ಸೋಮವಾರ, ಏಪ್ರಿಲ್ 28, 2025
HomeSportsCricketRoss Taylor retirement : ಐಪಿಎಲ್ 2022 ರ ಮೆಗಾ ಹರಾಜಿನ ಮೊದಲೇ ಕ್ರಿಕೆಟ್‌ಗೆ ನಿವೃತ್ತಿ...

Ross Taylor retirement : ಐಪಿಎಲ್ 2022 ರ ಮೆಗಾ ಹರಾಜಿನ ಮೊದಲೇ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ RCB ಆಟಗಾರ

- Advertisement -

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2022 ) ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದೆ. ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯುವುದು ಖಚಿತವಾಗಿದೆ. ಈಗಾಗಲೇ ಆಟಗಾರರು ಯಾವ ತಂಡವನ್ನು ಸೇರುತ್ತಾರೆ ಅನ್ನೋ ಕುತೂಹಲ ಕ್ರಿಕೆಟ್‌ ಅಭಿಮಾನಿಗಳಲ್ಲಿ ಹೆಚ್ಚಿಸುತ್ತಿದೆ. ಈ ನಡುವಲ್ಲೇ ನಡೆದ ಹಠಾತ್‌ ಬೆಳವಣಿಗೆ ಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ರಾಸ್ ಟೇಲರ್ (Ross Taylor retirement) ಐಪಿಎಲ್ 2022 ರ ಮೆಗಾ ಹರಾಜಿನ ಮೊದಲು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ರಾಸ್‌ ಟೇಲರ್‌, ವಿಶ್ವ ದರ್ಜೆಯ ಕ್ರಿಕೆಟಿಗ. ಇಂಡಿಯನ್ ಪ್ರೀಮಿಯರ್ ಲೀಗ್ IPL ನಲ್ಲಿ ಆರ್‌ಸಿಬಿ, ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪುಣೆ ವಾರಿಯರ್ಸ್ ಪರ ಆಡಿದ್ದಾರೆ. ಕಿವೀಸ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಾಸ್ ಟೇಲರ್ ಆಕ್ರಮಣಕಾರಿ ಆಟದಿಂದಲೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು. 2008 ರಿಂದ 2010 ರವರೆಗೆ RCB ತಂಡದ ಸದಸ್ಯರಾಗಿದ್ದರು. ಸುಮಾರು 55 ಪಂದ್ಯಗಳಿಂದ ಸುಮಾರು 1000ಕ್ಕೂ ಅಧಿಕ ರನ್‌ ಬಾರಿಸಿದ್ದಾರೆ. ಆದರೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ರಾಸ್‌ ಟೇಲರ್‌ ಐಪಿಎಲ್‌ ಮಿಸ್‌ ಮಾಡಿಕೊಂಡಿದ್ದಾರೆ.

37 ವರ್ಷ ವಯಸ್ಸಿನವರು ರಾಸ್‌ ಟೇಲರ್ ಬಾಂಗ್ಲಾದೇಶದ ವಿರುದ್ದದ ಟೆಸ್ಟ್‌ ಪಂದ್ಯದ ವೇಳೆಯಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್‌ ಸರಣಿ, ಆಸ್ಟ್ರೇಲಿಯಾ ಹಾಗೂ ನೆದರ್‌ಲ್ಯಾಂಡ್‌ ವಿರುದ್ದದ ಪಂದ್ಯಗಳಲ್ಲಿಯೂ ರಾಸ್‌ ಟೇಲರ್‌ ಬಾಗಿಯಾಗುವುದಿಲ್ಲ. ಟೇಲರ್‌ನ ಅಂತಿಮ ಟೆಸ್ಟ್ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆಯಲಿದೆ. ನಾನು ಇರುವವರೆಗೂ ನನ್ನ ದೇಶವನ್ನು ಪ್ರತಿನಿಧಿಸಿರುವುದು ನಂಬಲಾಗದಷ್ಟು ಅದೃಷ್ಟ ಎಂದು ಭಾವಿಸುತ್ತೇನೆ ಎಂದು ಟೇಲರ್ ಹೇಳಿದ್ದಾರೆ.

ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಲೇಬೇಕು ಮತ್ತು ಸಮಯವು ನನಗೆ ಸರಿಯಾಗಿದೆ. ನನ್ನ ಕುಟುಂಬ, ಸ್ನೇಹಿತರು ಮತ್ತು ನನಗೆ ಈ ಹಂತಕ್ಕೆ ಬರಲು ಸಹಾಯ ಮಾಡಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಋತುವಿನಲ್ಲಿ ಹೆಚ್ಚಿನ ಧನ್ಯವಾದ ಮತ್ತು ಪ್ರತಿಬಿಂಬಗಳಿಗೆ ಸಾಕಷ್ಟು ಸಮಯವಿರುತ್ತದೆ – ಆದರೆ ಸದ್ಯಕ್ಕೆ ನನ್ನ ಎಲ್ಲಾ ಶಕ್ತಿ ಮತ್ತು ಗಮನವು ಈ ಬೇಸಿಗೆಯಲ್ಲಿ ಬ್ಲ್ಯಾಕ್ ಕ್ಯಾಪ್ಸ್‌ಗಾಗಿ ತಯಾರಿ ಮತ್ತು ಪ್ರದರ್ಶನದ ಮೇಲೆ ಇರಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.

ಮೂರು ಸ್ವರೂಪದ ಕ್ರಿಕೆಟ್‌ನಲ್ಲಿಯೂ ಒಟ್ಟು 100 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಮೊದಲ ಅಂತರಾಷ್ಟ್ರೀಯ ಆಟಗಾರ ಅನ್ನೋ ಖ್ಯಾತಿಗೆ ರಾಸ್‌ ಟೇಲರ್‌ ಪಾತ್ರರಾಗಿದ್ದಾರೆ. ನ್ಯೂಜಿಲೆಂಡ್‌ ಪರ ಆಡಿರುವ ರಾಸ್‌ ಟೇಲರ್‌ ಇದುವರಗೆ ಒಟ್ಟು18,074 ರನ್‌ ಬಾರಿಸಿದ್ದಾರೆ. ಇದರಲ್ಲಿ 40 ಶತಕಗಳು ಒಳಗೊಂಡಿದೆ.

ಇದನ್ನೂ ಓದಿ : ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರರು ಯಾರು ಗೊತ್ತಾ ?

ಇದನ್ನೂ ಓದಿ : ಗ್ಲೆನ್‌ ಮ್ಯಾಕ್ಸ್‌ವೆಲ್‌ ಆರ್‌ಸಿಬಿ ನಾಯಕ ಎಂದ ಮಾಜಿ ಕೋಚ್ ಡೇನಿಯಲ್‌ ವೆಟ್ಟೋರಿ ‌

( RCB Player announced Ross Taylor Retirement from cricket before IPL 2022 mega auction)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular