ಸೋಮವಾರ, ಏಪ್ರಿಲ್ 28, 2025
HomeSportsCricketRohit Rahul Kohli out of T20 team: ಟಿ20 ತಂಡಕ್ಕೆ ಮೇಜರ್ ಸರ್ಜರಿ; ತ್ರಿಮೂರ್ತಿಗಳು...

Rohit Rahul Kohli out of T20 team: ಟಿ20 ತಂಡಕ್ಕೆ ಮೇಜರ್ ಸರ್ಜರಿ; ತ್ರಿಮೂರ್ತಿಗಳು ಇನ್ನು ಟಿ20ಯಲ್ಲಿ ಕಾಣಿಸಿಕೊಳ್ಳುವುದು ಡೌಟ್!

- Advertisement -


ಬೆಂಗಳೂರು: (Rohit Rahul Kohli out of T20 team)ಪ್ರವಾಸಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಅಗ್ರ ಕ್ರಮಾಂಕದ ತ್ರಿಮೂರ್ತಿಗಳಿಗೆ ಸ್ಥಾನ ನೀಡಲಾಗಿಲ್ಲ.ಆರಂಭಿಕರಾದ ರೋಹಿತ್ ಶರ್ಮಾ (Rohit Sharma), ಕೆ.ಎಲ್ ರಾಹುಲ್ (KL Rahul), 3ನೇ ಕ್ರಮಾಂಕದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಅವರನ್ನು ಲಂಕಾ ಸರಣಿಗೆ ಆಯ್ಕೆ ಮಾಡಲಾಗಿರುವ ಟೀಮ್ ಇಂಡಿಯಾದಿಂದ ಹೊರಗಿಡಲಾಗಿದೆ. ರೋಹಿತ್ ಶರ್ಮಾ ಈಗಷ್ಟೇ ಎಡಗೈ ಹೆಬ್ಬೆರಳ ಗಾಯದಿಂದ ಚೇತರಿಸಿಕೊಂಡಿದ್ದು, ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ಟಿ20 ತಂಡದಿಂದ ರಾಹುಲ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಹೊರಗಿಟ್ಟಿರುವುದಕ್ಕೆ ಬಿಸಿಸಿಐ ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡಿಲ್ಲ.

(Rohit Rahul Kohli out of T20 team)ಬಿಸಿಸಿಐ ಮೂಲಗಳ ಪ್ರಕಾರ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಟಿ20 ತಂಡದಿಂದ ಕೈಬಿಟ್ಟು ಯುವ ತಂಡ ಕಟ್ಟುವ ಯೋಜನೆ ಇದು ಎನ್ನಲಾಗ್ತಿದೆ. 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಈಗಿಂದಲೇ ಸಿದ್ಧತೆ ಆರಂಭಿಸಿರುವ ಬಿಸಿಸಿಐ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಯುವ ತಂಡ ಕಟ್ಟಲು ಮುಂದಾಗಿದೆ. ಹೀಗಾಗಿ ಮೂವರು ಅನುಭವಿಗಳನ್ನು ಕೈಬಿಟ್ಟು ಯಂಗ್’ಸ್ಟರ್’ಗಳಿಗೆ ಅವಕಾಶ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

35 ವರ್ಷದ ರೋಹಿತ್ ಶರ್ಮಾ ಮುಂದಿನ ಟಿ20 ವಿಶ್ವಕಪ್’ನಲ್ಲಿ ಆಡುವ ಯಾವುದೇ ಸಾಧ್ಯತೆಗಳಿಲ್ಲ. 34 ವರ್ಷದ ವಿರಾಟ್ ಕೊಹ್ಲಿ ಕೂಡ ಇನ್ನೊಂದು ಟಿ20 ವಿಶ್ವಕಪ್ ಆಡಲಿದ್ದಾರೆ ಎಂಬ ಗ್ಯಾರಂಟಿಯಿಲ್ಲ. 31 ವರ್ಷದ ಕೆ.ಎಲ್ ರಾಹುಲ್ ಮೊದಲೇ ಫಾರ್ಮ್’ನಲ್ಲಿಲ್ಲ. ಹೀಗಾಗಿ ಈ ಮೂವರನ್ನೂ ಟಿ20 ತಂಡದಿಂದ ಕೈಬಿಟ್ಟು, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್’ನತ್ತ ಗಮನ ಹರಿಸಲು ಬಿಸಿಸಿಐ ಸೂಚಿಸುವ ಸಾಧ್ಯತೆಯಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಮೂವರನ್ನೂ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಕೈಬಿಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಮುಂದಿನ ವರ್ಷ ಭಾರತದಲ್ಲೇ ನಡೆಯಲಿದ್ದು, ಆ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಬೇಕಾದರೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಅವರ ಪಾತ್ರ ನಿರ್ಣಾಯಕವಾಗಿರಲಿದೆ. ಈ ಮೂವರೂ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲಿದ್ದು, ಗಾಯದಿಂದ ಚೇತರಿಸಿಕೊಂಡಿರುವ ರೋಹಿತ್ ಶರ್ಮಾ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲಿದ್ದಾರೆ. ಮತ್ತೊಂದೆಡೆ ಉಪನಾಯಕನ ಸ್ಥಾನ ಕಳೆದುಕೊಂಡಿರುವ ರಾಹುಲ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಆಗಿ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ (Indian team for Sri Lanka T20 series):
ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡ, ರಾಹುಲ್ ತ್ರಿಪಾಛಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಕೇಶ್ ಕುಮಾರ್.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ (Indian team for Sri Lanka ODI series):
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.

ಇದನ್ನೂ ಓದಿ:Shikhar Dhawan out : ಟೀಮ್ ಇಂಡಿಯಾದಲ್ಲಿ ಶಿಖರ್ ಶಿಕಾರಿಗೆ ಬ್ರೇಕ್, ಒಂದು ದ್ವಿಶತಕಕ್ಕೆ ಅಂತ್ಯಗೊಂಡಿತು ಗಬ್ಬರ್ ಆಟ!

ಇದನ್ನೂ ಓದಿ:KL Rahul removed: ಭಾರತಕ್ಕೆ 7 ಸತತ ಗೆಲುವು ತಂದುಕೊಟ್ಟ ರಾಹುಲ್‌ಗೆ ಉಪನಾಯಕತ್ವದಿಂದ ಕೈ ಕೊಟ್ಟಿದ್ದು ಎಷ್ಟು ಸರಿ?

ಭಾರತ Vs ಶ್ರೀಲಂಕಾ ಸರಣಿಯ ವೇಳಾಪಟ್ಟಿ (India Vs Sri Lanka T20 & ODI series)
ಮೊದಲ ಟಿ20: ಜನವರಿ 03, ಮುಂಬೈ
2ನೇ ಟಿ20: ಜನವರಿ 05, ಪುಣೆ
3ನೇ ಟಿ20: ಜನವರಿ 07, ರಾಜ್’ಕೋಟ್
ಮೊದಲ ಏಕದಿನ: ಜನವರಿ 10, ಗುವಾಹಟಿ
2ನೇ ಏಕದಿನ: ಜನವರಿ 12, ಕೋಲ್ಕತಾ
3ನೇ ಏಕದಿನ: ಜನವರಿ 15, ತಿರುವನಂತಪುರಂ

Rohit Rahul Kohli out of T20 team Major surgery for T20 team; It is doubtful that the trio will appear again in T20

RELATED ARTICLES

Most Popular