ಭಾನುವಾರ, ಏಪ್ರಿಲ್ 27, 2025
HomeSportsCricketIPL Mega Auction 2025 : RCBಗೆ ವಿರಾಟ್‌ ಕೊಹ್ಲಿಯೆ ನಾಯಕ : ಇಲ್ಲಿದೆ ರಾಯಲ್...

IPL Mega Auction 2025 : RCBಗೆ ವಿರಾಟ್‌ ಕೊಹ್ಲಿಯೆ ನಾಯಕ : ಇಲ್ಲಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ತಂಡ

IPL Mega Auction 2025 : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮೆಗಾ ಹರಾಜು (IPL Mega Auction 2025)ಈಗಾಗಲೇ ಮುಕ್ತಾಯಗೊಂಡಿದೆ. ಕೆಎಲ್‌ ರಾಹುಲ್‌ ಸೇರಿದಂತೆ ಹಲವು ಕನ್ನಡಿಗರು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರ್ಪಡೆ ಆಗಬಹುದು ಅನ್ನೋ ನಿರೀಕ್ಷೆ ಹುಸಿಯಾಗಿದೆ.

- Advertisement -

IPL Mega Auction 2025 : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮೆಗಾ ಹರಾಜು (IPL Mega Auction 2025)ಈಗಾಗಲೇ ಮುಕ್ತಾಯಗೊಂಡಿದೆ. ಕೆಎಲ್‌ ರಾಹುಲ್‌ ಸೇರಿದಂತೆ ಹಲವು ಕನ್ನಡಿಗರು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರ್ಪಡೆ ಆಗಬಹುದು ಅನ್ನೋ ನಿರೀಕ್ಷೆ ಹುಸಿಯಾಗಿದೆ. ಆರ್‌ಸಿಬಿ ತಂಡವನ್ನು ನೋಡಿದ್ರೆ ಮಾಜಿ ನಾಯಕ ವಿರಾಟ್‌ ಕೊಹ್ಲಿ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ವಹಿಸೋದು ಪಕ್ಕಾ. ಹಾಗಾದ್ರೆ ಈ ಬಾರಿ ಆರ್‌ಸಿಬಿ ಪಾಳಯ ಸೇರ್ಪಡೆಗೊಂಡಿರುವ ಸಂಪೂರ್ಣ ತಂಡದ ವಿವರ ಇಲ್ಲಿದೆ.

ಐಪಿಎಲ್ 2025ರ ಮೆಗಾ ಹರಾಜಿನ 2 ನೇ ದಿನ 30.65 ಕೋಟಿ ರೂಪಾಯಿ ಪರ್ಸ್‌ನೊಂದಿಗೆ ಹರಾಜಿನಲ್ಲಿ ಪಾಲ್ಗೊಂಡು, ಆಲ್ರೌಂಡರ್‌ ಕೃನಾಲ್ ಪಾಂಡ್ಯ ಅವರನ್ನು 5.75 ಕೋಟಿ ಮೊತ್ತಕ್ಕೆ ತಮ್ಮ ಮೊದಲ ಆಟಗಾರನಾಗಿ ಸಹಿ ಹಾಕಿದರು. ವೇಗಿ ಭುವನೇಶ್ವರ್ ಕುಮಾರ್ ಅವರನ್ನು 10.75 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಳ್ಳುವ ಮೂಲಕ ಫ್ರಾಂಚೈಸಿ ಎಲ್ಲಾ ಪ್ರಚಾರವನ್ನು ಪಡೆದುಕೊಂಡಿತು. ಇಂಗ್ಲೆಂಡ್‌ನ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ RCB ಗೆ ಮೊದಲ ಸಹಿ ಹಾಕಿದರು. 8.75 ಕೋಟಿ ಮೊತ್ತಕ್ಕೆ ಅವರನ್ನು ಖರೀದಿಸಲಾಗಿತ್ತು. ಲಿವಿಂಗ್‌ಸ್ಟೋನ್ ಹೊರತಾಗಿ ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹೇಜಲ್‌ವುಡ್ ಮತ್ತು ರಸಿಖ್ ದಾರ್‌ರನ್ನು ಆರ್‌ಸಿಬಿ ಖರೀದಿಸಿದೆ. ಅವರು ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಮತ್ತು ಯಶ್ ದಯಾಳ್ ಅವರಂತಹ ಹರಾಜಿನ ಮೊದಲು ಉಳಿಸಿಕೊಂಡಿದ್ದರು.

ಇದನ್ನೂ ಓದಿ : ಕೆಎಲ್‌ ರಾಹುಲ್‌ ನಿವೃತ್ತಿ : ಏನಿದು ಹೊಸ ಸಂಚು ?

ಆರ್‌ಸಿಬಿಗೆ ವಿರಾಟ್‌ ಕೊಹ್ಲಿ ನಾಯಕ ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಮೆಗಾ ಹರಾಜಿನಲ್ಲಿ ಸಂಪೂರ್ಣ ಬದಲಾವಣೆಯನ್ನು ಕಂಡಿದೆ. ವಿರಾಟ್‌ ಕೊಹ್ಲಿ ಹೊರತು ಪಡಿಸಿ ಉಳಿದ ಬಹುತೇಕ ಆಟಗಾರರು ಹೊಸಬರು. ಯುವ ಪಡೆಯನ್ನು ಆರ್‌ಸಿಬಿ ಮ್ಯಾನೇಜ್ಮೆಂಟ್‌ ಖರೀದಿ ಮಾಡಿದೆ. ಆದರೆ ಒಂದೆರಡು ಆಟಗಾರರನ್ನು ಹೊರತು ಪಡಿಸಿ ಕನ್ನಡಿಗರು ತಂಡದಲ್ಲಿ ಇಲ್ಲ ಅನ್ನೋದೇ ಬೇಸರದ ಸಂಗತಿ. ಇನ್ನೊಂದೆಡೆಯಲ್ಲಿ ಡುಪ್ಲಸಿಸ್‌ ಈಗಾಗಲೇ ತಂಡದಿಂದ ಹೊರಬಿದ್ದಿದ್ದು, ಮುಂದಿನ ಋತುವಿಗೆ ಆರ್‌ಸಿಬಿ ನಾಯಕ ಯಾರು ಅನ್ನೋದು ಕುತೂಹಲ ಮೂಡಿಸಿದೆ.

ಆರ್‌ಸಿಬಿ ಉನ್ನತ ಮೂಲಗಳ ಮಾಹಿತಿಯ ಪ್ರಕಾರ ವಿರಾಟ್‌ ಕೊಹ್ಲಿ ಆರ್‌ಸಿಬಿ ತಂಡದ ನಾಯಕನಾಗುವುದು ಖಚಿತ. ಕಳೆದ ಎರಡು ಅವಧಿಗೂ ಮುನ್ನ ವಿರಾಟ್‌ ಕೊಹ್ಲಿ ಆರ್‌ಸಿಬಿ ನಾಯಕರಾಗಿದ್ದರು. ಆದರೆ ಸತತ ಸೋಲಿನಿಂದ ಕಂಗೆಟ್ಟು ತಂಡದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಕಳೆದ ಎರಡು ಅವಧಿಯಲ್ಲಿ ಫಾಪ್‌ ಡುಪ್ಲಸಿಸ್‌ ತಂಡವನ್ನು ಮುನ್ನೆಡೆಸಿದ್ದರು. ಆದರೆ ಈ ಬಾರಿಯ ತಂಡದಲ್ಲಿ ಅನುಭವಿ ಆಟಗಾರರ ಕೊರತೆಯಿದ್ದು, ತಂಡವನ್ನು ಸಮರ್ಥವನ್ನು ಮುನ್ನೆಡೆಸುವ ಆಟಗಾರರಿಲ್ಲ. ಇದೇ ಕಾರಣದಿಂದಲೇ ವಿರಾಟ್‌ ಕೊಹ್ಲಿ ಮತ್ತೆ ಆರ್‌ಸಿಬಿ ನಾಯಕನಾಗುವುದು ಖಚಿತ.

ಇದನ್ನೂ ಓದಿ : Vinod Kambli: ಕ್ರಿಕೆಟ್ ದೇವರ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಕಥೆ ಕೇಳಿದ್ರೆ ದಂಗಾಗಿ ಹೋಗ್ತೀರಿ !

Virat Kohli to captain RCB Here is the complete Royal Challengers Bangalore squad
Image Credit to Original Source

IPL 2025 Mega Auction : RCB ಖರೀದಿಸಿದ ಆಟಗಾರರ ಸಂಪೂರ್ಣ ಪಟ್ಟಿ:

  1. ಲಿಯಾಮ್ ಲಿವಿಂಗ್‌ಸ್ಟೋನ್: 8.75 ಕೋಟಿ ರೂ
  2. ಫಿಲ್ ಸಾಲ್ಟ್ – 11.50 ಕೋಟಿ ರೂ
  3. ಜಿತೇಶ್ ಶರ್ಮಾ – 11 ಕೋಟಿ ರೂ
  4. ಜೋಶ್ ಹ್ಯಾಜಲ್‌ವುಡ್ – 12.5 ಕೋಟಿ ರೂ
  5. ರಸಿಖ್ ದಾರ್ – 6 ಕೋಟಿ ರೂ
  6. ಸುಯಶ್ ಶರ್ಮಾ – 2.6 ಕೋಟಿ ರೂ
  7. ಕೃನಾಲ್ ಪಾಂಡ್ಯ – 5.75 ಕೋಟಿ ರೂ
  8. ಭುವನೇಶ್ವರ್ ಕುಮಾರ್ – 10.75 ಕೋಟಿ ರೂ
  9. ಸ್ವಪ್ನಿಲ್ ಸಿಂಗ್ – 50 ಲಕ್ಷ ರೂ
  10. ಟಿಮ್ ಡೇವಿಡ್ – 3 ಕೋಟಿ ರೂ
  11. ರೊಮಾರಿಯೊ ಶೆಫರ್ಡ್ – 1.5 ಕೋಟಿ ರೂ
  12. ನುವಾನ್ ತುಷಾರ – 1.6 ಕೋಟಿ ರೂ
  13. ಮನೋಜ್ ಭಾಂಡಗೆ – 30 ಲಕ್ಷ ರೂ
  14. ಜೇಕಬ್ ಬೆಥೆಲ್ – 2.6 ಕೋಟಿ ರೂ
  15. ದೇವದತ್ ಪಡಿಕ್ಕಲ್ – 2 ಕೋಟಿ ರೂ
  16. ಸ್ವಸ್ತಿಕ್ ಚಿಕಾರ – 30 ಲಕ್ಷ ರೂ
  17. ಲುಂಗಿ ಎನ್‌ಗಿಡಿ – 1 ಕೋಟಿ ರೂ
  18. ಅಭಿನಂದನ್ ಸಿಂಗ್ – 30 ಲಕ್ಷ ರೂ
  19. ಮೋಹಿತ್ ರಥಿ – 30 ಲಕ್ಷ ರೂ

RCB ಉಳಿಸಿಕೊಂಡಿರುವ ಆಟಗಾರರ ಸಂಪೂರ್ಣ ಪಟ್ಟಿ: ವಿರಾಟ್ ಕೊಹ್ಲಿ (21 ಕೋಟಿ ರೂ.), ರಜತ್ ಪಾಟಿದಾರ್ (ರೂ. 11 ಕೋಟಿ), ಯಶ್ ದಯಾಳ್ (ರೂ. 5 ಕೋಟಿ)

RCB ಬಿಡುಗಡೆ ಮಾಡಿದ ಆಟಗಾರರ ಸಂಪೂರ್ಣ ಪಟ್ಟಿ: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮೊಹಮ್ಮದ್ ಸಿರಾಜ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಕ್ಯಾಮೆರಾನ್ ಗ್ರೀನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಮಯಾಂಕ್ ದಾಗರ್, ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ರೀಸ್ ಟೋಪ್ಲಿ, ರಾಜನ್ ಕುಮಾರ್, ಅಲ್ಜಾರಿ ಜೋಸೆಫ್.

IPL Mega Auction 2025 Virat Kohli to captain RCB Here is the complete Royal Challengers Bangalore squad

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular