ಮಂಗಳವಾರ, ಏಪ್ರಿಲ್ 29, 2025
HomeSportsCricketIPL 2023 :ಕೀರಾನ್ ಪೊಲಾರ್ಡ್ ಗೆ ಕೋಕ್ ಕೊಟ್ಟ ಮುಂಬೈ ಇಂಡಿಯನ್ಸ್‌

IPL 2023 :ಕೀರಾನ್ ಪೊಲಾರ್ಡ್ ಗೆ ಕೋಕ್ ಕೊಟ್ಟ ಮುಂಬೈ ಇಂಡಿಯನ್ಸ್‌

- Advertisement -

Mumbai Indians release Keiron Pollard : ಐಪಿಎಲ್ 16ನೇ ಸೀಸನ್‌ಗೆ (IPL 2023) ಭರದ ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿವೆ. ಐಪಿಎಲ್ 2023ರ ಕಿರು ಹರಾಜು ಪ್ರಕ್ರಿಯೆ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ. ಹರಾಜಿಗೂ ಮೊದಲೇ ಪ್ರಾಂಚೈಸಿಗಳು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಲಿರುವ ಆಟಗಾರರ ಪಟ್ಟಿಯನ್ನು ನವೆಂಬರ್ 15ರ ಒಳಗೆ ಬಿಡುಗಡೆ ಮಾಡುವಂತೆ ಬಿಸಿಸಿಐ ಕೇಳಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಖ್ಯಾತ ಆಲ್ ರೌಂಡರ್ ಕೀರಾನ್ ಪೊಲಾರ್ಡ್ ಸೇರಿದಂತೆ ಪ್ರಮುಖ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಲು ಸಜ್ಜಾಗಿದೆ.

ವರದಿಗಳ ಪ್ರಕಾರ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳು ಉತ್ತಮ ಸಾಧನೆಯನ್ನು ಮಾಡಿವೆ. ಆದರೆ ಕಳೆದ ಬಾರಿ ಆವೃತ್ತಿಯಲ್ಲಿ ಎರಡೂ ತಂಡಗಳು ನೀರಸ ಪ್ರದರ್ಶನವನ್ನು ತೋರಿವೆ. ಇದೇ ಕಾರಣಕ್ಕೆ ಮುಂಬರುವ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಎರಡೂ ತಂಡಗಳು ಹಾತೊರೆಯುತ್ತಿವೆ. ಹೀಗಾಗಿ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡಲಾಗರ ಆಟಗಾರರನ್ನು ತಂಡದಿಂದ ಕೈ ಬಿಡಲು ತಯಾರಿ ನಡೆಸಿವೆ.

ಬಿಸಿಸಿಐ ಸೂಚನೆಯ ಮೇರೆಗೆ ಈಗಾಗಲೇ ಬಹುತೇಕ ತಂಡಗಳು ಬಿಸಿಸಿಐಗೆ ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಕೆ ಮಾಡಿವೆ. 2023 ಮಿನಿ ಹರಾಜು ಪ್ರಕ್ರಿಯೆಯಲ್ಲಿಯೇ ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಬಲಾಢ್ಯ ಆಟಗಾರ ಕೀರಾನ್ ಪೊಲಾರ್ಡ್ ಅವರನ್ನು ಬಿಡುಗಡೆ ಮಾಡಿದೆ.

ಕೀರಾನ್ ಪೊಲಾರ್ಡ್ ಮಾತ್ರವಲ್ಲದೇ ಫ್ಯಾಬ್ ಅಲೆನ್, ಟೈಮಲ್ ಮಿಲಿಸ್ ಅವರನ್ನು ಕೂಡ ಬಿಡುಗಡೆ ಮಾಡಿದೆ.2010 ರಿಂದಲೂ ಕೀರಾನ್ ಪೊಲಾರ್ಡ್ ಮುಂಬೈ ಇಂಡಿಯನ್ಸ್‌ ತಂಡದಲ್ಲಿದ್ದಾರೆ. ಎಲ್ಲಾ ಋತುವಿನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದರೂ ಕೂಡ ಕಳೆದ ಆವೃತ್ತಿಯಲ್ಲಿ ರನ್ ಗಳಿಸಲು ಹೆಣಗಾಡಿದ್ದರು. ಅಲ್ಲದೇ ಬೌಲಿಂಗ್ ನಲ್ಲಿ ವಿಕೆಟ್ ಉರುಳಿಸಲು ಪರದಾಡಿದ್ದಾರೆ.

ನವೆಂಬರ್ 15 ಎಲ್ಲಾ ಫ್ರಾಂಚೈಸಿಗಳಿಗೆ ತಮ್ಮ ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಬಿಸಿಸಿಐ ಒದಗಿಸಿದ ನಂತರದಲ್ಲಿ ಎಲ್ಲಾ ಆಟಗಾರರ ವಿವರವನ್ನು ಬಿಸಿಸಿಐ ಬಿಡುಗಡೆ ಮಾಡಲಿದೆ. ಆದರೆ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈಗಾಗಲೇ ಬಿಸಿಸಿಐಗೆ ತಮ್ಮ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಮುಂಬೈ ತಂಡ ಬಲಾಢ್ಯ ಆಟಗಾರನನ್ನು ತಂಡದಿಂದ ಬಿಡುಗಡೆ ಮಾಡಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾತ್ರ ರವೀಂದ್ರ ಜಡೇಜಾ ಅವರನ್ನು ತಂಡದಲ್ಲಿಯೇ ಉಳಿಸಿಕೊಂಡಿದೆ.

ನಾಯಕ ರೋಹಿತ್ ಶರ್ಮಾ, ಡೆವಾಲ್ಡ್ ಬ್ರೂವಿಸ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೇನಿಯಲ್ ಸಾಮ್ಸ್, ಟಿಮ್ ಡೇವಿಡ್, ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ತಿಲಕ್ ವರ್ಮಾ ಮುಂದಿನ ಋತುವಿನಲ್ಲಿಯೂ ಮುಂಬೈ ಇಂಡಿಯನ್ಸ್ ಶರ್ಟ್ ಧರಿಸಲಿದ್ದಾರೆ. ಆದರೆ ಫ್ಯಾಬಿಯನ್ ಅಲೆನ್, ಕೀರಾನ್ ಪೊಲಾರ್ಡ್, ಟೈಮಲ್ ಮಿಲ್ಸ್, ಮಯಾಂಕ್ ಮಾರ್ಕಾಂಡೆ ಮತ್ತು ಹೃತಿಕ್ ಶೌಕಿನ್ ತಂಡದಿಂದ ಬಿಡುಗಡೆಗೊಳ್ಳಲಿದ್ದಾರೆ.

ಇದನ್ನೂ ಓದಿ : Rahul Dravid : ಟಿ20 ವಿಶ್ವಕಪ್ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ತೊರೆದ ಕೋಚ್ ದ್ರಾವಿಡ್

ಇದನ್ನೂ ಓದಿ : T20 World Cup Defeat : ಟಿ20 ವಿಶ್ವಕಪ್ ಸೋಲು: ಈ ಆಟಗಾರರಿಗೆ ಇನ್ನು ಮುಂದೆ ಭಾರತ ಟಿ20 ತಂಡದಲ್ಲಿ ಸ್ಥಾನವಿಲ್ಲ!

Mumbai Indians release Keiron Pollard from team for IPL 2023

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular