ಬೆಂಗಳೂರು: ಭಾರತಕ್ಕೆ 2 ವಿಶ್ವಕಪ್’ಗಳನ್ನು ಗೆದ್ದುಕೊಟ್ಟಿರುವ ನಾಯಕ ಎಂ.ಎಸ್ ಧೋನಿ (MS Dhoni) ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್’ನಿಂದ 2020ರಲ್ಲೇ ನಿವೃತ್ತಿಯಾಗಿರುವ ಧೋನಿ, ಈ ವರ್ಷ ಐಪಿಎಲ್’ಗೂ ಗುಡ್ ಬೈ ಹೇಳುವ (MS Dhoni Drone Business) ಸಾಧ್ಯತೆಯಿದೆ.
ಧೋನಿ ಕ್ರಿಕೆಟ್ ದಿಗ್ಗಜನಷ್ಟೇ ಅಲ್ಲ, ಕ್ರಿಕೆಟ್ ಹೊರತಾಗಿ ದೊಡ್ಡ ಉದ್ಯಮಿಯೂ ಹೌದು. ಧೋನಿ ಹೆಸರಲ್ಲಿ ಈಗಾಗ್ಲೇ ಸಾಕಷ್ಟು ಉದ್ಯಮಗಳಿವೆ. ಹಲವಾರು ಪ್ಲಾಟ್’ಫಾರ್ಮ್’ಗಳಲ್ಲಿ ಧೋನಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿರುವ ಧೋನಿ ತಮ್ಮ ಹೆಸರಿನ “ಧೋನಿ ಎಂಟರ್’ಟೈನ್ಮೆಂಟ್’ ಪ್ರೊಡಕ್ಷನ್ಸ್ ಕೂಡ ಆರಂಭಿಸಿದ್ದಾರೆ.
ಇದೀಗ ಮಹೇಂದ್ರ ಸಿಂಗ್ ಧೋನಿ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದು, ಡ್ರೋನ್ ಬ್ಯುಸಿನೆಸ್’ನಲ್ಲಿ ಬಂಡವಾಳ ಹೂಡಿದ್ದಾರೆ. (MS Dhoni Drone Business – Garuda Aerospace Drone Company).
ಖ್ಯಾತ ಡ್ರೋನ್ ನಿರ್ಮಾಣ ಕಂಪನಿಯಾಗಿರುವ ಚೆನ್ನೈ ಮೂಲದ ಗರುಡ ಏರೋಸ್ಪೇಸ್’ನಲ್ಲಿ ಧೋನಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಗರುಡ ಏರೋಸ್ಪೇನ್ ಕಂಪನಿ ಕೃಷಿ ಬೆಳೆಗೆ ಔಷಧ ಸಿಂಪಡಿಸುವ ಕಿಸಾನ್ ಡ್ರೋನ್ ಹೆಸರಿನ ಡ್ರೋನ್ ಒಂದನ್ನು ಅಭಿವೃದ್ಧಿ ಪಡಿಸಿದ್ದು, ಈ ಉದ್ಯಮದಲ್ಲಿ ಧೋನಿ ಕೂಡ ಪಾಲುದಾರನಾಗಿದ್ದಾರೆ. ಕಿಸಾನ್ ಡ್ರೋನ್’ನ ಪ್ರೊಮೋದಲ್ಲೂ ಧೋನಿ ನಟಿಸಿದ್ದಾರೆ.
Want to be a Captain in the Game of Drones?
— Garuda Aerospace Pvt Ltd (@garuda_india) January 4, 2023
Our Kisan Drones has DGCA approvals for both Type Certification & Remote Pilot Training Organization (RPTO)
Ab Garuda ke Saath Tum Bhi Ban Jaao #KethonKaKaptain 👇 @msdhonihttps://t.co/ISZ247FYex#KisanDrones #DronePilot pic.twitter.com/L57vcleKHB
ರೈತರಿಗಾಗಿಯೇ ನಿರ್ಮಿಸಲ್ಪಟ್ಟಿರುವ ಡ್ರೋನ್ ಇದು. ಈ ಡ್ರೋನ್ ಅನ್ನು ಖರೀದಿಸಲು ಬಯಸುವ ಯುವ ರೈತರಿಗೆ ಸಾಲ ಸೌಲಭ್ಯ ಹಾಗೂ ಸಬ್ಸಿಡಿ ಕೂಡ ಲಭ್ಯವಿದೆ. ಅಷ್ಟೇ ಅಲ್ಲ, ಡ್ರೋನ್ ಅನ್ನು ಚಲಾಯಿಸುವುದು ಹೇಗೆ ಎಂಬ ಬಗ್ಗೆ ಗರುಡ ಏರೋಸ್ಪೇಸ್ ಕಂಪನಿ ರೈತರಿಗೆ ತರಬೇತಿಯನ್ನೂ ಕೂಡ ನೀಡಲಿದೆ.42 ವರ್ಷದ ಧೋನಿ 2023ರ ಐಪಿಎಲ್’ನಲ್ಲಿ ಕೊನೆಯ ಬಾರಿಗೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷದ ಐಪಿಎಲ್ ನಂತರ ಧೋನಿ ಎಲ್ಲಾ ಕ್ರಿಕೆಟ್’ನ ಎಲ್ಲಾ ಪ್ರಕಾರಗಳಿಗೆ ನಿವೃತ್ತಿ ಘೋಷಿಸಲಿದ್ದಾರೆ.
ಇದನ್ನೂ ಓದಿ : KL Rahul praises Suryakumar yadav : ‘’ಬಾರಿ ಎಡ್ಡೆ ಗೊಬ್ಬಿಯ’’ ಸೂರ್ಯನ ಶತಕಕ್ಕೆ ತುಳುವಿನಲ್ಲಿ ಶಹಬ್ಬಾಸ್ ಹೇಳಿದ ರಾಹುಲ್
ಎಂ.ಎಸ್ ಧೋನಿ ಕ್ರಿಕೆಟ್ ಜಗತ್ತು ಕಂಡ ದಿಗ್ಗಜ ನಾಯಕ. ಐಸಿಸಿ ಟಿ20 ವಿಶ್ವಕಪ್, ಐಸಿಸಿ ಏಕದಿನ ವಿಶ್ವಕಪ್ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಗಳನ್ನು ಗೆದ್ದ ಜಗತ್ತಿನ ಮೊದಲ ಹಾಗೂ ಏಕೈಕ ನಾಯಕನೆಂಬ ವಿಶ್ವದಾಖಲೆ ಧೋನಿ ಹೆಸರಲ್ಲಿದೆ.
MS Dhoni Drone Business: MS Dhoni, the new adventure of the 2 World Cup winning captain who has started the drone business