ಮುಂಬೈ : ಟೀಂ ಇಂಡಿಯಾದಲ್ಲಿ ಸುದೀರ್ಘ ಅವಧಿಗೆ ನಾಯಕನಾಗಿದ್ದ ವಿರಾಟ್ ಕೊಹ್ಲಿ ಟಿ೨೦, ಏಕದಿನ ತಂಡದ ಬೆನ್ನಲ್ಲೇ ಟೆಸ್ಟ್ ತಂಡದ ನಾಯಕತ್ವದಿಂದಲೂ ಕೆಳಗಿಳಿದಿದ್ದಾರೆ. ಕೊಹ್ಲಿ ರಾಜೀನಾಮೆಯ ಬೆನ್ನಲ್ಲೇ ಭಾರತ ಟೆಸ್ಟ್ ತಂಡಕ್ಕೆ ಮುಂದಿನ ನಾಯಕ ಯಾರೂ ಅನ್ನೋ ಬಗ್ಗೆ ಚರ್ಚೆ ಶುರುವಾಗಿದೆ. ಇದರ ಬೆನ್ನಲ್ಲೇ ಕನ್ನಡಿಗ ಕೆ.ಎಲ್.ರಾಹುಲ್ (KL Rahul Test Captain) ಮುಂದಿನ ಟೆಸ್ಟ್ ತಂಡದ ನಾಯಕ ಅನ್ನೋ ಬಗ್ಗೆ ಮಾತುಗಳು ಕೇಳಿಬರುತ್ತಿವೆ.
ದಕ್ಷಿಣ ಆಫ್ರಿಕಾ ವಿರುದ್ದದ ಎರಡನೇ ಟೆಸ್ಟ್ ಪಂದ್ಯ ರಾಹುಲ್ ನಾಯಕತ್ವದಲ್ಲಿ ಸೋಲನ್ನು ಕಂಡಿದ್ದರೂ ಕೂಡ ರಾಹುಲ್ ನಾಯಕತ್ವವನ್ನು ಕೊಹ್ಲಿ ಕೊಂಡಾಡಿದ್ದರು. ಕೆಎಲ್ ರಾಹುಲ್ ನಾಯಕತ್ವವನ್ನು ಹೊಗಳಿದ ಬೆನ್ನಲ್ಲೇ ಕೊಹ್ಲಿ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಈಗಾಗಲೇ ದಕ್ಷಿಣ ಆಫ್ರಿಕಾ ಸರಣಿಗೆ ಏಕದಿನ, ಟಿ೨೦ ಹಾಗೂ ಟೆಸ್ಟ್ ತಂಡಕ್ಕೂ ನಾಯಕರಾಗಿದ್ದಾರೆ. ಸುದೀರ್ಘ ಅವಧಿಯ ನಾಯಕನಿಗಾಗಿ ಬಿಸಿಸಿಐ ಹುಡುಗಾಟ ನಡೆಸುತ್ತಿರುವ ಹೊತ್ತಲ್ಲೇ ಶಾಂತ ಮೂರ್ತಿ ಕೆ.ಎಲ್.ರಾಹುಲ್‌ಗೆ ಪಟ್ಟ ಕಟ್ಟುವುದು ಬಹುತೇಕ ಖಚಿತ.
ಈ ಹಿಂದೆ ರೋಹಿತ್ ಶರ್ಮಾ ಅವರನ್ನು ಏಕದಿನ ಹಾಗೂ ಟಿ೨೦ ತಂಡಕ್ಕೆ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಮೂರು ಮಾದರಿಯ ತಂಡಕ್ಕೆ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡುವುದು ಬಹುತೇಕ ಕಷ್ಟ. ಒಂದೊಮ್ಮೆ ಮೂರು ಮಾದರಿಯ ಕ್ರಿಕೆಟ್ ತಂಡಕ್ಕೆ ಶರ್ಮಾ ನಾಯಕನಾದ್ರೆ ಅವರ ಆಟದ ಮೇಲೆಯೂ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆಯಿದೆ. ಐಪಿಎಲ್ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ರೋಹಿತ್ ಶರ್ಮಾ ಯಶಸ್ಸು ಕಂಡಿದ್ದಾರೆ. ಆದರೆ ಟಿಂ ಇಂಡಿಯಾದ ನಾಯಕನಾದ ಬೆನ್ನಲ್ಲೇ ಫಿಟ್ನೆಸ್ ಸಮಸ್ಯೆ ಕಾಣಿಸಿಕೊಂಡಿತ್ತು.
ಬಿಸಿಸಿಐ ಯುವ ಆಟಗಾರನಿಗೆ ಮಣೆಹಾಕುವ ಸಾಧ್ಯತೆ ಜಾಸ್ತಿಯಿದೆ. ಈಗಾಗಲೇ ರಾಹುಲ್ ದ್ರಾವಿಡ್ ಕೋಚ್ ಆಗಿದ್ದು ಯುವ ಪ್ರತಿಭೆಗಳನ್ನು ಬೆಳೆಸುವ ಕಾರ್ಯವನ್ನು ಮಾಡಿದ್ದಾರೆ. ಹೀಗಾಗಿ 35 ವರ್ಷದ ಸನಿಹದಲ್ಲಿರುವ ರೋಹಿತ್ ಶರ್ಮಾ ಅವರಿಗಿಂತ 29 ವರ್ಷ ವರ್ಷದ ಕೆಎಲ್ ರಾಹುಲ್ ನಾಯಕತ್ವಕ್ಕೆ ಹೆಚ್ಚು ಸೂಕ್ತ ಅನ್ನೋ ಮಾತುಗಳು ಕೇಳಿಬರುತ್ತಿವೆ. ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲೂ ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಒಂದೊಮ್ಮೆ ರಾಹುಲ್ ನಾಯಕರಾದ್ರೆ ಮುಂದಿನ ಐದು ವರ್ಷಗಳ ಕಾಲ ತಂಡವನ್ನು ಮುನ್ನೆಡೆಸಲಿದ್ದಾರೆ. ಇದೇ ಕಾರಣಕ್ಕೆ ನಾಯಕತ್ವಕ್ಕೆ ರಾಹುಲ್ ಹೆಸರು ಬಲವಾಗಿ ಕೇಳಿಬರುತ್ತಿದೆ.
ನಾಯಕತ್ವಕ್ಕೆ ರಾಜೀನಾಮೆ ನೀಡಿರುವ ವಿರಾಟ್ ಕೊಹ್ಲಿ ಹಲವು ವಿಚಾರಗಳನ್ನು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ, ತಂಡವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು 7 ವರ್ಷಗಳ ಕಠಿಣ ಪರಿಶ್ರಮ, ಶ್ರಮ ಮತ್ತು ಪ್ರತಿ ದಿನ ನಿರಂತರ ಪರಿಶ್ರಮವಿದೆ. ನಾನು ಕೆಲಸವನ್ನು ಸಂಪೂರ್ಣ ಪ್ರಾಮಾಣಿಕತೆಯಿಂದ ಮಾಡಿದ್ದೇನೆ ಮತ್ತು ಅಲ್ಲಿ ಏನನ್ನೂ ಬಿಡಲಿಲ್ಲ. ಒಂದು ಹಂತದಲ್ಲಿ ಎಲ್ಲವೂ ಸ್ಥಗಿತಗೊಳ್ಳಬೇಕು ಮತ್ತು ಭಾರತದ ಟೆಸ್ಟ್ ನಾಯಕನಾಗಿ ನನಗೆ ಅದು ಈಗ. ಪ್ರಯಾಣದ ಉದ್ದಕ್ಕೂ ಅನೇಕ ಏರಿಳಿತಗಳು ಮತ್ತು ಕೆಲವು ಕುಸಿತಗಳು ಇವೆ, ಆದರೆ ಎಂದಿಗೂ ಪ್ರಯತ್ನದ ಕೊರತೆ ಅಥವಾ ನಂಬಿಕೆಯ ಕೊರತೆ ಇರಲಿಲ್ಲ.
ನಾನು ಮಾಡುವ ಪ್ರತಿಯೊಂದರಲ್ಲೂ ನನ್ನ 120 ಪ್ರತಿಶತವನ್ನು ನೀಡಲು ನಾನು ಯಾವಾಗಲೂ ನಂಬಿದ್ದೇನೆ ಮತ್ತು ನಾನು ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಅದು ಸರಿಯಾದ ಕೆಲಸವಲ್ಲ ಎಂದು ನನಗೆ ತಿಳಿದಿದೆ. ಭಾರತ ತಂಡದ ನೂತನ ಟೆಸ್ಟ್ ನಾಯಕರಾಗಿ ಕೆಎಲ್ ರಾಹುಲ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ಸರಣಿಯ ನಂತರ ಭಾರತ ತಂಡದ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ.
IPL 2021 ರ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಯಕತ್ವದಿಂದ ಕೆಳಗಿಳಿದಿದ್ದಾರೆ. ವಿರಾಟ್ 68 ಟೆಸ್ಟ್‌ಗಳಲ್ಲಿ ಭಾರತವನ್ನು ಮುನ್ನಡೆಸಿದರು, 40 ರಷ್ಟು ಗೆದ್ದಿದ್ದಾರೆ. ಧೋನಿ 60 ಟೆಸ್ಟ್‌ಗಳಲ್ಲಿ ಭಾರತದ ನಾಯಕತ್ವವನ್ನು ವಹಿಸಿದ್ದರು ಮತ್ತು 27 ಅನ್ನು ಗೆದ್ದಿದ್ದರು, ಆದರೆ ಸೌರವ್ ಗಂಗೂಲಿ ಭಾರತವನ್ನು ನಾಯಕತ್ವ ವಹಿಸಿದ್ದರು. 49 ಟೆಸ್ಟ್‌ಗಳನ್ನು ಗೆದ್ದು 21. ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ಕೆಎಲ್ ರಾಹುಲ್ ಭಾರತ ತಂಡದ ಉಸ್ತುವಾರಿ ವಹಿಸಿದ್ದರು. ಬೆನ್ನು ನೋವಿನಿಂದಾಗಿ ಕೊಹ್ಲಿ ಈ ಪಂದ್ಯದಲ್ಲಿ ಆಡಿರಲಿಲ್ಲ.
(KL Rahul New Test Captain for Team India)