ಟ್ರಿನಿಡಾಡ್: ಒಬ್ಬ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದ ಭಾರತದ ಬ್ಯಾಟಿಂಗ್ ದಿಗ್ಗಜ.. ಮತ್ತೊಬ್ಬ ಅದೇ ಕ್ರಿಕೆಟ್ ಜಗತ್ತಿಗೆ ಸಿಡಿಲನಂತೆ ಎರಗಿದ ವೆಸ್ಟ್ ಇಂಡೀಸ್”ನ ಸಿಡಿಲಮರಿ. ಆ ಇಬ್ಬರೂ ಒಂದೇ ಕಡೆ ಸೇರಿದ್ರೆ ಕ್ರಿಕೆಟ್ ಪ್ರಿಯರ ಪಾಲಿಗೆ ಹಬ್ಬ. ಅಂಥದ್ದೊಂದು ಸಂದರ್ಭ ವೆಸ್ಟ್ ಇಂಡೀಸ್’ನ ಟ್ರಿನಿಡಾಡ್’ನಲ್ಲಿ ಒದಗಿ ಬಂದಿದೆ. “ದಿ ಗ್ರೇಟ್ ವಾಲ್ ಆಫ್ ಇಂಡಿಯಾ” ಖ್ಯಾತಿಯ ರಾಹುಲ್ ದ್ರಾವಿಡ್ (Rahul Dravid) ಮತ್ತು “ಪ್ರಿನ್ಸ್ ಆಫ್ ಟ್ರಿನಿಡಾಡ್” ಖ್ಯಾತಿಯ ವಿಂಡೀಸ್ ಬ್ಯಾಟಿಂಗ್ ದಂತಕಥೆ ಬ್ರಿಯಾನ್ ಲಾರಾ (Brian Lara) ಟ್ರಿನಿಡಾಡ್’ನಲ್ಲಿ ಭೇಟಿ (Rahul Dravid meets Brian Lara) ಮಾಡಿದ್ದಾರೆ. ದ್ರಾವಿಡ್-ಲಾರಾ ಭೇಟಿಯ ಫೋಟೋವನ್ನು ಸ್ವತಃ ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.
ಟೀಮ್ ಇಂಡಿಯಾದ ಹಾಲಿ ಕೋಚ್ ರಾಹುಲ್ ದ್ರಾವಿಡ್ ಮತ್ತು ಕೆರೆಬಿಯನ್ ದಿಗ್ಗಜ ಬ್ರಿಯಾನ್ ಲಾರಾ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಫೋಟೋ ನೋಡಿ ಹರ್ಷ ವ್ಯಕ್ತಪಡಿಸುತ್ತಿರುವ ಕ್ರಿಕೆಟ್ ಪ್ರಿಯರು “ಒಂದೇ ಚಿತ್ರದಲ್ಲಿ 46,566 ರನ್, 101 ಸೆಂಚುರಿ ಅಂತೆಲ್ಲಾ ಟ್ವಿಟರ್”ನಲ್ಲಿ ಬರೆದುಕೊಂಡಿದ್ದಾರೆ.
ಭಾರತ ಕ್ರಿಕೆಟ್ ತಂಡ ಟ್ರಿನಿಡಾಡ್”ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ (India Vs West Indies ODI Series) 3 ಪಂದ್ಯಗಳ ಏಕದಿನ ಸರಣಿಯನ್ನಾಡುತ್ತಿದೆ. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ರೋಚಕ 3 ರನ್’ಗಳ ಗೆಲುವು ದಾಖಲಿಸಿರುವ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟ್ರಿನಿಡಾಡ್”ನವರೇ ಆಗಿರುವ ಬ್ರಿಯಾನ್ ಲಾರಾ, ಪಂದ್ಯ ಮುಗಿದ ನಂತರ ಟೀಮ್ ಇಂಡಿಯಾ ಕೋಚ್ ದ್ರಾವಿಡ್ ಅವರನ್ನು ಭೇಟಿ ಮಾಡಿದ್ದಾರೆ. 53 ವರ್ಷದ ಬ್ರಿಯಾರ್ ಲಾರಾ ಅಂತಾರಾಷ್ಟ್ರೀಯ ಕ್ರಿಕೆಟ್”ನಲ್ಲಿ 430 ಪಂದ್ಯಗಳಿಂದ 53 ಶತಕಗಳ ಸಹಿತ 22,358 ರನ್ (ಟೆಸ್ಟ್: 11953 ರನ್, ಏಕದಿನ: 10405 ರನ್) ಕಲೆ ಹಾಕಿದ್ದಾರೆ. 49 ವರ್ಷದ ದ್ರಾವಿಡ್ 509 ಅಂತಾರಾಷ್ಟ್ರೀಯ ಪಂದ್ಯಗಳಿಂದ 48 ಶತಕಗಳ ಸಹಿತ 24,208 ರನ್ (ಟೆಸ್ಟ್: 13288 ರನ್, ಏಕದಿನ: 1 10889 ರನ್, ಟಿ20: 31) ಗಳಿಸಿದ್ದಾರೆ.
ಇದನ್ನೂ ಓದಿ : KL Rahul Health Report : ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡಲಿದ್ದಾರೆ ರಾಹುಲ್ ?
ಇದನ್ನೂ ಓದಿ : T20 World Cup 2022 India : ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಾಡಲಿದೆ ಟೀಮ್ ಇಂಡಿಯಾ
Rahul Dravid meets Brian Lara in Trinidad, 46,566 runs in one frame