Will Jacks : ಬೆಂಗಳೂರು: ಐಪಿಎಲ್-2024 (IPL 2024) ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ಕನಸಿಗೆ ದೊಡ್ಡ ಪೆಟ್ಟು ಬಿದ್ದಿದೆ. ಮೇ 18ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅತ್ಯಂತ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಚೆನ್ನೈ ಸೂಪರ್ ಕಿಂಗ್ಸ್ (RCB Vs CSK) ತಂಡವನ್ನು ಎದುರಿಸಲಿದೆ.

ಪ್ಲೇ ಆಫ್ ಆಸೆಯನ್ನು ಜೀವಂತವಾಗಿಡಬೇಕಾದರೆ ಆರ್’ಸಿಬಿ ಈ ಪಂದ್ಯವನ್ನು ಉತ್ತಮ ರನ್’ರೇಟ್’ನೊಂದಿಗೆ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಆದರೆ ಈ ಪಂದ್ಯದಲ್ಲಿ ಆರ್’ಸಿಬಿ ಪಾಳೆಯದ ರಣಬೇಟೆಗಾರ ಆಡುತ್ತಿಲ್ಲ. ಭಾನುವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್-2024 ಟೂರ್ನಿಯ 62ನೇ ಲೀಗ್ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Bengaluru), ಡೆಲ್ಲಿ ಕ್ಯಾಪಿಟಲ್ಸ್ (Dehli Capitals) ತಂಡವನ್ನು 47 ರನ್’ಗಳಿಂದ ಭರ್ಜರಿಯಾಗಿ ಬಗ್ಗು ಬಡಿದು ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಂಡಿತ್ತು.
ಇದನ್ನೂ ಓದಿ : Dravid To Resign As India’s Coach: ಭಾರತ ತಂಡದ ಕೋಚ್ ಸ್ಥಾನಕ್ಕೆ ಗುಡ್ ಬೈ ಹೇಳಲಿದ್ದಾರೆ ರಾಹುಲ್ ದ್ರಾವಿಡ್, ಮುಹೂರ್ತ ಫಿಕ್ಸ್!

ಮುಂದಿನ ಶನಿವಾರ ನಡೆಯುವ ಚೆನ್ನೈ ವಿರುದ್ಧದ ಪಂದ್ಯವೂ ಆರ್’ಸಿಬಿಗೆ ಮಹತ್ವದ್ದಾಗಿದೆ. ಆದರೆ ಆ ನಿರ್ಣಾಯಕ ಪಂದ್ಯಕ್ಕೆ ಇಂಗ್ಲೆಂಡ್ ದಾಂಡಿಗ ವಿಲ್ ಜ್ಯಾಕ್ಸ್ (Will Jacks) ಅಲಭ್ಯರಾಗಲಿದ್ದಾರೆ. ಈ ವಿಚಾರವನ್ನು ಸ್ವತಃ ಆರ್’ಸಿಬಿ ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.
ಇದನ್ನೂ ಓದಿ : Ganguly And Virat Kohli: ಮುನಿಸು ಮರೆತ ದಾದಾ, ಕಿಂಗ್: ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ಚಿನ್ನಸ್ವಾಮಿ !
https://x.com/RCBTweets/status/1790009447420752328
ಐಪಿಎಲ್’ನಲ್ಲಿ ಆಡುತ್ತಿರುವ ಇಂಗ್ಲೆಂಡ್ ಆಟಗಾರರು ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧತೆ ನಡೆಸಲು ತವರಿಗೆ ಮರಳಬೇಕಾಗಿದೆ. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಇಂಗ್ಲೆಂಡ್ ಆಟಗಾರರೆಲ್ಲಾ ಈ ವಾರಾಂತ್ಯದೊಳಗೆ ವಾಪಸ್ ಆಗಬೇಕೆಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಕಟ್ಟಪ್ಪಣೆ ಮಾಡಿದೆ. ಈಗಾಗಲೇ ರಾಜಸ್ಥಾನ್ ರಾಯಲ್ಸ್’ನ ಸ್ಟಾರ್ ಬ್ಯಾಟ್ಸ್’ಮನ್ ಜೋಸ್ ಬಟ್ಲರ್ ಲಂಡನ್’ಗೆ ಮರಳಿಲಿದ್ದಾರೆ. ಜೋಸ್ ಬಟ್ಲರ್’ಗೆ ಗುಡ್ ಬೈ ಹೇಳುವ ಸಂದೇಶವನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಟ್ವಿಟರ್’ನಲ್ಲಿ ಪೋಸ್ಟ್ ಮಾಡಿದೆ.
ಇದನ್ನೂ ಓದಿ: ಎಂಎಸ್ ಧೋನಿ ದಾಖಲೆಯನ್ನೇ ಹಿಂದಿಕ್ಕಿದ ಕೆಎಲ್ ರಾಹುಲ್ : ಐಪಿಎಲ್ ಇತಿಹಾಸದಲ್ಲೇ ಈ ದಾಖಲೆಯನ್ನೂ ಯಾರು ಮಾಡಿಲ್ಲ
https://x.com/rajasthanroyals/status/1790005446926901507
ಆರ್’ಸಿಬಿ ತಂಡದಲ್ಲಿರುವ ವಿಲ್ ಜ್ಯಾಕ್ಸ್ ಮತ್ತು ವೇಗಿ ರೀಸೀ ಟಾಪ್ಲೇ (Reece Topley) ಕೂಡ ಟಿ20 ವಿಶ್ವಕಪ್’ನಲ್ಲಿ ಆಡಲಿರುವ ಇಂಗ್ಲೆಂಡ್ ತಂಡದಲ್ಲಿದ್ದಾರೆ. ಹೀಗಾಗಿ ಈ ವೀಕೆಂಡ್ ಹೊತ್ತಿಗೆ ಈ ಇಬ್ಬರೂ ಇಂಗ್ಲೆಂಡ್ ತಂಡವನ್ನು ಸೇರಿಕೊಳ್ಳಬೇಕಿದೆ.
ವಿಲ್ ಜ್ಯಾಕ್ಸ್ ಅನುಪಸ್ಥಿತಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್’ಗೆ ಭಾರೀ ಪೆಟ್ಟು ನೀಡಲಿದೆ. 25 ವರ್ಷದ ಬಲಗೈ ದಾಂಡಿದ ವಿಲ್ ಜ್ಯಾಕ್ಸ್ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿ ಅಬ್ಬರಿಸಿದ್ದರು. ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿರುವ ವಿಲ್ ಜ್ಯಾಕ್ಸ್ ಕಳೆದ ಐದು ಪಂದ್ಯಗಳಲ್ಲಿ ಆರ್’ಸಿಬಿ ಸತತ ಐದು ಗೆಲುವುಗಳನ್ನು ದಾಖಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
RCB set to miss Will Jacks RCB vs CSK IPL 2024