KL Rahul : ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆ.ಎಲ್ ರಾಹುಲ್ ಜರ್ಮನಿಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇನ್ನೂ ಒಂದೆರಡು ದಿನಗಳ ಕಾಲ ಕೆ.ಎಲ್ ರಾಹುಲ್ ಕ್ರಿಕೆಟ್ ಜೀವನದಿಂದ ಹೊರಗುಳಿಯುವ ಸಾಧ್ಯತೆಯಿದೆ. ತೊಡೆ ಸಂದು ಗಾಯಕ್ಕೆ ಒಳಗಾಗಿದ್ದ ಕೆ.ಎಲ್ ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧ ಟಿ 20 ಅಂತಾರಾಷ್ಟ್ರೀಯ ಸರಣಿಯಿಂದ ಹೊರಗುಳಿಯಬೇಕಾಗಿ ಬಂದಿತ್ತು.
ಎರಡು ವಾರಗಳು ಕಠಿಣವಾಗಿದ್ದವು. ಆದರೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ನಾನೀಗ ಗುಣಮುಖನಾಗಿದ್ದೇನೆ. ಮತ್ತು ಚೇತರಿಸಿಕೊಳ್ಳುತ್ತಿದ್ದೇನೆ. ನನ್ನ ಚೇತರಿಕೆಯ ಹಾದಿ ಆರಂಭಗೊಂಡಿದೆ. ನಿಮ್ಮ ಸಂದೇಶಗಳು ಹಾಗೂ ಪ್ರಾರ್ಥನೆಗಳಿಗಾಗಿ ಧನ್ಯವಾದಗಳು ಶೀಘ್ರದಲ್ಲೇ ನಿಮ್ಮೆಲ್ಲರನ್ನು ಭೇಟಿ ಮಾಡುತ್ತೇನೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
8 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಕೆ.ಎಲ್ ರಾಹುಲ್ 42 ಟೆಸ್ಟ್ ಪಂದ್ಯ, 42 ಏಕದಿನ ಪಂದ್ಯಗಳು ಹಾಗೂ 56 ಅಂತಾರಾಷ್ಟ್ರೀಯ ಟಿ 20 ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಒಮ್ಮೆ ರಾಹುಲ್ ತಂಡಕ್ಕೆ ಮರಳುತ್ತಿದ್ದಂತೆಯೇ ಕೆ.ಎಲ್ ರಾಹುಲ್ರ ಆರೋಗ್ಯವನ್ನು ಡಾ ನಿತಿನ್ ಪಟೇಲ್ ನೇತೃತ್ವದ NCA ಕ್ರೀಡಾ ವಿಜ್ಞಾನ ತಂಡವು ಮೇಲ್ವಿಚಾರಣೆ ಮಾಡುತ್ತದೆ.
ಕೆ.ಎಲ್ ರಾಹುಲ್ ಟೀಂ ಇಂಡಿಯಾಗೆ ಯಾವಾಗ ಮರಳುತ್ತಾರೆ ಎಂದು ನಿರ್ದಿಷ್ಟವಾಗಿ ಹೇಳುವುದು ಕಷ್ಟವೆನಿಸಿದರೂ ಸಹ ಸಧ್ಯದ ಪರಿಸ್ಥಿತಿಯನ್ನು ನೋಡಿದರೆ ಕೆ.ಎಲ್ ರಾಹುಲ್ ಇನ್ನೂ ಎರಡು ತಿಂಗಳುಗಳ ಕಾಲ ತಂಡದಿಂದ ದೂರ ಇರಬೇಕಾಗಿ ಬರಬಹುದು ಎಂದು ಅಂದಾಜಿಸಬಹುದಾಗಿದೆ.
ಕೆ.ಎಲ್ ರಾಹುಲ್ ಇನ್ನೂ ಕೆಲವು ದಿನಗಳ ಕಾಲ ವಿಶ್ರಾಂತಿಯನ್ನು ಪಡೆಯಲಿದ್ದಾರೆ. ಬಳಿಕ ಎನ್ಸಿಎನಲ್ಲಿ ಅವರ ಆರೈಕೆ ಆರಂಭಗೊಳ್ಳಲಿದೆ. ರಾಹುಲ್ ತಮ್ಮ ನಿಯಮಿತ ನೆಟ್ ಸೆಷನ್ನೊಂದಿಗೆ ಅಭ್ಯಾಸ ಆರಂಭಿಸಲು ಕೆಲವು ವಾರಗಳು ಬೇಕಾಗಬಹುದು. ಅವರು ಏಷ್ಯಾ ಕಪ್ ವೇಳೆಗೆ ತಂಡಕ್ಕೆ ಮರಳುತ್ತಾರೆಯೇ ಎಂಬುದನ್ನು ನಿರೀಕ್ಷಿಸೋಣ ಎಂದು ಬಿಸಿಸಿಯ ಉನ್ನತ ಮೂಲಗಳು ಹೇಳಿವೆ ಎನ್ನಲಾಗಿದೆ.
ಇದನ್ನು ಓದಿ : ನಿನ್ನನ್ನು ನೋಡಿ ಖುಷಿಯಾಗುತ್ತಿದೆ..” ಸಚಿನ್ ಪುತ್ರನ ಬಗ್ಗೆ ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಹೀಗೆ ಹೇಳಿದ್ದೇಕೆ ?
ಇದನ್ನೂ ಓದಿ : Eoin Morgan : ಇಂಗ್ಲಿಷ್ ಕ್ರಿಕೆಟ್ ದಿಕ್ಕನ್ನೇ ಬದಲಿಸಿದ ಐರಿಷ್ ಆಟಗಾರ ; ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂಗ್ಲೆಂಡ್ ದಿಗ್ಗಜನ ವಿದಾಯ
“Road To Recovery Has Begun”: KL Rahul Undergoes Successful Surgery