Hardik Pandya Retirement : ಏಕದಿನ ಕ್ರಿಕೆಟ್‌ನಿಂದ ಆಲ್’ರೌಂಡರ್ ಹಾರ್ದಿಕ್ ಪಾಂಡ್ಯ ನಿವೃತ್ತಿ !

ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್, ಐಪಿಎಲ್-2022 ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya Retirement ) ಪ್ರಸ್ತುಕ ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಆಲ್ರೌಂಡರ್”ಗಳಲ್ಲಿ ಒಬ್ಬರು. ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದ ಪಾಂಡ್ಯ ಸರಣಿಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಭಾರತಕ್ಕೆ ಸರಣಿ ಗೆದ್ದುಕೊಚ್ಟಿದ್ದರು. ಆದರೆ ಮುಂದಿನ ವರ್ಷ ನಡೆಯಲಿರುವ ಐಸಿಸಿ ವಿಶ್ವಕಪ್ ಟೂರ್ನಿಯ ನಂತರ ಏಕದಿನ ಕ್ರಿಕೆಟ್’ನಲ್ಲಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ.

28 ವರ್ಷದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 2023ರ ಐಸಿಸಿ ವಿಶ್ವಕಪ್ ಟೂರ್ನಿಯ ನಂತರ ಏಕದಿನ ಕ್ರಿಕೆಟ್’ನಿಂದ ನಿವೃತ್ತಿಯಾಗಲಿದ್ದಾರಂತೆ. ಇಂಥದ್ದೊಂದು ಅಚ್ಚರಿಯ ಹೇಳಿಕೆ ನೀಡಿರುವುದು ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri).

“ಹಾರ್ದಿಕ್ ಪಾಂಡ್ಯ ಹೆಚ್ಚು ಹೆಚ್ಚು ಟಿ20 ಪಂದ್ಯಗಳನ್ನು ಆಡುವತ್ತ ಗಮನ ಕೇಂದ್ರೀಕರಿಸಿದ್ದಾರೆ. ಮುಂದಿನ ವರ್ಷ ಐಸಿಸಿ ವಿಶ್ವಕಪ್ ಟೂರ್ನಿ ಇರುವ ಕಾರಣ ಸದ್ಯ ಪಾಂಡ್ಯ ಏಕದಿನ ಪಂದ್ಯಗಳನ್ನಾಡುತ್ತಿದ್ದಾರೆ. ವಿಶ್ವಕಪ್ ನಂತರ ಏಕದಿನ ಕ್ರಿಕೆಟ್’ನಿಂದ ಹಾರ್ದಿಕ್ ಪಾಂಡ್ಯ ದೂರ ಸರಿಯುವ ಸಾಧ್ಯತೆಗಳಿವೆ”.

  • ರವಿಶಾಸ್ತ್ರಿ, ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್.

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್”ಗೆ ನಿವೃತ್ತಿ ಘೋಷಿಸಿದ್ದರು. ಟೆಸ್ಟ್ ಹಾಗೂ ಟಿ20 ಕ್ರಿಕೆಟ್ ಕಡೆ ಹೆಚ್ಚಿನ ಗಮನ ಕೇಂದ್ರೀಕರಿಸುವ ಗುರಿಯೊಂದಿಗೆ 50 ಓವರ್’ಗಳ ಫಾರ್ಮ್ಯಾಟ್’ಗೆ ಬೆನ್ ಸ್ಟೋಕ್ಸ್ ಗುಡ್ ಬೈ ಹೇಳಿದ್ದರು. ಸ್ಟೋಕ್ಸ್ ಹಾದಿಯನ್ನೇ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತುಳಿಯುವ ಸಾಧ್ಯತೆಗಳಿವೆ. 2016ರಲ್ಲಿ ಏಕದಿನ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಪಾಂಡ್ಯ 50 ಓವರ್’ಗಳ ಫಾರ್ಮ್ಯಾಟ್’ನಲ್ಲಿ ಇಲ್ಲಿಯವರೆಗೆ ಕೇವಲ 2 ಐಸಿಸಿ ಟೂರ್ನಿಗಳಲ್ಲಿ ಆಡಿದ್ದಾರೆ. 2017ರಲ್ಲಿ ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ್ದ ಪಾಂಡ್ಯ, 2019ರಲ್ಲಿ ಇಂಗ್ಲೆಂಡ್”ನಲ್ಲೇ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದರು. ಇದನ್ನೂ ಓದಿ : Virat Kohli Big Statement : “ಏಷ್ಯಾ ಕಪ್, ವಿಶ್ವಕಪ್ ಗೆಲ್ಲಲು ಯಾವ ತ್ಯಾಗಕ್ಕೂ ಸಿದ್ಧ” ಕೊಹ್ಲಿ ಮಾತಿನ ಅರ್ಥವೇನು ?

ಭಾರತ ಪರ 66 ಏಕದಿನ ಪಂದ್ಯಗಳನ್ನಾಡಿರುವ ಬರೋಡ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, 33.80 ಸರಾಸರಿಯಲ್ಲಿ 8 ಅರ್ಧಶತಕಗಳೊಂದಿಗೆ 1,386 ರನ್ ಕಲೆ ಹಾಕಿದ್ದಾರೆ. ಅಷ್ಟೇ ಅಲ್ಲ, 63 ವಿಕೆಟ್’ಗಳನ್ನೂ ಪಡೆದಿದ್ದಾರೆ. ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ 72 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದ್ದಾಗ 5ನೇ ಕ್ರಮಾಂಕದಲ್ಲಿ ಕ್ರೀಸ್”ಗಿಳಿಸಿದ್ದ ಪಾಂಡ್ಯ, ಸ್ಫೋಟಕ 71 ರನ್ ಸಿಡಿಸಿ ಭಾರತಕ್ಕೆ ಐತಿಹಾಸಿಕ ಸರಣಿ ಗೆಲುವು ತಂದು ಕೊಟ್ಟಿದ್ದರು.

ಇದನ್ನೂ ಓದಿ : World Athletics Championship: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್’ಷಿಪ್: ಬೆಳ್ಳಿ ಗೆದ್ದು ಇತಿಹಾಸ ಬರೆದ ನೀರಜ್ ಚೋಪ್ರಾ

ಇದನ್ನೂ ಓದಿ : Krunal Pandya baby boy : ಹಾರ್ದಿಕ್ ಪಾಂಡ್ಯ ಸಹೋದರ ಕೃಣಾಲ್ ಪಾಂಡ್ಯಗೆ ಗಂಡು ಮಗು

Team India All-rounder Hardik Pandya Retirement from ODI cricket

Comments are closed.