KYC Update Date Expanded : ಕೆವೈಸಿ ಸಲ್ಲಿಸಲು ಅವಧಿ ವಿಸ್ತರಣೆ; 2022ರ ಮಾರ್ಚ್‌ 31ರವರೆಗೆ ಮುಂದೂಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

ಬೇನಾಮಿ ಖಾತೆಗಳ ಮೂಲಕ ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆಯಂತಹ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೆವೈಸಿ (KYC) ಅವಧಿಯನ್ನು ವಿಸ್ತರಿಸಲಾಗಿದೆ. ಬ್ಯಾಂಕ್‌ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್‌ಸಿ) ಹಾಗೂ ಕಿರು ಹಣಕಾಸು ಸಂಸ್ಥೆಗಳ ಗ್ರಾಹಕರು ಇದೇ ಡಿಸೆಂಬರ್ 31ರೊಳಗೆ ಪೂರೈಸಬೇಕಿತ್ತು. ಆದರೆ ಬೇನಾಮಿ ಖಾತೆಗಳ ಮೂಲಕ ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆಯಂತಹ ಅಕ್ರಮಗಳನ್ನು ತಡೆಗಟ್ಟಲು ಈ ವಿಸ್ತರಣೆ (KYC Update Date Expanded) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ಮಾಡಲಾಗಿದೆ.

‘ನಿಮ್ಮ ಗ್ರಾಹಕರನ್ನು ಅರಿಯಿರಿ” (ಕೆವೈಸಿ) ಪ್ರಕ್ರಿಯೆಯ ಗಡುವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮೂರು ತಿಂಗಳು ವಿಸ್ತರಿಸಿದೆ.  ಕೊರೊನಾದ ಓಮಿಕ್ರಾನ್‌ ಪ್ರಭೇದವು ಭಾರತದಲ್ಲೂ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಈ ಗಡುವನ್ನು 2022ರ ಮಾರ್ಚ್‌ 31ರವರೆಗೆ ವಿಸ್ತರಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ನೋಟೀಸಲ್ಲಿ ತಿಳಿಸಿದೆ. ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳ ಶಾಖೆಗೆ ತೆರಳಿ ಅಥವಾ ಆನ್‌ಲೈನ್‌ ಮೂಲಕವೂ ಕೆವೈಸಿ ಪ್ರಕ್ರಿಯೆಯನ್ನು ಗ್ರಾಹಕರು ಪೂರ್ಣಗೊಳಿಸಬಹುದಾಗಿದೆ.

ಉಳಿತಾಯ ಖಾತೆಗಳನ್ನು ಹೊಂದಿರುವ ಗ್ರಾಹಕರು 10 ವರ್ಷಕ್ಕೆ ಒಮ್ಮೆ ಕೆವೈಸಿ ಮಾಹಿತಿಯನ್ನು ನವೀಕರಿಸಬೇಕು. ಹೆಚ್ಚಿನ ಮೊತ್ತದ ವಹಿವಾಟು ನಡೆಸುವವರನ್ನು ಹೈರಿಸ್ಕ್​ ಪ್ರೊಫೈಲ್‌ ಎಂದು ಪರಿಗಣಿಸಲಾಗುತ್ತದೆ. ಇಂಥ ಖಾತೆದಾರರು ಎರಡು ವರ್ಷಕ್ಕೊಮ್ಮೆ ಕೆವೈಸಿ ದಾಖಲೆ ಸಲ್ಲಿಸಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹೊಸ ಸುತ್ತೋಲೆಯಲ್ಲಿ ತಿಳಿಸಿದೆ.

ಅಂದಹಾಗೆ 2021ರ ಮೇ ತಿಂಗಳಲ್ಲಿ ದೇಶದ ವಿವಿದೆಡೆ ಕೊವಿಡ್ ಸೋಂಕು ಹೆಚ್ಚಾದಾಗ ಅಂದು ಕೆಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಈ ನಡುವೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬ್ಯಾಂಕ್​ಗಳು ಮತ್ತು ಇತರ ನಿಯಂತ್ರಿತ ಹಣಕಾಸು ಸಂಸ್ಥೆಗಳನ್ನು ವರ್ಷಾಂತ್ಯ ಕೊನೆಯವರೆಗೆ ಕೆವೈಸಿ ಅಪ್​ಡೇಟ್ ಮಾಡಲು​ ವಿಫಲವಾದ ಗ್ರಾಹಕರ ವಿರುದ್ಧ ದಂಡ ಹಾಕದಂತೆ ನಿರ್ದೆಶನ ನೀಡಿತ್ತು.

ಬ್ಯಾಂಕ್​ ಮತ್ತು ಹಣಕಾಸು ಸಂಸ್ಥೆಗಳು ಗ್ರಾಹಕರ ಕುರಿತ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲದ ಕಾರಣ ಆರ್‌ಬಿಐ ಈ ಹಿಂದೆಯೇ ಇಂಥ ಖಾತೆಗಳನ್ನು ನಿಷ್ಕ್ರಿಯಗೊಳಿಸಲು ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಗೆ ಸೂಚಿಸಿತ್ತು. ಆದರೆ, ಕೊರೊನಾ ಎರಡನೇ ಅಲೆಯ ಕಾರಣ ಇದನ್ನು ಮುಂದೂಡಿತ್ತು. ನಂತರದಲ್ಲಿ ಡಿಸೆಂಬರ್‌ 31ರೊಳಗೆ ಕೆವೈಸಿ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ಬ್ಯಾಂಕ್‌ಗಳಿಗೆ ನೀಡಿತ್ತು.

ಇದನ್ನೂ ಓದಿ: PhonePe vs Google Pay : ಫೋನ್ ಪೇ vs ಗೂಗಲ್ ಪೇ; ಬಳಕೆಗೆ ಯಾವುದು ಬೆಸ್ಟ್?

ಇದನ್ನೂ ಓದಿ: Android 13 Features Leak: ಆ್ಯಂಡ್ರಾಯ್ಡ್ 13ರ ಫೀಚರ್‌ಗಳು ಲೀಕ್; ಹೊಸ ಅಪ್‌ಡೇಟ್‌ನಲ್ಲಿ ಇರುವ ವೈಶಿಷ್ಟ್ಯಗಳನ್ನು ತಿಳಿಯಿರಿ

( KYC Update Date Expanded till March 2022)

Comments are closed.