IPL Mini Auction : ಐಪಿಎಲ್-2023ರಿಂದ ಪ್ಯಾಟ್ ಕಮಿನ್ಸ್ ಔಟ್, ಕೇನ್ ವಿಲಿಯಮ್ಸನ್ ಮೇಲೆ CSK ಕಣ್ಣು

ಬೆಂಗಳೂರು: ಮುಂದಿನ ಆವೃತ್ತಿಯ ಐಪಿಎಲ್ ಟೂರ್ನಿಗಾಗಿ(IPL Mini Auction) ಆಟಗಾರರ ರೀಟೇನ್ ಹಾಗೂ ರಿಲೀಸ್ ಪ್ರಕ್ರಿಯೆಗಳು ನಡೆಯುತ್ತಿವೆ. ಉಳಿಸಿಕೊಂಡ ಹಾಗೂ ರಿಲೀಸ್ ಮಾಡಿದ ಆಟಗಾರರ ಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿಗೆ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿದೆ.

2016ರ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ತಂಡ ನಾಯಕ ಕೇನ್ ವಿಲಿಯಮ್ಸನ್ (Kane Williamson) ಅವರನ್ನೇ ತಂಡದಿಂದ ರಿಲೀಸ್ ಮಾಡಿದೆ. ಸನ್ ರೈಸರ್ಸ್ ತಂಡದಿಂದ ಹೊರ ಬಿದ್ದಿರುವ ವಿಲಿಯಮ್ಸನ್ ಅವರ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಣ್ಣು ಬಿದ್ದಿದೆ. 2023ರ ಐಪಿಎಲ್ ಟೂರ್ನಿಯ ನಂತರ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್’ನಿಂದ ನಿವೃತ್ತಿಯಾಗಲಿದ್ದಾರೆ. ಆಗ ಚೆನ್ನೈ ತಂಡಕ್ಕೆ ಧೋನಿ ಅವರಂತೆ ಕೂಲ್ ಕ್ಯಾಪ್ಟನ್ ಒಬ್ಬನ ಅವಶ್ಯಕತೆಯಿದ್ದು, ಕೇನ್ ವಿಲಿಯಮ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಚಿಂತನೆಯಲ್ಲಿದೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ.

ಮತ್ತೊಂದೆಡೆ ಆಸ್ಟ್ರೇಲಿಯಾ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಐಪಿಎಲ್-2023ರ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಮುಂದಿನ ಸಾಲಿನಲ್ಲಿ ಆಸ್ಟ್ರೇಲಿಯಾ ತಂಡ ಸಾಕಷ್ಟು ಟೆಸ್ಟ್ ಹಾಗೂ ಏಕದಿನ ಪಂದ್ಯಗಳನ್ನಾಡಲಿರುವ ಹಿನ್ನೆಲೆಯಲ್ಲಿ ಐಪಿಎಲ್’ನಿಂದ ಹೊರಗುಳಿಯಲು ಬಯಸಿರುವುದಾಗಿ ಪ್ಯಾಟ್ ಕಮಿನ್ಸ್ ಟ್ವೀಟ್ ಮಾಡಿದ್ದಾರೆ. ಮುಂದಿನ ವರ್ಷ ಭಾರತದಲ್ಲೇ ನಡೆಯಲಿರುವ ಏಕದಿನ ವಿಶ್ವಕಪ್ ಹಾಗೂ ಇಂಗ್ಲೆಂಡ್’ನಲ್ಲಿ ನಡೆಯಲಿರುವ ಆಶಸ್ ಟೆಸ್ಟ್ ಸರಣಿ ಹಿನ್ನೆಲೆಯಲ್ಲಿ ಐಪಿಎಲ್’ನಿಂದ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ಪ್ಯಾಟ್ ಕಮಿನ್ಸ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ ಪ್ಯಾಟ್ ಕಮಿನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದರು.ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಿರಿಯ ಆಲ್ರೌಂಡರ್ ಡ್ವೇನ್ ಬ್ರಾವೊ ಮತ್ತು ಅನುಭವಿ ಬ್ಯಾಟ್ಸ್’ಮನ್ ಅಂಬಾಟಿ ರಾಯುಡು ಅವರನ್ನು ತಂಡದಿಂದ ರಿಲೀಸ್ ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಶಾರ್ದೂಲ್ ಠಾಕೂರ್ ಅವರನ್ನು ರಿಲೀಸ್ ಮಾಡಿದ್ದು, ಕೋಲ್ಕತಾ ನೈಟ್ ರೈಡರ್ಸ್ ಬಳಗ ಸೇರಿಕೊಂಡಿದ್ದಾರೆ. ಗುಜರಾತ್ ಟೈಟನ್ಸ್ ತಂಡದಲ್ಲಿದ್ದ ನ್ಯೂಜಿಲೆಂಡ್ ವೇಗಿ ಲ್ಯೂಕಿ ಫರ್ಗ್ಯುಸನ್ ಕೂಡ ಕೆಕೆಆರ್ ತಂಡ ಸೇರಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅನುಭವಿ ಆಲ್ರೌಂಡರ್ ಕೀರನ್ ಪೊಲ್ಲಾರ್ಡ್ ಅವರನ್ನು ತಂಡದಿಂದ ರಿಲೀಸ್ ಮಾಡಿದೆ. 35 ವರ್ಷದ ಕೆರಿಬಿಯನ್ ಆಲ್ರೌಂಡರ್ ಪೊಲ್ಲಾರ್ಡ್ 2010ರಿಂದ ಸತತ 12 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಮುಂಬೈ ತಂಡ ಐದು ಬಾರಿ ಐಪಿಎಲ್ ಚಾಂಪಿಯನ್ ಆಗುವಲ್ಲಿ ಪೊಲ್ಲಾರ್ಡ್ ಪಾತ್ರ ಮಹತ್ವದ್ದಾಗಿತ್ತು. ಮುಂಬೈ ಇಂಡಿಯನ್ಸ್ ತಂಡ ಕೀರನ್ ಪೊಲ್ಲಾರ್ಡ್ ಅವರ ಜೊತೆ ವೆಸ್ಟ್ ಇಂಡೀಸ್ ಆಲ್ರೌಂಡರ್ ಫ್ಯಾಬಿಯೆನ್ ಅಲೆನ್ ಮತ್ತು ಇಂಗ್ಲೆಂಡ್’ನ ಎಡಗೈ ವೇಗದ ಬೌಲರ್ ತೈಮಾಲ್ ಮಿಲ್ಸ್, ಲೆಗ್ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ, ಹೃತಿಕ್ ಶೋಕಿನ್ ಅವರನ್ನು ತಂಡದಿಂದ ರಿಲೀಸ್ ಮಾಡಿದೆ.

ಇದನ್ನೂ ಓದಿ : MS Dhoni : ಟಿ 20 ವಿಶ್ವಕಪ್ 2022 ಸೋಲಿನ ಬಳಿಕ ಟೀಂ ಇಂಡಿಯಾಕ್ಕೆ ಮರಳಿದ ಎಂಎಸ್‌ ಧೋನಿ

ಇದನ್ನೂ ಓದಿ : Separate Captains for T20 & ODI: ವಿಶ್ವಕಪ್ ಸೋಲಿನ ಎಫೆಕ್ಟ್: ಟೀಮ್ ಇಂಡಿಯಾಗೆ ಮೇಜರ್ ಸರ್ಜರಿ, ಟಿ20, ಏಕದಿನಕ್ಕೆ ಪ್ರತ್ಯೇಕ ಕ್ಯಾಪ್ಟನ್ಸ್ ?

ಇದನ್ನೂ ಓದಿ : IPL 2023 Retention: ಮುಂಬೈನಿಂದ ಪೊಲ್ಲಾರ್ಡ್ ರಿಲೀಸ್, ಚೆನ್ನೈನಲ್ಲೇ ಉಳಿದ ರವೀಂದ್ರ ಜಡೇಜಾ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆಗಿನ ನಂಟು ಕಡಿದುಕೊಳ್ಳುವ ಸೂಚನೆ ನೀಡಿದ್ದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು CSK ಫ್ರಾಂಚೈಸಿ ತನ್ನಲ್ಲೇ ಉಳಿಸಿಕೊಂಡಿದೆ. ಆದರೆ ಇಂಗ್ಲೆಂಡ್ ವೇಗಿ ಕ್ರಿಸ್ ಜೋರ್ಡನ್, ನ್ಯೂಜಿಲೆಂಡ್ ವೇಗಿ ಆಡಂ ಮಿಲ್ನ್ ಮತ್ತು ಕಿವೀಸ್’ನ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಅವರನ್ನು ತಂಡದಿಂದ ಕೈಬಿಡಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಿರ್ಧರಿಸಿದೆ. ಐಪಿಎಲ್ ಮಿನಿ ಹರಾಜು ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ.

IPL Mini Auction: Pat Cummins out of IPL-2023, CSK eyes Kane Williamson

Comments are closed.