Maharashtra journalist murder: ರಿಫೈನರಿ ವಿರುದ್ದ ಸುದ್ದಿ ಬರೆದಿದ್ದಕ್ಕೆ ಪತ್ರಕರ್ತನ ಮೇಲೆ ಕಾರು ಹರಿಸಿ ಹತ್ಯೆ

ಮುಂಬೈ: (Maharashtra journalist murder) ರಿಫೈನರಿ ವಿರುದ್ದ ಸುದ್ದಿ ಬರೆದಿದ್ದಕ್ಕೆ ಪತ್ರಕರ್ತರೊಬ್ಬರ ಮೇಲೆ ಕಾರು ಹರಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಸ್ಥಳೀಯ ಪತ್ರಕರ್ತರಾದ ಶಶಿಕಾಂತ ವಾರಿಶೆ ಕೊಲೆಯಾದ ವ್ಯಕ್ತಿ. ಇದೀಹ ಪತ್ರಕರ್ತರ ಹತ್ಯೆ ಮಾಡಿದ ಆರೋಪದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ಪತ್ರಕರ್ತ ಶಶಿಕಾಂತ ವಾರಿಶೆ ಅವರು ನಾನಾರ್‌ ನಲ್ಲಿರುವ ರತ್ನಗಿರಿ ರಿಫೈನರಿ ವಿರುದ್ದವಾಗಿ ಸುದ್ದಿ ಬರೆದಿದ್ದು, ಅದು ಸೋಮವಾರದಂದು ಪ್ರಕಟವಾಗಿತ್ತು. ಅದೇ ದಿನ ಮಧ್ಯಾಹ್ನ ರಿಫೈನರಿಯ ಕಟ್ಟಾ ಬೆಂಬಲಿಗರಾದ ಪಂಢರಿನಾಥ್‌ ಅಂಬರ್ಕರ್‌ ಅವರ ಕಾರು ವಾರಿಶೆ ಅವರ ಬೈಕ್‌ ಗೆ ಢಿಕ್ಕಿಯಾಗಿದೆ. ನಂತರ ನೂರು ಮೀಟರ್‌ ಗೂ ಹೆಚ್ಚು ದೂರ ಎಳೆದೊಯ್ದು ಆರೋಪ ಸ್ಥಳದಿಂದ ಪರಾರಿಯಾಗಿದ್ದರು. ಇದರಿಂದ ಗಾಯಗೊಂಡ ವಾರಿಶೆಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಮಂಗಳವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು.

ಇದೀಗ ಒಬ್ಬ ಪತ್ರಕರ್ತರ ಹತ್ಯೆಗೆ ಸಂಬಂಧಿಸಿದಂತೆ ಪತ್ರಕರ್ತರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದವು. ಆರೋಪಿಗಳ ವಿರುದ್ದ ಈ ಹಿಂದೆ ಐಪಿಸಿ ಸೆಕ್ಷನ್‌ ೩೦೪ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ಆರೋಪಿಯ ಮೇಲೆ ಸೆಕ್ಷನ್‌ ೩೦೨ ರ ಅಡಿಯಲ್ಲಿ ಕೊಲೆ ಪ್ರಕರಣ ಕೂಡ ದಾಖಲಿಸಿ ಬಂಧಿಸಲಾಗಿದ್ದು. ಫೆ. ೧೩ ರ ತನಕ ಪೊಲೀಸ್‌ ಕಸ್ಟಡಿಗೆ ಕಳುಹಿಸಲಾಗಿದೆ.

ನಾನರ್‌ ನಲ್ಲಿ ರತ್ನಗರಿ ರಿಫೈನರಿ ಮತ್ತು ಪೆಟ್ರೋಕೆಮಿಕಲ್‌ ಪ್ರಾಜೆಕ್ಟ್‌ ನಿರ್ಮಾಣವೂ ಪ್ರಾರಂಭದ ದಿನದಿಂದಲೂ ರಾಜಕೀಯವಾಗಿಯೇ ಮುಂದುವರೆದಿತ್ತು. ಬಿಜೆಪಿಯೊಂದಿಗೆ ಸೇರ್ಪಡೆಗೊಂಡ ಶಿವಸೇನೆಯ ಉಪಕ್ರಮದ ಮೇರೆಗೆ ಚುನಾವಣೆಗೂ ಮೊದಲು ಅಂದಿನ ಸರಕಾರ ಈ ಯೋಜನೆಯನ್ನು ರದ್ದುಗೊಳಿಸಿತ್ತು. ಈಗ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದ್ದು, ಯೋಜನೆಗೆ ಮರುಜೀವ ನೀಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

ಇದನ್ನೂ ಓದಿ : Massive Heart attack death: ಹೃದಯಾಘಾತಕ್ಕೆ ಬಲಿಯಾದ 18 ವರ್ಷದ ವಿದ್ಯಾರ್ಥಿ

ಇದನ್ನೂ ಓದಿ : Rape case- principal arrested: ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರ, ಹತ್ಯೆ ಪ್ರಕರಣ: ಪ್ರಾಂಶುಪಾಲ ಅರೆಸ್ಟ್

ಇದನ್ನೂ ಓದಿ : Couples hanged to death: ಮಂಗಳೂರಿನ ಲಾಡ್ಜ್‌ ನಲ್ಲಿ ಕೇರಳ ಮೂಲದ ದಂಪತಿ ಆತ್ಮಹತ್ಯೆ

Maharashtra journalist murder: Journalist killed by car for writing news against refinery

Comments are closed.