ಮಂಗಳವಾರ, ಏಪ್ರಿಲ್ 29, 2025
HomeSportsCricketMS Dhoni tennis : ಟೆನಿಸ್ ಡಬಲ್ಸ್ ಚಾಂಪಿಯನ್‌ಷಿಪ್ ಗೆದ್ದ ಕ್ರಿಕೆಟ್ ಮೈದಾನದ ಕೂಲ್ ಕ್ಯಾಪ್ಯನ್...

MS Dhoni tennis : ಟೆನಿಸ್ ಡಬಲ್ಸ್ ಚಾಂಪಿಯನ್‌ಷಿಪ್ ಗೆದ್ದ ಕ್ರಿಕೆಟ್ ಮೈದಾನದ ಕೂಲ್ ಕ್ಯಾಪ್ಯನ್ ಎಂ.ಎಸ್ ಧೋನಿ

- Advertisement -

ರಾಂಚಿ : ಮಹೇಂದ್ರ ಸಿಂಗ್ ಧೋನಿ (MS Dhoni) ಕ್ರಿಕೆಟ್ ಜಗತ್ತು ಕಂಡ ಕೂಲ್ ಕ್ಯಾಪ್ಟನ್, ಸಾರ್ವಕಾಲಿಕ ಶ್ರೇಷ್ಠ ನಾಯಕ. (MS Dhoni tennis) ಭಾರತಕ್ಕೆ ಎರಡು ವಿಶ್ವಕಪ್’ಗಳನ್ನು ಗೆದ್ದುಕೊಟ್ಟಿರುವ ದಿಗ್ಗಜ ನಾಯಕ. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್’ನಲ್ಲಿ 9 ಬಾರಿ ಫೈನಲ್’ಗೇರಿದ್ದು, ನಾಲ್ಕು ಬಾರಿ ಚಾಂಪಿಯನ್ ಕೂಡ ಆಗಿದೆ.

3 ಐಸಿಸಿ ಟ್ರೋಫಿಗಳನ್ನು ಗೆದ್ದಿರುವ ಜಗತ್ತಿನ ಮೊದಲ ಮತ್ತು ಏಕೈಕ ನಾಯಕ ಎಂಬ ವಿಶ್ವದಾಖಲೆಯೂ ಧೋನಿ ಅವರ ಹೆಸರಲ್ಲಿದೆ. ಕ್ರಿಕೆಟ್ ಮೈದಾನದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರುವ ಎಂ.ಎಸ್ ಧೋನಿ ಟೆನಿಸ್’ನಲ್ಲೂ ತಾವು ಪಂಟರ್ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (Jharkhand State Cricket Association – JSCA) ಆಯೋಜಿಸಿದ್ದ ಟೆನಿಸ್ ಚಾಂಪಿಯನ್’ಷಿಪ್’ನ (Tennis Championship 2022) ಡಬಲ್ಸ್ ವಿಭಾಗದಲ್ಲಿ ಧೋನಿ ಚಾಂಪಿಯನ್ ಆಗಿದ್ದಾರೆ. ಸುಮೀತ್ ಕುಮಾರ್ ಬಜಾಜ್ ಜೊತೆಗೂಡಿ ಧೋನಿ ಈ ಪ್ರಶಸ್ತಿ ಗೆದ್ದಿದ್ದಾರೆ. ಧೋನಿ-ಸುಮೀತ್ ಜೋಡಿ ಕನ್ನಯ್ಯ-ರೋಹಿತ್ ಜೋಡಿಯನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಧೋನಿ ಅವರೊಂದಿಗೆ ಪ್ರಶಸ್ತಿ ಎತ್ತಿ ಹಿಡಿದಿರುವ ಫೋಟೋಗಳನ್ನು ಸುಮೀತ್ ಕುಮಾರ್ ಬಜಾಜ್ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದು, “2018, 2019, 2022ರಲ್ಲಿ ಧೋನಿ ಜೊತೆಗೂಡಿ ಹ್ಯಾಟ್ರಿಕ್ ಪ್ರಶಸ್ತಿ ಗೆದ್ದಿದ್ದೇನೆ. ಥ್ಯಾಂಕ್ಯೂ ಧೋನಿ ಸರ್” ಎಂದು ಬರೆದುಕೊಂಡಿದ್ದಾರೆ.

41 ವರ್ಷದ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್’ನಲ್ಲಷ್ಟೇ ಅಲ್ಲ. ಫುಟ್ಬಾಲ್, ಟೆನಿಸ್, ಬ್ಯಾಡ್ಮಿಂಟನ್’ನಲ್ಲೂ ಉತ್ತಮ ಆಟಗಾರ. 41ನೇ ವಯಸ್ಸಿನಲ್ಲೂ ಯುವಕರನ್ನೂ ನಾಚಿಸುವ ಫಿಟ್ನೆಸ್ ಹೊಂದಿರುವ ಧೋನಿ, 2023ರ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಮುಂದಿನ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೊನೆಯ ಬಾರಿ ಮುನ್ನಡೆಸಲಿರುವ MSD, 2023ರ ಐಪಿಎಲ್ ನಂತರ ಎಲ್ಲಾ ಪ್ರಕಾರದ ಕ್ರಿಕೆಟ್’ನಿಂದ ನಿವೃತ್ತಿಯಾಗಲಿದ್ದಾರೆ.

ಇದನ್ನೂ ಓದಿ : India Vs New Zealand T20 : ಮೂರನೇ ಟಿ20 ಪಂದ್ಯ ರೋಚಕ ಟೈ, ಭಾರತಕ್ಕೆ 1-0 ಸರಣಿ ಜಯ

ಇದನ್ನೂ ಓದಿ : Sanju Samson missed opportunity: ಸಂಜು ಸ್ಯಾಮ್ಸನ್‌ಗೆ ಮತ್ತೆ ಕೈ ತಪ್ಪಿದ ಅವಕಾಶ; ಬಿಸಿಸಿಐ ವಿರುದ್ಧ ಫ್ಯಾನ್ಸ್ ಗರಂ

ಇದನ್ನೂ ಓದಿ : Yuvraj Singh: ಯುವರಾಜ್ ಸಿಂಗ್ ಗೆ ‘ಬಂಗಲೆ’ ಸಂಕಷ್ಟ; ಡಿ.8ರಂದು ವಿಚಾರಣೆಗೆ ಹಾಜರಾಗುವಂತೆ ಗೋವಾ ಸರ್ಕಾರದಿಂದ ನೋಟಿಸ್

ಧೋನಿ ಅವರ ನಾಯಕತ್ವದಲ್ಲಿ ಭಾರತ 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು. 2010, 2011, 2018 ಮತ್ತು 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಧೋನಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

MS Dhoni tennis: MS Dhoni is the cool captain of the cricket field who won the tennis doubles championship.

RELATED ARTICLES

Most Popular