Karnataka star to captain Sunrisers IPL: ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಕನ್ನಡಿಗ ನಾಯಕ ?

ಬೆಂಗಳೂರು: captain Sunrisers IPL 2023 : ಇಡೀ ಕ್ರಿಕೆಟ್ ಜಗತ್ತೇ ಕುತೂಹಲದಿಂದ ಕಾಯುತ್ತಿರುವ ಐಪಿಎಲ್-2023 ಆಟಗಾರರ ಹರಾಜಿಗಿನ್ನು (IPL 2023 players auction) ಎರಡೇ ದಿನಗಳು ಬಾಕಿ. ಬಹು ನಿರೀಕ್ಷಿತ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಇದೇ ಶುಕ್ರವಾರ (ಡಿಸೆಂಬರ್ 23) ಕೇರಳದ ಕೊಚ್ಚಿಯಲ್ಲಿ ಆರಂಭವಾಗಲಿದೆ. ಒಟ್ಟು 405 ಮಂದಿ ಆಟಗಾರರು ಅಂತಿಮ ಹರಾಜು ಪಟ್ಟಿಯಲ್ಲಿದ್ದು, 10 ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಅವಶ್ಯಕತೆಯಿರುವ ಆಟಗಾರರನ್ನು ಖರೀದಸಲು ಸಜ್ಜಾಗುತ್ತಿವೆ. ಈ ಮಧ್ಯೆ ಐಪಿಎಲ್ ಹರಾಜಿನಲ್ಲಿ ಇನ್ನೂ 42 ಕೋಟಿ ರೂ.ಗಳನ್ನು ಉಳಿಸಿಕೊಂಡಿರುವ ಮಾಜಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ ಕನ್ನಡಿಗನನ್ನು ಖರೀದಿಸಿ ಅವರನ್ನೇ ತಂಡದ ನಾಯಕನ ನ್ನಾಗಿ ಘೋಷಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ (Irfan Pathan) ಸುಳಿವು ನೀಡಿದ್ದಾರೆ. ಆ ಆಟಗಾರ ಬೇರಾರೂ ಅಲ್ಲ, ಕರ್ನಾಟಕ ತಂಡದ ಹಾಲಿ ನಾಯಕ, ಪಂಜಾಬ್ ಕಿಂಗ್ಸ್ (Punjab Kings) ತಂಡದ ಮಾಜಿ ನಾಯಕ ಮಯಾಂಕ್ ಅಗರ್ವಾಲ್ (Mayank Agarwal).

ಹೈದರಾಬಾದ್ ಫ್ರಾಂಚೈಸಿ ಈಗಾಗಲೇ ತಂಡದ ನಾಯಕರಾಗಿದ್ದ ಕೇನ್ ವಿಲಿಯಮ್ಸನ್ (Kane Williamson) ಅವರನ್ನು ರಿಲೀಸ್ ಮಾಡಿದ್ದು, ಹೊಸ ನಾಯಕನ ಹುಡುಕಾಟದಲ್ಲಿದೆ. ಪ್ರಸಕ್ತ ದೇಶೀಯ ಟೂರ್ನಿಗಳಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿರುವ ಮಯಾಂಕ್ ಅಗರ್ವಾಲ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಖರೀದಿಸುವ ಸಾಧ್ಯತೆಯಿದೆ ಎಂದಿದ್ದಾರೆ ಇರ್ಫಾನ್ ಪಠಾಣ್.

“ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ನಾಯಕತ್ವದ ಜೊತೆಗೆ ಇನಿಂಗ್ಸ್‌ ಆರಂಭಿಸುವ ಒಬ್ಬ ಸ್ಫೋಟಕ ಆಟಗಾರನ ಅಗತ್ಯವಿದೆ. ಹೀಗಾಗಿ ಆ ಈ ಸ್ಥಾನವನ್ನು ಕರ್ನಾಟಕ ತಂಡದ ನಾಯಕ ಮಯಾಂಕ್‌ ಅಗರ್ವಾಲ್‌ ತುಂಬಬಹುದು. ನಿರ್ಭೀತ ಹಾಗೂ ನಿಸ್ವಾರ್ಥ ಆಟಕ್ಕೆ ಹೆಸರಾಗಿರುವ ಮಯಾಂಕ್‌ ಅಗರ್ವಾಲ್‌ ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿ. ಹೀಗಾಗಿ ನಾಯಕತ್ವ ಮತ್ತು ಓಪನರ್ ಎರಡೂ ಸ್ಥಾನಗಳಿಗೆ ಮಯಾಂಕ್ ಸೂಕ್ತ ಆಟಗಾರ” ಎಂದು ಇರ್ಫಾನ್‌ ಪಠಾಣ್‌ ಹೇಳಿದ್ದಾರೆ.

ಕೆ.ಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡ ತೊರೆದ ನಂತರ 2022ರ ಐಪಿಎಲ್ ಟೂರ್ನಿಯಲ್ಲಿ ಮಯಾಂಕ್ ಅಗರ್ವಾಲ್ ಪಂಜಾಬ್ ತಂಡದ ನೇತೃತ್ವ ವಹಿಸಿದ್ದರು. 13 ಪಂದ್ಯಗಳಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸಿದ್ದ ಮಯಾಂಕ್ 7 ಗೆಲುವು ತಂದು ಕೊಟ್ಟಿದ್ದರು. ಆದರೆ ವೈಯಕ್ತಿಕ ಪ್ರದರ್ಶನದಲ್ಲಿ ಕುಸಿತ ಕಂಡಿತ್ತು. ಈ ಹಿನ್ನೆಲೆಯಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು ಪಂಜಾಬ್ ತಂಡ ರಿಲೀಸ್ ಮಾಡಿದೆ.

ಇದನ್ನೂ ಓದಿ : Sachin Tendulkar Fans: ವಿಮಾನವೇರಿದ ಸಚಿನ್ ತೆಂಡೂಲ್ಕರ್‌ಗೆ ಕಾದಿದ್ದು ಅಚ್ಚರಿ.. ಕಾರಣವೇನು ಗೊತ್ತೇ?

ಇದನ್ನೂ ಓದಿ : IPL Players Auction : ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಗೇಲ್, ಎಬಿಡಿ, ರೈನಾ, ಉತ್ತಪ್ಪ!

Karnataka star to captain Sunrisers IPL 2023 players auction

Comments are closed.