ಸೋಮವಾರ, ಏಪ್ರಿಲ್ 28, 2025
HomeSportsCricketHardik Pandya Amit Shah: ಅಮಿತ್ ಶಾ ಜೊತೆ ಫೋಟೋ, ಸುಳ್ಳು ಹೇಳಿ ಸಿಕ್ಕಿ ಬಿದ್ದ...

Hardik Pandya Amit Shah: ಅಮಿತ್ ಶಾ ಜೊತೆ ಫೋಟೋ, ಸುಳ್ಳು ಹೇಳಿ ಸಿಕ್ಕಿ ಬಿದ್ದ ಚಾಲಾಕಿ ಪಾಂಡ್ಯ

- Advertisement -

ಬೆಂಗಳೂರು: Amit Shah Hardik Pandya : ಟೀಮ್ ಇಂಡಿಯಾ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅದ್ಭುತ ಕ್ರಿಕೆಟಿಗ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹಾಗೇ ಚಾಲಾಕಿ ಕೂಡ ಹೌದು. ಅಂತಹ ಚಾಲಾಕಿ ಪಾಂಡ್ಯ ಇದೀಗ ಸುಳ್ಳು ಹೇಳಿ ಸಿಕ್ಕಿ ಬಿದ್ದಿದ್ದಾರೆ. 2022ನೇ ವರ್ಷದ ಕೊನೇ ದಿನ, ಅಂದ್ರೆ ಡಿಸೆಂಬರ್ 31ರಂದು ಹಾರ್ದಿಕ್ ಪಾಂಡ್ಯ ಟ್ವೀಟ್ ಒಂದನ್ನು ಮಾಡಿದ್ರು. ಗೃಹ ಸಚಿವ ಅಮಿತ್ ಶಾ ಅವರನ್ನು ಸಹೋದರ ಕೃಣಾಲ್ ಪಾಂಡ್ಯ ಜೊತೆ ಭೇಟಿಯಾಗಿದ್ದ ಪಾಂಡ್ಯ ಈ ಫೋಟವನ್ನು ಟ್ವಿಟರ್’ನಲ್ಲಿ ಪ್ರಕಟಿಸಿದ್ದರು. ಅಷ್ಟೇ ಅಲ್ಲ..,

“ನಿಮ್ಮೊಂದಿಗೆ ಅತ್ಯಮೂಲ್ಯ ಸಮಯವನ್ನು ಕಳೆಯಲು ನಮ್ಮನ್ನು ಆಹ್ವಾನಿಸಿದ್ದಕ್ಕೆ ಧನ್ಯವಾದಗಳು ಅಮಿತ್ ಶಾ ಜೀ. ನಿಮ್ಮನ್ನು ಭೇಟಿ ಮಾಡಿದ್ದು ನಮ್ಮ ಪಾಲಿಗೆ ಗೌರವದ ಕ್ಷಣ” ಎಂದು ಟ್ವೀಟ್ ಮಾಡಿದ್ದರು.

ಆದರೆ ಅಸಲಿ ಸಂಗತಿ ಏನಂದ್ರೆ ಹಾರ್ದಿಕ್ ಪಾಂಡ್ಯ ಅವರನ್ನಾಗಲೀ, ಕೃಣಾಲ್ ಪಾಂಡ್ಯ ಅವರನ್ನಾಗಲೀ ಗೃಹ ಸಚಿವ ಅಮಿತ್ ಶಾ ಆಹ್ವಾನಿಸಿಯೇ ಇಲ್ಲ. ಸ್ವತಃ ಪಾಂಡ್ಯ ಸಹೋದರರೇ ಹೋಗಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್’ನಲ್ಲಿ ಈ ಭೇಟಿ ನಡೆದಿದೆ.

ಡಿಸೆಂಬರ್ 29, 30 ಹಾಗೂ 31ರಂದು ಕರ್ನಾಟಕದಲ್ಲಿದ್ದ ಅಮಿತ್ ಶಾ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್’ನಲ್ಲಿ ತಂಗಿದ್ದರು. ಅದೇ ಹೋಟೆಲ್’ನಲ್ಲಿ ಪಾಂಡ್ಯ ಬ್ರದರ್ಸ್ ಕೂಡ ವಾಸ್ತವ್ಯ ಹೂಡಿದ್ದರು. ಗೃಹ ಸಚಿವರು ವಾಸ್ತವ್ಯ ಹೂಡಿರುವ ಕಾರಣ ಹೋಟೆಲ್ ತೆರವುಗೊಳಿಸುವಂತೆ ಪಾಂಡ್ಯ ಸಹೋದರರಿಗೆ ಹೋಟೆಲ್ ಸಿಬ್ಬಂದಿ ತಾಕೀತು ಮಾಡಿದ್ದಾರೆ. ಆರಂಭದಲ್ಲಿ ಇದಕ್ಕೆ ಒಪ್ಪದ ಪಾಂಡ್ಯ ಬ್ರದರ್ಸ್, ನಂತರ ಇದು ಶಿಷ್ಟಾಚಾರದ ಸಂಗತಿ ಎಂಬುದು ಅರಿವಾಗುತ್ತಲೇ ಹೋಟೆಲ್ ಖಾಲಿ ಮಾಡಿದ್ದಾರೆ. ಹೋಟೆಲ್’ನಿಂದ ತೆರಳುವ ವೇಳೆ ಗೃಹ ಸಚಿವ ಭದ್ರತಾ ಸಿಬ್ಬಂದಿಯನ್ನು ಕಾಡಿ ಬೇಡಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಪಾಂಡ್ಯ ಸಹೋದರರು ಗುಜರಾತ್’ನವರಾಗಿರುವ ಕಾರಣ ಭೇಟಿ ಅಮಿತ್ ಶಾ ಒಪ್ಪಿಗೆ ಕೊಟ್ಟಿದ್ದರು.

ಅಮಿತ್ ಶಾ ಅವರ ಭೇಟಿಯ ಚಿತ್ರವನ್ನು ಪಾಂಡ್ಯ ಟ್ವಿಟರ್’ನಲ್ಲಿ ಪ್ರಕಟಿಸಿರುವುದರ ಹಿಂದೆಯೂ ಲೆಕ್ಕಾಚಾರವೊಂದಿದೆ. ಅದೇನಂದ್ರೆ ನನ್ನ ಪ್ರಭಾವ ಎಷ್ಟಿದೆ ಎಂಬುದನ್ನು ಕ್ರಿಕೆಟ್ ಜಗತ್ತಿಗೆ ತೋರಿಸುವುದು. ದೇಶದ ಗೃಹ ಸಚಿವರೇ ನನಗೆ ಅತ್ಯಾಪ್ತರು ಎಂಬ ಸಂದೇಶವನ್ನು ಭಾರತೀಯ ಕ್ರಿಕೆಟ್ ಸರ್ಕಲ್’ಗೆ ರವಾನಿಸುವ ಉದ್ದೇಶದಿಂದ ಅಮಿತ್ ಶಾ ಜೊತೆಗಿನ ಫೋಟೋವನ್ನು ಹಾರ್ದಿಕ್ ಪಾಂಡ್ಯ ಟ್ವಿಟರ್’ನಲ್ಲಿ ಪ್ರಕಟಿಸಿದ್ದಾರೆ. ಅಮಿತ್ ಶಾ ಅವರ ಪುತ್ರ ಜಯ್ ಶಾ ಬಿಸಿಸಿಐ ಕಾರ್ಯದರ್ಶಿ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ : Ranji Karnataka : V3 ಸ್ಟಾರ್ಸ್ ದಾಳಿಗೆ ಛತ್ತೀಸ್‌ಗಢ ಚಿತ್, ಕ್ಯಾಪ್ಟನ್ ಮಯಾಂಕ್ ಶತಕದ ಅಬ್ಬರ

ಇದನ್ನೂ ಓದಿ : Delhi Capital new Captain: ಕನ್ನಡಿಗ ಮನೀಶ್ ಪಾಂಡೆಗೆ ಒಲಿಯುತ್ತಾ ಡೆಲ್ಲಿ ಕ್ಯಾಪ್ಟನ್ ಪಟ್ಟ? ಈ ಮೂವರಲ್ಲಿ ಯಾರು ಹೊಸ ನಾಯಕ?

Photo with Amit Shah Hardik Pandya who was caught lying

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular