Actor Swara Bhasker : ನಟಿ ಸ್ವರಾ ಭಾಸ್ಕರ್​ಗೆ ಜೀವ ಬೆದರಿಕೆ ಪತ್ರ : ಪೊಲೀಸರಿಂದ ತನಿಖೆ

ಮಹಾರಾಷ್ಟ್ರ : Actor Swara Bhasker : ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ ನಿವಾಸಕ್ಕೆ ಕೊಲೆ ಬೆದರಿಕೆಯುಳ್ಳ ಪತ್ರವೊಂದು ಬಂದಿದ್ದು ಈ ಸಂಬಂಧ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.


ಸ್ವರಾ ನೀಡಿರುವ ದೂರಿನ ಆಧಾರದ ಮೇಲೆ ದುಷ್ಕರ್ಮಿಗಳನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ. ಹಿಂದಿಯಲ್ಲಿ ಬರೆಯಲಾಗಿರುವ ಪತ್ರದಲ್ಲಿ ವೀರ ಸಾರ್ವಕರ್​​ರಿಗೆ ಅವಮಾನ ಮಾಡುವುದನ್ನು ಈ ದೇಶದ ಯುವಕರು ಸಹಿಸುವುದಿಲ್ಲ ಎಂದು ಬರೆಯಲಾಗಿದೆ. ವರ್ಸೋವಾದಲ್ಲಿರುವ ನಟಿ ಸ್ವರಾ ಭಾಸ್ಕರ್​ ನಿವಾಸಕ್ಕೆ ಈ ಪತ್ರವನ್ನು ಕಳುಹಿಸಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.
ಜೀವ ಬೆದರಿಕೆ ಪತ್ರವನ್ನು ಸ್ವೀಕರಿಸಿದ ಬಳಿಕ ನಟಿ ಸ್ವರಾ ಭಾಸ್ಕರ್​​ ಎರಡು ದಿನಗಳ ಹಿಂದೆ ವರ್ಸೋವಾ ಪೊಲೀಸ್​ ಠಾಣೆಗೆ ತೆರಳಿದ್ದು ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರನ್ನು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ನಟಿ ಸ್ವರಾ ಭಾಸ್ಕರ್​ ನೀಡಿರುವ ದೂರನ್ನು ಆಧರಿಸಿ ಅಪರಿಚಿತ ವ್ಯಕ್ತಿಗಳ ವಿರುದ್ಧ ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಹಾಗೂ ಅಪರಿಚಿತ ವ್ಯಕ್ತಿಗಳನ್ನು ಹುಡುಕಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಹಿಂದಿಯಲ್ಲಿ ಬರೆಯಲಾಗಿರುವ ಪತ್ರದಲ್ಲಿ ವೀರ ಸಾರ್ವಕರ್​ಗೆ ಅವಮಾನ ಮಾಡುವುದುನ್ನು ದೇಶದ ಯುವಕರು ಸಹಿಸುವುದಿಲ್ಲ ಎಂದು ಬರೆಯಲಾಗಿದೆ. ರಾಜಕೀಯ ವಿಚಾರಗಳ ಬಗ್ಗೆ ಸೋಶಿಯಲ್​ ಮೀಡಿಯಾಗಳಲ್ಲಿ ಮುಕ್ತವಾಗಿ ಮಾತನಾಡುವ ನಟಿ ಸ್ವರಾ ಭಾಸ್ಕರ್​ 2017ರಲ್ಲಿ ಸಾರ್ವಕರ್​ ಬ್ರಿಟೀಷ್​ ಸರ್ಕಾರದ ಬಳಿ ನನ್ನನ್ನು ಬಿಡುಗಡೆಗೊಳಿಸಿ ಎಂದು ಮನವಿ ಮಾಡಿದ್ದರು. ಜೈಲಿನಿಂದ ಬಿಡುಗಡೆಗೊಳಿಸಿ ಎಂದು ಕ್ಷಮೆಯಾಚಿಸಿದ್ದರು. ಹೀಗಾಗಿ ಸಾರ್ವಕರ್​ ಎಂದಿಗೂ ವೀರ ಎನಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದರು. ಈ ಹಳೆಯ ಟ್ವೀಟ್​ನ್ನೇ ಇಟ್ಟುಕೊಂಡು ದುಷ್ಕರ್ಮಿಗಳು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗ್ತಿದೆ.

ಇದನ್ನು ಓದಿ : Best Places For Students: ಕಾಲೇಜಿನಿಂದ ಟೂರ್ ಹೋಗುವ ಪ್ಲಾನ್ ಇದೆಯೇ ! ನಿಮಗಾಗಿ ಬೆಸ್ಟ್ ತಾಣಗಳು ಇಲ್ಲಿವೆ

ಇದನ್ನೂ ಓದಿ : ನಿನ್ನನ್ನು ನೋಡಿ ಖುಷಿಯಾಗುತ್ತಿದೆ..” ಸಚಿನ್ ಪುತ್ರನ ಬಗ್ಗೆ ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಹೀಗೆ ಹೇಳಿದ್ದೇಕೆ ?

Actor Swara Bhasker Receives Death Threat In Letter, Cops Launch Probe

Comments are closed.