ಸೋಮವಾರ, ಏಪ್ರಿಲ್ 28, 2025
HomeSportsCricketNo Place for Virat Kohli : ಸೆಹ್ವಾಗ್ ಟಿ20 ವಿಶ್ವಕಪ್ ತಂಡದಲ್ಲಿ ವಿರಾಟ್ ಕೊಹ್ಲಿಯೇ...

No Place for Virat Kohli : ಸೆಹ್ವಾಗ್ ಟಿ20 ವಿಶ್ವಕಪ್ ತಂಡದಲ್ಲಿ ವಿರಾಟ್ ಕೊಹ್ಲಿಯೇ ಇಲ್ಲ

- Advertisement -

ಬೆಂಗಳೂರು: (No Place for Virat Kohli) ಈ ವರ್ಷ ನಡೆಯುವ ಐಸಿಸಿ ಟಿ20 ವಿಶ್ವಕಪ್ (ICC T20 World Cup 2022) ಗೆಲ್ಲುವುದು ಭಾರತ ಕ್ರಿಕೆಟ್ ತಂಡದ ಪ್ರೈಮ್ ಟಾರ್ಗೆಟ್. 2013ರಲ್ಲಿ ಎಂ.ಎಸ್ ಧೋನಿ ನಾಯಕತ್ವದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಕಳೆದ 9 ವರ್ಷಗಳಿಂದ ಟೀಮ್ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 2016ರ ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಿತ್ತು. ಸೆಮೀಸ್”ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋತಿತ್ತು. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್”ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು.

ಈ ವರ್ಷ ಟಿ20 ವಿಶ್ವಕಪ್ ಗೆದ್ದು ಐಸಿಸಿ ಟ್ರೋಫಿ ಬರಕ್ಕೆ ಅಂತ್ಯ ಹಾಡಲು ಟೀಮ್ ಇಂಡಿಯಾ ಪಣತೊಟ್ಟಿದೆ. ಆಸ್ಟ್ರೇಲಿಯಾದಲ್ಲಿ ಸೆಪ್ಟೆಂಬರ್-ಅಕ್ಟೋಬರ್”ನಲ್ಲಿ ನಡೆಯುವ ಟೂರ್ನಿಗೆ ಬಲಿಷ್ಠ ತಂಡವನ್ನು ಕಳುಹಿಸಲು ಬಿಸಿಸಿಐ ಪ್ಲಾನ್ ಮಾಡುತ್ತಿದೆ. ಇದೇ ವೇಳೆ ಮಾಜಿ ಕ್ರಿಕೆಟಿಗರು ತಮ್ಮದೇ ಟಿ20 ತಂಡವನ್ನು ಆಯ್ಕೆ ಮಾಡುತ್ತಿದ್ದಾರೆ. ಅದೇ ರೀತಿ ಭಾರತ ತಂಡದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ (Virender Sehwag) ಕೂಡ ಟಿ20 ವಿಶ್ವಕಪ್”ನಲ್ಲಿ ಆಡಲಿರುವ ಕೆಲ ಆಟಗಾರರನ್ನು ಹೆಸರಿಸಿದ್ದಾರೆ. ಟೀಮ್ ಇಂಡಿಯಾ ಪರ ಟಾಪ್-3ನಲ್ಲಿ ಈ ಮೂವರೇ ಆಡಬೇಕೆಂದು ಸೆಹ್ವಾಗ್ ಹೇಳಿದ್ದಾರೆ. ಸೆಹ್ವಾಗ್ ಹೆಸರಿಸಿರುವ ಟಾಪ್-3 ಆಟಗಾರರಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರೇ ಇಲ್ಲ.

No Place for Virat Kohli : ವೀರೂ ಪ್ರಕಾರ ಟಾಪ್-3ನಲ್ಲಿ ಆಡಲಿರುವ ಆಟಗಾರರು ಯಾರು ?

“ಟಿ20ಯಲ್ಲಿ ಹಾರ್ಡ್ ಹಿಟ್ಟರ್‌ಗಳ ವಿಚಾರದಲ್ಲಿ ಭಾರತಕ್ಕೆ ಸಾಕಷ್ಟು ಆಯ್ಕೆಗಳಿವೆ. ನನ್ನ ಪ್ರಕಾರ ಟಿ20 ವಿಶ್ವಕಪ್”ನಲ್ಲಿ ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಕೆ.ಎಲ್ ರಾಹುಲ್ ಟಾಪ್-3ನಲ್ಲಿ ಆಡಬೇಕು. ಎಡಗೈ-ಬಲಗೈ ಓಪನಿಂಗ್ ಜೋಡಿ ಬೇಕು ಎಂದಾದಲ್ಲಿ ರೋಹಿತ್ ಮತ್ತು ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಬಹುದು. ಆರಂಭಿಕರಾಗಿ ರಾಹುಲ್-ಇಶಾನ್ ಜೋಡಿಯ ಆಯ್ಕೆಯೂ ಇಂಟ್ರೆಸ್ಟಿಂಗ್ ಆಗಿರಲಿದೆ”.
ವೀರೇಂದ್ರ ಸೆಹ್ವಾಗ್, ಮಾಜಿ ಕ್ರಿಕೆಟಿಗ.

ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಟಾಪ್-3ನಿಂದ ಹೊರಗಿಟ್ಟಿರುವ ಸೆಹ್ವಾಗ್ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ಕಳೆದೊಂದು ದಶಕದಲ್ಲಿ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ರನ್ ಹೊಳೆಯನ್ನೇ ಹರಿಸಿದ್ದಾರೆ. ಆದರೆ ಕಳೆದ 2 ವರ್ಷಗಳಲ್ಲಿ ಕೊಹ್ಲಿ ಅಷ್ಟಾಗಿ ಸದ್ದು ಮಾಡದ ಕಾರಣ, ವಿಶ್ವಕಪ್ ಟಾಪ್-3ನಲ್ಲಿ ಕೊಹ್ಲಿ ಹೆಸರನ್ನು ಸೆಹ್ವಾಗ್ ಕೈಬಿಟ್ಟಿದ್ದಾರೆ. ಜಮ್ಮು ಎಕ್ಸ್”ಪ್ರೆಸ್ ಉಮ್ರಾನ್ ಮಲಿಕ್ ಕೂಡ ಟಿ20 ವಿಶ್ವಕಪ್ ತಂಡದಲ್ಲಿರಬೇಕೆಂದು ಸೆಹ್ವಾಗ್ ಹೇಳಿದ್ದಾರೆ.

ಇದನ್ನೂ ಓದಿ : India Vs England test : ಭಾರತವನ್ನು ಸೋಲಿಸುವುದು ಸುಲಭವಲ್ಲ.. ಇಂಗ್ಲೆಂಡ್ ಎಚ್ಚರಿಕೆ ಕೊಟ್ಟ ಸ್ವಂತ ಆಟಗಾರ

ಇದನ್ನೂ ಓದಿ : Rohit Sharma’s daughter : ಕ್ಯೂಟ್ ಕ್ಯೂಟ್ ಆಗಿ ತಂದೆಯ ಹೆಲ್ತ್ ರಿಪೋರ್ಟ್ ಕೊಟ್ಟ ರೋಹಿತ್ ಶರ್ಮಾ ಮಗಳು

No Place for Virat Kohli in Sehwag’s Top-3 for ICC T20 WC

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular