ಮಂಗಳವಾರ, ಏಪ್ರಿಲ್ 29, 2025
HomeSportsCricketKrunal Pandya baby boy : ಹಾರ್ದಿಕ್ ಪಾಂಡ್ಯ ಸಹೋದರ ಕೃಣಾಲ್ ಪಾಂಡ್ಯಗೆ ಗಂಡು ಮಗು

Krunal Pandya baby boy : ಹಾರ್ದಿಕ್ ಪಾಂಡ್ಯ ಸಹೋದರ ಕೃಣಾಲ್ ಪಾಂಡ್ಯಗೆ ಗಂಡು ಮಗು

- Advertisement -

ಮುಂಬೈ: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಹಿರಿಯ ಸಹೋದರ, ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರ ಕೃಣಾಲ್ ಪಾಂಡ್ಯ (Krunal Pandya baby boy ) ಪತ್ನಿ ಪಂಖೂರಿ ಪಾಂಡ್ಯ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗು ಜನಿಸಿರುವ ಸುದ್ದಿಯನ್ನು ಸ್ವತಃ ಕೃಣಾಲ್ ಪಾಂಡ್ಯ ಅವರೇ ಟ್ವಿಟರ್ ಮೂಲಕ ಹಂಚಿ ಕೊಂಡಿದ್ದಾರೆ. ಪತ್ನಿ ಹಾಗೂ ನವಜಾತ ಪುತ್ರನ ಫೋಟೋಗಳನ್ನು ಟ್ವಿಟರ್’ನಲ್ಲಿ ಪಾಂಡ್ಯ ಪ್ರಕಟಿಸಿದ್ದಾರೆ. ಪಾಂಡ್ಯ-ಪಂಖೂರಿ ದಂಪತಿ ತಮ್ಮ ಪುತ್ರನಿಗೆ “ಕವೀರ್ ಕೃಣಾಲ್ ಪಾಂಡ್ಯ” ಎಂದು ನಾಮಕರಣ ಮಾಡಿದ್ದಾರೆ. ಕೃಣಾಲ್ ಪಾಂಡ್ಯ 2017ರಲ್ಲಿ ಪಂಖೂರಿ ಅವರನ್ನು ಮದುವೆಯಾಗಿದ್ದರು.

31 ವರ್ಷದ ಎಡಗೈ ಆಲ್ರೌಂಡರ್ ಕೃಣಾಲ್ ಪಾಂಡ್ಯ 2018ರಲ್ಲಿ ಭಾರತ ಪರ ಟಿ20 ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. 2021ರ ಮಾರ್ಚ್ 23ರಂದು ಪುಣೆಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್”ಗೆ ಪದಾರ್ಪಣೆ ಮಾಡಿದ್ದ ಸೀನಿಯರ್ ಪಾಂಡ್ಯ, ಚೊಚ್ಚಲ ಪಂದ್ಯದಲ್ಲೇ ಅಬ್ಬರಿಸಿ 31 ಎಸೆತಗಳಲ್ಲಿ ಸ್ಫೋಟಕ 58 ರನ್ ಸಿಡಿಸಿದ್ದರು. 26 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದ್ದ ಪಾಂಡ್ಯ, ಏಕದಿನ ಪದಾರ್ಪಣೆಯ ಪಂದ್ಯದಲ್ಲಿ ವೇಗದ ಅರ್ಧಶತಕ ಸಿಡಿಸಿದ ವಿಶ್ವದಾಖಲೆ ಬರೆದಿದ್ದರು.

ಭಾರತ ಪರ 5 ಏಕದಿನ ಪಂದ್ಯಗಳನ್ನಾಡಿರುವ ಕೃಣಾಲ್ ಪಾಂಡ್ಯ 130 ರನ್ ಮತ್ತು 2 ವಿಕೆಟ್ ಪಡೆದಿದ್ದಾರೆ. 19 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು 124 ರನ್ ಹಾಗೂ 15 ವಿಕೆಟ್ ಕಬಳಿಸಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಮೂಲಕ ತಮ್ಮ ಐಪಿಎಲ್ ಕರಿಯರ್ ಆರಂಭಿಸಿದ್ದ ಕೃಣಾಲ್ ಪಾಂಡ್ಯ, ಮುಂಬೈ ತಂಡದ ಯಶಸ್ಸಿನ ಪ್ರಮುಖ ಭಾಗವಾಗಿದ್ದರು. 2021ರಲ್ಲಿ ಮುಂಬೈ ಇಂಡಿಯನ್ಸ್ ಪಾಂಡ್ಯ ಅವರನ್ನು ತಂಡದಿಂದ ಕೈಬಿಟ್ಟಿತ್ತು. 2022ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಪಾಂಡ್ಯ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ಖರೀದಿಸಿತ್ತು. ಲಕ್ನೋ ಪರ ಉತ್ತಮ ಪ್ರದರ್ಶನ ತೋರಿ ಬ್ಯಾಟಿಂಗ್ ಮತ್ತು ಬೌಲಿಂಗ್”ನಲ್ಲಿ ಮಿಂಚುವ ಮೂಲಕ ಕೆ.ಎಲ್ ರಾಹುಲ್ ನಾಯಕತ್ವದ ತಂಡ ಪ್ಲೇ ಆಫ್ ತಲುಪುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಇದನ್ನೂ ಓದಿ : Brian Lara : ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಕೆರಿಬಿಯನ್ ಕ್ರಿಕೆಟ್ ದಿಗ್ಗಜ ಮಾಡಿದ್ದೇನು ನೋಡಿ

ಇದನ್ನೂ ಓದಿ : World Athletics Championship: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್’ಷಿಪ್: ಬೆಳ್ಳಿ ಗೆದ್ದು ಇತಿಹಾಸ ಬರೆದ ನೀರಜ್ ಚೋಪ್ರಾ

Krunal Pandya and Pankhuri blessed with baby boy

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular