Ranji trophy 2023 Updates : ಫಾಲೋ ಆನ್ ಹೇರಿದರೂ ಗೋವಾ ವಿರುದ್ಧ ಸಿಗದ ಜಯ, 3ನೇ ಸ್ಥಾನಕ್ಕೆ ಕುಸಿದ ಕರ್ನಾಟಕ

ಪೊರ್ವರಿಮ್ (ಗೋವಾ): Ranji trophy 2023 Updates : ಆತಿಥೇಯ ಗೋವಾ ವಿರುದ್ಧ ರಣದಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟಿದೆ. ಪೊರ್ವರಿಮ್’ನಲ್ಲಿರುವ ಗೋವಾ ಕ್ರಿಕೆಟ್ ಅಸೋಸಿಯಷನ್ ಅಕಾಡೆಮಿ ಮೈದಾನದಲ್ಲಿ ಶುಕ್ರವಾರ ಅಂತ್ಯಗೊಂಡ ರಣಜಿ ಟ್ರೋಫಿ (Ranji Trophy 2022-23) ಎಲೈಟ್ ‘ಸಿ’ ಗುಂಪಿನ ಪಂದ್ಯ ಡ್ರಾಗೊಳ್ಳುವುದರೊಂದಿಗೆ ಕರ್ನಾಟಕ 3 ಅಂಕಗಳಿಗಷ್ಟೇ ತೃಪ್ತಿಪಟ್ಟಿತು. ಇದರೊಂದಿಗೆ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ ಎಲೈಟ್ ‘ಸಿ’ ಗುಂಪಿನಲ್ಲಿ ಆಡಿದ 3 ಪಂದ್ಯಗಳಿಂದ 13 ಅಂಕ ಸಂಪಾದಿಸಿ 3ನೇ ಸ್ಥಾನಕ್ಕೆ ಕುಸಿಯಿತು.

ಫಾಲೋ ಆನ್ ಭೀತಿಯಲ್ಲಿ 8 ವಿಕೆಟ್ ನಷ್ಟಕ್ಕೆ 321 ರನ್’ಗಳಿಂದ 4ನೇ ದಿನದಾಟ ಮುಂದುವರಿಸಿದ ಗೋವಾ, ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 373 ರನ್’ಗಳಿಗೆ ಆಲೌಟಾಯಿತು. ಕರ್ನಾಟಕ ಪರ ಆಫ್ ಸ್ಪಿನ್ನರ್ ಕೃಷ್ಣಪ್ಪ ಗೌತಮ್ (3/140) ಯುವ ಮಧ್ಯಮ ವೇಗಿ ವೈಶಾಕ್ ವಿಜಯ್ ಕುಮಾರ್ (3/60) ಹಾಗೂ ಯುವ ಎಡಗೈ ಸ್ಪಿನ್ನರ್ ಶುಭಾಂಗ್ ಹೆಗ್ಡೆ (3/80) ತಲಾ ಮೂರು ವಿಕೆಟ್ ಉರುಳಿಸಿದರು. ಉಳಿದೊಂದು ವಿಕೆಟ್ ವೇಗಿ ರೋನಿತ್ ಮೋರೆ ಪಾಲಾಯಿತು.

ಪ್ರಥಮ ಇನ್ನಿಂಗ್ಸ್’ನಲ್ಲಿ 7 ವಿಕೆಟ್’ಗೆ 603 ರನ್ ಕಲೆ ಹಾಕಿದ್ದ ಕರ್ನಾಟಕ 230 ರನ್’ಗಳ ದೊಡ್ಡ ಮುನ್ನಡೆ ಪಡೆದು ಗೋವಾ ಮೇಲೆ ಫಾಲೋ ಆನ್ ಹೇರಿತು. ನಂತರ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಗೋವಾ 45 ಓವರ್’ಗಳಲ್ಲಿ 3 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿದಾಗ ಪಂದ್ಯವನ್ನು ಡ್ರಾಗೊಳಿಸಲು ನಿರ್ಧರಿಸಲಾಯಿತು.
ಕರ್ನಾಟಕದ ಪ್ರಥಮ ಇನ್ನಿಂಗ್ಸ್’ನಲ್ಲಿ ಅಮೋಘ ದ್ವಿಶತಕ (208 ರನ್, 186 ಎಸೆತ, 14 ಬೌಂಡರಿ, 11 ಸಿಕ್ಸರ್) ಸಿಡಿಸಿದ್ದ ಮನೀಶ್ ಪಾಂಡೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು ಎರಡನ್ನು ಡ್ರಾ ಮಾಡಿಕೊಂಡಿರುವ ಕರ್ನಾಟಕ, ಜನವರಿ 3ರಂದು ರಾಯ್ಪುರದಲ್ಲಿ ಆರಂಭವಾಗಲಿರುವ ತನ್ನ 4ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಛತ್ತೀಸ್’ಗಢ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : Rishabh Pant deadly accident : ಭೀಕರ ಅಪಘಾತದಲ್ಲಿ ರಿಷಭ್ ಪಂತ್ ಬದುಕುಳಿದದ್ದೇ ಹೆಚ್ಚು, ಡೆಡ್ಲಿ ಆ್ಯಕ್ಸಿಡೆಂಟ್ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇದನ್ನೂ ಓದಿ : 2022 lucky for 5 legends : ಪಂಚಪಾಂಡವರಿಗೆ ಅದೃಷ್ಟ ತಂದ 2022.. ಯಾರು ಆ ಪಂಚಪಾಂಡವರು, ಏನು ಆ ಅದೃಷ್ಟ?

Ranji trophy 2023 Updates Karnataka vs Goa Despite imposing a follow-on Karnataka did not get a win against Goa and fell to the 3rd position

Comments are closed.