ಸೋಮವಾರ, ಏಪ್ರಿಲ್ 28, 2025
HomeSportsCricketZiva Dhoni : ತನ್ನ ಪುಟ್ಟ ಅಭಿಮಾನಿ ಜೀವಾ ಧೋನಿಗೆ ಮೆಸ್ಸಿ ನೀಡಿದ್ರು ಅತ್ಯಂತ ಅಮೂಲ್ಯವಾದ...

Ziva Dhoni : ತನ್ನ ಪುಟ್ಟ ಅಭಿಮಾನಿ ಜೀವಾ ಧೋನಿಗೆ ಮೆಸ್ಸಿ ನೀಡಿದ್ರು ಅತ್ಯಂತ ಅಮೂಲ್ಯವಾದ ಗಿಫ್ಟ್: ಏನದು ಗೊತ್ತಾ?

- Advertisement -

ನವದೆಹಲಿ : ಭಾರತದ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಎಂಎಸ್‌ ಧೋನಿ ಅವರ ಪುತ್ರಿ ಜೀವಾ ಧೋನಿಗೆ (Ziva Dhoni) ಅರ್ಜೆಂಟೀನಾ ಫುಟ್‌ಬಾಲ್‌ ಟೀಮ್‌ ನಾಯಕ ಲಿಯೊನೆಲ್‌ ಮೆಸ್ಸಿ ತಮ್ಮ ಜೆರ್ಸಿಯನ್ನು ಗಿಫ್ಟ್‌ ಆಗಿ ನೀಡಿದ್ದಾರೆ. ಈ ಮುದ್ದಾದ 7 ವರ್ಷದ ಮಗು ಅರ್ಜೆಂಟೀನಾ ಜರ್ಸಿಯನ್ನು ಪಡೆದುಕೊಂಡಿದ್ದು, ಇದೀಗ ಅತ್ಯಂತ ಸಂತೋಷದ ಅಭಿಮಾನಿಯಲ್ಲಿ ಜೀವಾ ಒಬ್ಬಳಾಗಿದ್ದಾಳೆ.

ಈ ಸಂತೋಷವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಜೆರ್ಸಿಯ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಜೀವಾ ಇನ್‌ಸ್ಟಾಗ್ರಾಮ್‌ನಲ್ಲಿ “ತಂದೆಯಂತೆ ಮಗಳಂತೆ” ಎನ್ನುವ ಶೀರ್ಷಿಕೆಯೊಂದಿಗೆ ಪೋಟೋವನ್ನು ಹಂಚಿಕೊಂಡಿದ್ದನ್ನು ಕಾಣಬಹುದಾಗಿದೆ. ಮೆಸ್ಸಿ ತನ್ನ ಅರ್ಜೇಂಟೀನಾ ಜೆರ್ಸಿಗೆ ಪಾರಾ ಜೀವಾ ಎಂದು ಬರೆದು ಸಹಿ ಹಾಕಿ ಗಿಫ್ಟ್‌ ನೀಡಿದ್ದಾರೆ. ಇದೀಗ ಮೆಸ್ಸಿ ಜೆರ್ಸಿಯನ್ನು ಹಾಕಿಕೊಂಡು ಸಖತ್‌ ಕ್ಯೂಟ್‌ ಆಗಿ ಕ್ಯಾಮೆರಾಕ್ಕೆ ಪೋಸ್‌ ನೀಡಿರುವುದನ್ನು ಕಾಣಬಹುದು.

ಈ ಪೋಟೋಗಳನ್ನು ನೋಡಿದರೆ ತಂದೆಯಂತೆ ಮಗಳಿಗೂ ಪುಟ್‌ಬಾಲ್‌ನಲ್ಲಿ ಇರುವ ಆಸಕ್ತಿಯನ್ನು ನೋಡಬಹುದು. ಹೌದು ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಕ್ರಿಕೆಟ್‌ಗಿಂತ ಮೊದಲು ಪುಟ್‌ಬಾಲ್‌ ಆಟದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ವಿಚಾರ ಎಲ್ಲರಿಗೂ ತಿಳಿದಿರುವ ವಿಷಯ. ಬಾಲ್ಯದಲ್ಲಿ ಧೋನಿ ಬ್ಯಾಟ್‌ ಹಿಡಿಯುವ ಮೊದಲು ಪುಟ್‌ಬಾಲ್‌ ತರಬೇತಿಯನ್ನು ಪಡೆದಿದ್ದರು.

ಇದನ್ನೂ ಓದಿ : Rohit Rahul Kohli out of T20 team: ಟಿ20 ತಂಡಕ್ಕೆ ಮೇಜರ್ ಸರ್ಜರಿ; ತ್ರಿಮೂರ್ತಿಗಳು ಇನ್ನು ಟಿ20ಯಲ್ಲಿ ಕಾಣಿಸಿಕೊಳ್ಳುವುದು ಡೌಟ್!

ಇದನ್ನೂ ಓದಿ : KL Rahul removed: ಭಾರತಕ್ಕೆ 7 ಸತತ ಗೆಲುವು ತಂದುಕೊಟ್ಟ ರಾಹುಲ್‌ಗೆ ಉಪನಾಯಕತ್ವದಿಂದ ಕೈ ಕೊಟ್ಟಿದ್ದು ಎಷ್ಟು ಸರಿ?

ಇದನ್ನೂ ಓದಿ : Shikhar Dhawan out : ಟೀಮ್ ಇಂಡಿಯಾದಲ್ಲಿ ಶಿಖರ್ ಶಿಕಾರಿಗೆ ಬ್ರೇಕ್, ಒಂದು ದ್ವಿಶತಕಕ್ಕೆ ಅಂತ್ಯಗೊಂಡಿತು ಗಬ್ಬರ್ ಆಟ!

ಅಷ್ಟೇ ಅಲ್ಲದೇ ಅವರಿಗೆ ಗೋಲ್‌ ಕೀಪರ್‌ ಆಗಬೇಕು ಎನ್ನುವ ಆಸೆ ಇತ್ತು. ನಂತರ ಕ್ರಿಕೆಟ್‌ಗರಾದ ಮೇಲೂ ಧೋನಿ ಪುಟ್ಬಾಲ್‌ ಪಂದ್ಯಗಳಲ್ಲಿ ಹಾಜರಾಗುವ ಮೂಲಕ ಅದರ ಮೇಲಿನ ಆಸಕ್ತಿ ಮತ್ತು ಪ್ರೀತಿಯನ್ನು ಇಂದಿಗೂ ಮುಂದುವರೆಸಿದ್ದಾರೆ. ಎಂ ಎಸ್‌ ಧೋನಿ ಎಫ್‌ಐಎಫ್‌ಎ ವಿಶ್ವಕಪ್ ವಿಜೇತ ಮೆಸ್ಸಿ ಅವರ ದೊಡ್ಡ ಅಭಿಮಾನಿ ಮತ್ತು ಇಂಗ್ಲಿಷ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್‌ನ ಅಭಿಮಾನಿಯಾಗಿದ್ದಾರೆ.

MS Dhoni’s daughter Ziva Dhoni got Argentina jersey signed by Lionel Messi

RELATED ARTICLES

Most Popular