ಬೆಂಗಳೂರು: ತಂಡ ಸಂಕಷ್ಟಕ್ಕೆ ಸಿಲುಕಿದಾಗ ಬಾರಿಸುವ ಶತಕ, ದ್ವಿಶತಕಗಳಿಗೆ ವಿಶೇಷ ಮೌಲ್ಯವಿರುತ್ತದೆ. ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal double century) ರಣಜಿ ಟ್ರೋಫಿ ಸೆಮಿಫೈನಲ್ (Ranji Trophy Semi final) ಪಂದ್ಯದಲ್ಲಿ ಅಂಥದ್ದೇ ದ್ವಿಶತಕ ಬಾರಿಸಿದ್ದಾರೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೌರಾಷ್ಟ್ರ ವಿರುದ್ಧದ ರಣಜಿ ಸೆಮಿಫೈನಲ್ ಪಂದ್ಯದ (Karnataka Vs Saurashtra Ranji Trophy Semi final) 2ನೇ ದಿನ ಮಯಾಂಕ್ ಅಮೋಘ ದ್ವಿಶತಕ ಸಿಡಿಸಿದರು. ಮೊದಲ ದಿನ ಶತಕ ಬಾರಿಸಿ ಅಜೇಯರಾಗುಳಿದಿದ್ದ ಮಯಾಂಕ್ 2ನೇ ದಿನ ದ್ವಿಶತಕದೊಂದಿಗೆ ಅಬ್ಬರಿಸಿದರು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ್ದ ಕರ್ನಾಟಕ 112 ರನ್ನಿಗೆ 5 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕದಲ್ಲಿತ್ತು. ಇಂತಹ ಸಂಕಷ್ಟದ ಸನ್ನಿವೇಶದಲ್ಲಿ ಕರ್ನಾಟಕ ತಂಡಕ್ಕೆ ಮಯಾಂಕ್ ಅಗರ್ವಾಲ್ ಆಸರೆಯಾದರು. ವಿಕೆಟ್ ಕೀಪರ್ ಶರತ್ ಶ್ರೀನಿವಾಸ್ (66) ಜೊತೆ 6ನೇ ವಿಕೆಟ್’ಗೆ 139 ರನ್’ಗಳ ಜೊತೆಯಾಟವಾಡಿದ ಮಯಾಂಕ್, ಕೆಳ ಕ್ರಮಾಂಕದ ಆಟಗಾರರೊಂದಿಗೆ ಇನ್ನಿಂಗ್ಸ್ ಕಟ್ಟಿದರು. 9ನೇ ವಿಕೆಟ್’ಗೆ ಮಯಾಂಕ್ ಜೊತೆಯಾದ ವಿದ್ವತ್ ಕಾವೇರಪ್ಪ ನಾಯಕನಿಗೆ ಸಮರ್ಥವಾಗಿ ಸಾಥ್ ಕೊಟ್ಟರು. ಹೀಗಾಗಿ ಕರ್ನಾಟಕದ ಮೊತ್ತ 350ರ ಗಡಿ ದಾಟುವಂತಾಯಿತು.
ಇದು ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಮಯಾಂಕ್ ಅಗರ್ವಾಲ್ ಗಳಿಸಿದ 2ನೇ ದ್ವಿಶತಕ. ಇದಕ್ಕೂ ಮೊದಲು ಕೇರಳ ವಿರುದ್ಧದ ಲೀಗ್ ಪಂದ್ಯದಲ್ಲಿ ಮಯಾಂಕ್ 208 ರನ್’ಗಳೊಂದಿಗೆ ಅಬ್ಬರಿಸಿದ್ದರು. ಛತ್ತೀಸ್’ಗಢ ವಿರುದ್ಧ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಯಾಂಕ್ 117 ರನ್ ಸಿಡಿಸಿದ್ದರು. ಮೊದಲ ದಿನದಂತ್ಯಕ್ಕೆ 87 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 229 ರನ್ ಕಲೆ ಹಾಕಿದ್ದ ಕರ್ನಾಟಕ ತಂಡಕ್ಕೆ 2ನೇ ದಿನ ನಾಯಕ ಮಯಾಂಕ್ ಅಗರ್ವಾಲ್ (Mayank Agarwal Double Century) ಅಮೋಘ ದ್ವಿಶತಕ ದೊಂದಿಗೆ ಆಸರೆಯಾದರು. ನಾಯಕನ ಆಟವಾಡಿದ ಮಯಾಂಕ್ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ತಂಡವನ್ನು ಅಪಾಯದಿಂದ ಪಾರು ಮಾಡಿದ್ದಾರೆ.
ಇದನ್ನೂ ಓದಿ : Gary Balance : ಎರಡು ದೇಶಗಳ ಪರ ಟೆಸ್ಟ್ ಶತಕ ಸಿಡಿಸಿ ಅಪರೂಪದ ದಾಖಲೆ ಬರೆದ ಜಿಂಬಾಬ್ವೆ ಕ್ರಿಕೆಟಿಗ
ಇದನ್ನೂ ಓದಿ : Test debuts for Surya and Bharat: ಟೆಸ್ಟ್ ಕ್ರಿಕೆಟ್‌ಗೆ ಸೂರ್ಯ, ಭರತ್ ಪದಾರ್ಪಣೆ, ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದ ತಂದೆ-ತಾಯಿ
Mayank Agarwal 200 runs in 367 balls (23×4, 3×6) Karnataka 355/8 #KARvSAU #RanjiTrophy #SF2 Scorecard:https://t.co/8OeQkBMTBX
— BCCI Domestic (@BCCIdomestic) February 9, 2023
Karnataka captain Mayank Agarwal scored double century in the Karnataka Vs Saurashtra Ranji Trophy Semi final
English News Click here