ಚಾಂಪಿಯನ್ಸ್ ಟ್ರೋಫಿಯಲ್ಲಿ (ICC Champions Trophy 2025) ಭಾರತ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಸೋಲುಣಿಸುವಲ್ಲಿ ಕನ್ನಡಿಗ ಕೆಎಲ್ ರಾಹುಲ್ (KL Rahul) ಪ್ರಮುಖ ಪಾತ್ರವಹಿಸಿದ್ದಾರೆ. ಅಂದು ವಿಶ್ವಕಪ್‌ನಲ್ಲಿ ಕಣ್ಣೀರು ಹಾಕಿಸಿದ್ದ ಆಸಿಸ್ ಆಟಗಾರರ ವಿರುದ್ದ ರಾಹುಲ್ ಪ್ರತೀಕಾರ ತೀರಿಸಿಕೊಂಡಿದ್ದಾರೆ.
ಅದು 2023ರ ಏಕದಿನ ವಿಶ್ವಕಪ್ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈನಲ್‌ಗೆ ಎಂಟ್ರಿ ಕೊಟ್ಟಿದ್ದವು. ಬಲಿಷ್ಠ ಭಾರತ ತಂಡವನ್ನು ಸೋಲಿಸೋದು ಆಸ್ಟ್ರೇಲಿಯಾಕ್ಕೆ ಸುಲಭದ ಮಾತಾಗಿರಲಿಲ್ಲ. ಆರಂಭಿಕ ಆಟಗಾರ ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಕೈಕೊಟ್ಟಿದ್ರು.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 47, ವಿರಾಟ್ ಕೊಹ್ಲಿ 54ರನ್ ಬಾರಿಸಿದ್ರು. ಆದರೆ ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡವನ್ನು ಕನ್ನಡಿಗ ಕೆಎಲ್ ರಾಹುಲ್ ಕೈ ಹಿಡಿದಿದ್ರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ರಾಹುಲ್ 66 ರನ್ ಬಾರಿಸುವ ಮೂಲಕ ಆಸ್ಟ್ರೇಲಿಯಾಕ್ಕೆ ಒಂದೊಳ್ಳೆ ಟಾರ್ಗೆಟ್ ನೀಡಿದ್ರು.

ಆಸ್ಟೇಲಿಯಾದ ಸ್ಪೋಟಕ ಆಟಗಾರ ಡೇವಿಡ್ ವಾರ್ನರ್ ಅವರನ್ನು ಭಾರತ ಬಹುಬೇಗನೆ ಬಲಿ ಪಡೆದಿದ್ರೂ ಕೂಡ ಟ್ರಾವೆಡ್ ಹೆಡ್ ಅವರ ಸಿಡಿಲಾರ್ಭಟದ ಆಟಕ್ಕೆ ಮಂಗಾಗಿ ಹೋಗಿತ್ತು. ಟ್ರಾವೆಸ್ ಹೆಡ್ ಸ್ಪೋಟಕ ಶತಕ ಹಾಗೂ ಲ್ಯಾಬಿಶಾನೆ ಅವರ ಅರ್ಧ ಶತಕದ ನೆರವಿನಿಂದ ಆಸ್ಟ್ರೇಲಿಯಾ ಭಾರತವನ್ನು ಸೋಲಿಸಿ ವಿಶ್ವಕಪ್ ಜಯಿಸಿತ್ತು. ಕನ್ನಡಿಗ ರಾಹುಲ್ ಹೋರಾಟ ವ್ಯರ್ಥವಾಗಿತ್ತು.
ವಿಶ್ವಕಪ್ ಪಂದ್ಯಾವಳಿ ಮುಗಿದು ಎರಡೇ ವರ್ಷಕ್ಕೆ ಆಸ್ಟ್ರೇಲಿಯಾ ಹಾಗೂ ಭಾರತ ತಂಡ ಮತ್ತೆ ಮುಖಾಮುಖಿಯಾಗಿವೆ. ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾಕ್ಕೆ ಸೋಲಿನ ರುಚಿ ತೋರಿ ಭಾರತ ಫೈನಲ್‌ಗೆ ಪ್ರವೇಶ ಪಡೆದಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾಕ್ಕೆ ಸೋಲಿನ ರುಚಿ ತೋರಿಸುವಲ್ಲಿ ಪ್ರಮುಖ ಪಾತ್ರ ವಹಿಸಿರೋದು ಕನ್ನಡಿಗ ಕೆಎಲ್ ರಾಹುಲ್. ಎರಡು ವರ್ಷಗಳ ಹಿಂದೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗದೇ ಕಣ್ಣೀರಿಟ್ಟಿದ್ದ ಕೆಎಲ್ ರಾಹುಲ್ ಇದೀಗ ಭಾರತವನ್ನು ಮತ್ತೆ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಎಂಟ್ರಿ ಕೊಡಿಸಿದ್ದಾರೆ.

ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಒಂದು ಹಂತದಲ್ಲಿ ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಎಚ್ಚರಿಕೆಯ ಆಟ ಆಡಿದ್ದಾರೆ. ಕೆಎಲ್ ರಾಹುಲ್ ಸೊಗಸಾದ 2 ಸಿಕ್ಸರ್ ಸಿಡಿಸುವ ಮೂಲಕ 42 ರನ್ ಬಾರಿಸಿ ಔಟಾಗದೇ ಉಳಿದಿದ್ದರು.
Also Read : IPL 2025 RCB : ಐಪಿಎಲ್ 2025 ಕ್ಕೆ ಆರ್‌ಸಿಬಿಯ ಅತ್ಯುತ್ತಮ ಪ್ಲೇಯಿಂಗ್ 11
ಅಷ್ಟೇ ಅಲ್ಲದೇ ಅಂತಿಮವಾಗಿ ಸಿಕ್ಸರ್ ಬಾರಿಸುವ ಮೂಲಕ ರಾಹುಲ್ ತಾನೊಬ್ಬ ಮ್ಯಾಚ್ ಫೀನಿಶರ್ ಅನ್ನೋದನ್ನು ಸಾಭೀತು ಪಡಿಸಿದ್ದಾರೆ. ಭಾರತಕ್ಕೆ ಗೆಲುವು ದೊರಕಿಸಿ ಕೊಟ್ಟಿರುವುದು ಮಾತ್ರವಲ್ಲ ತನ್ನ ಸಾಮರ್ಥ್ಯ ಏನೂ ಅನ್ನೋದನ್ನು ಟೀಕಿಸುವವರಿಗೆ ತನ್ನ ಬ್ಯಾಟಿನ ಮೂಲಕವೇ ಉತ್ತರಿಸಿದ್ದಾರೆ.
KL Rahul takes revenge Australia for India World Cup defeat Kannada News