ಐಪಿಎಲ್ 2022 ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ. ಕೆಕೆಆರ್ ಆಲ್ ರೌಂಡರ್ ಪ್ಯಾಟ್ ಕಮ್ಮಿನ್ಸ್ (Pat Cummins) ದಾಖಲೆಯ ಇನ್ನಿಂಗ್ಸ್ ಕಂಡು ಆಂಡ್ರೆ ರಸೆಲ್ ( Andre Russell ) ಡ್ಯಾನ್ಸ್ ವಿಡಿಯೋ ವೈರಲ್. ಪ್ಯಾಟ್ ಕಮಿನ್ಸ್ ದಾಖಲೆಯ ಇನ್ನಿಂಗ್ಸ್‌ನ ಮುಂದೆ ಆಂಡ್ರೆ ರಸೆಲ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಕೆಕೆಆರ್ ರನ್ ಚೇಸ್‌ನಲ್ಲಿ 15 ಎಸೆತಗಳಲ್ಲಿ ಅಜೇಯ 56 ರನ್ ಗಳಿಸಿದರು. ಪಂದ್ಯದ ನಂತರ ರಸೆಲ್ ಮಾಡಿದ ಡ್ಯಾನ್ಸ್ ಅಭಿಮಾನಿಗಳಿಗೆ ಮಾತ್ರವಲ್ಲ ಬಾಲಿವುಡ್ ನಟ ಮತ್ತು ಕೆಕೆಆರ್ ಸಹ-ಮಾಲೀಕ ಶಾರುಖ್ ಖಾನ್ ಅವರನ್ನು ಆಕರ್ಷಿಸಿದವು.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈ ಬಾರಿ ಮುಂಬೈ ಇಂಡಿಯನ್ಸ್ ತಂಡ ಸತತವಾಗಿ ಸೋಲಿನಿಂದ ಕಂಗೆಟ್ಟಿದೆ. ಆದರೆ ಕೆಕೆಆರ್ ವಿರುದ್ದದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಹಾಗೂ ಕಿರಾನ್ ಪೊಲಾರ್ಡ್ ಅವರ ಅದ್ಬುತ ಆಟದ ನೆರವಿನಿಂದ ಮುಂಬೈ ತಂಡ 4 ವಿಕೆಟ್‌ಗೆ 161 ಗಳಿಸಿತ್ತು.
Russell dance💜💜🔥🔥🔥🕺#KolkataKnightRiders #AmiKKR #Russell #KKRHaiTaiyaar #KKRvMI pic.twitter.com/Y3KjhIdRg8
— T srkians (@srkuniverselov) April 6, 2022
ಕೆಕೆಆರ್ ತಂಡದ ಆರಂಭಿಕ ಆಟಗಾರರು ಕೈ ಕೊಟ್ಟರೂ ಕೂಡ ಆಂಡ್ರೆ ರೆಸೆಲ್ ಹಾಗೂ ಪಾಟ್ ಕುಮಿನ್ಸ್ ತಂಡಕ್ಕೆ ನೆರವಾಗಿದ್ದರು. ಅಂತಿಮವಾಗಿ ಕೆಕೆಆರ್ ತಂಡಕ್ಕೆ 41 ಎಸೆತಗಳಲ್ಲಿ 61 ರನ್‌ಗಳ ಅಗತ್ಯವಿದ್ದು ಈ ವೇಳೆಯಲ್ಲಿ ಸ್ಪೋಟಕ ಆಟಕ್ಕೆ ಇಳಿದ ಪ್ಯಾಟ್ ಕಮ್ಮಿನ್ಸ್ 10 ನಿಮಿಷಗಳ ಅವಧಿಯಲ್ಲಿ ಸ್ಪೋಟಕ ಆಟ 6 ಸಿಕ್ಸರ್‌ಗಳು ಮತ್ತು 4 ಬೌಂಡರಿಗಳನ್ನು ಹೊಡೆದು ಐಪಿಎಲ್ ಇತಿಹಾಸದಲ್ಲಿ 15 ಓವರ್‌ಗಳಲ್ಲಿ ತಂಡಕ್ಕೆ ಗೆಲುವು ತಂದಿಟ್ಟಿದ್ದರು.
@patcummins30 I want to dance like Andre & hug u like the whole team did. Wow well done @KKRiders and what else is there to say!!!…’PAT’ DIYE CHAKKE!!!
— Shah Rukh Khan (@iamsrk) April 6, 2022
ಇದನ್ನೂ ಓದಿ : ಐಪಿಎಲ್ 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸತತ ಸೋಲು : ಕೊನೆಗೂ ಮೌನ ಮುರಿದ ಸುರೇಶ್ ರೈನಾ
ಇದನ್ನೂ ಓದಿ : ಗುಜರಾತ್ ಟೈಟಾನ್ಸ್ ತಂಡದ ಈ ಆಟಗಾರ ವಿಶ್ವದ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗ ಎಂದ ರವಿಶಾಸ್ತ್ರಿ
KKR all-rounder Pat Cummins record innings, Andre Russell dance video viral