಂಡಿಯನ್ಸ್ (MI) : ಜಯದೇವ್ ಉನದ್ಕತ್, ಇಶಾನ್ ಕಿಶನ್, ಮುರುಗನ್ ಅಶ್ವಿನ್, ರಿಲೆ ಮೆರೆಡಿತ್, ಪಿಯೂಷ್ ಚಾವ್ಲಾ, ಸಂದೀಪ್ ವಾರಿಯರ್.

ಕೋಲ್ಕತ್ತಾ ನೈಟ್‌ ರೈಡರ್ಸ್‌ (KKR) : ಆಂಡ್ರೆ ರಸೆಲ್, ಲಾಕಿ ಫರ್ಗುಸನ್, ಡೇವಿಡ್ ವೈಸ್, ಮನ್‌ದೀಪ್ ಸಿಂಗ್, ನಾರಾಯಣ್ ಜಗದೀಸನ್.

IPL 2024 Auction Here is 10 Team Complete Players List
Image Credit to Original Soruce

ಐಪಿಎಲ್‌ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಎಲ್ಲಾ 10 ತಂಡಗಳು ನವೆಂಬರ್‌ 26ರ ಒಳಗಾಗಿ ತಮ್ಮ ತಂಡದಲ್ಲಿ ಉಳಿಸಿ ಕೊಂಡಿರುವ ಆಟಗಾರರ ಪಟ್ಟಿಯನ್ನು ಐಪಿಎಲ್‌ ಮಂಡಳಿಗೆ ನೀಡಬೇಕಾಗಿದೆ. ಈ ಪಟ್ಟಿಯ ಆಧಾರದಲ್ಲಿ ಐಪಿಎಲ್‌ ಹರಾಜು ಕಾರ್ಯ ನಡೆಯಲಿದೆ. ಈಗಾಗಲೇ ಹಲವು ತಂಡಗಳು ಆಟಗಾರರನ್ನು ಬದಲಾವಣೆ ಮಾಡಿಕೊಂಡಿದ್ದರೆ, ಕೆಲವು ತಂಡಗಳು ಆಟಗಾರರನ್ನು ಬಿಡುಗಡೆ ಮಾಡಿವೆ.

ಇದನ್ನೂ ಓದಿ : IPL 2024 : ಲಕ್ನೋ ಸೂಪರ್‌ ಜೈಂಟ್ಸ್‌ಗೆ ರಾಹುಲ್‌ ದ್ರಾವಿಡ್‌ ಮೆಂಟರ್‌ ? ಐಪಿಎಲ್‌ನತ್ತ ಟೀಂ ಇಂಡಿಯಾ ಕೋಚ್‌ ಚಿತ್ತ

ದುಬೈನಲ್ಲಿ ಡಿಸೆಂಬರ್ 19 ರಂದು IPL 2024 ಹರಾಜಿನಲ್ಲಿ ತಮ್ಮ ತಂಡದಲ್ಲಿ ಇರುವ ಬಜೆಟ್‌ ಆಧಾರದಲ್ಲಿ ಆಟಗಾರರನ್ನು ಖರೀದಿ ಮಾಡಲಾಗುತ್ತದೆ. ಈ ಬಾರಿಯ ಐಪಿಎಲ್‌ನಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ, ಅಪ್ಘಾನಿಸ್ತಾನ ತಂಡಗಳ ಆಟಗಾರ ರಿಗೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆಯಿದೆ.

IPL 2024 Auction Here is 10 Team Complete Players List

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular