Dash Song Release : ಹೊಸವರ್ಷಕ್ಕೆ ಚಂದನ್‌ ಶೆಟ್ಟಿ ಅಭಿನಯನದ ಸೂತ್ರಧಾರ ಸಿನಿಮಾದ ಡ್ಯಾಶ್‌ ಸಾಂಗ್‌ ರಿಲೀಸ್‌

ಕನ್ನಡದ ರ‍್ಯಾಪರ್ ಸ್ಟಾರ್‌ ಚಂದನ್‌ ಶೆಟ್ಟಿ ಮೂರೇ ಮೂರು ಪೆಗ್ಗಿಗೆ ತಲೆ ಗಿರ ಗಿರ ಎನ್ನುವ ಹಾಡಿಗೆ ಕುಣಿಯುತ್ತಾ ಚಂದನವನಕ್ಕೆ ಕಾಲಿಟ್ಟಿದ್ದು, ಸ್ಯಾಂಡಲ್‍ವುಡ್‍ನಲ್ಲೀಗ ಯೂತ್ ಸೆನ್ಸೇಷನ್ ಸಿಂಗರ್ ಆಗಿ, ಮ್ಯೂಸಿಕ್ ಡೈರೆಕ್ಟರ್ ಆಗಿಯೂ ಗೆದ್ದ ಚಂದನ್ ಶೆಟ್ಟಿ, ಈಗ ನಾಯಕರಾಗಿದ್ದಾರೆ. ಇದೀಗ ಚಂದನ್‌ ಶೆಟ್ಟಿ ಒಂದರ ಹಿಂದೆ ಮತ್ತೊಂದು ಎನ್ನುವಂತೆ ಎರಡು ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಚಂದನ್ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ “ಸೂತ್ರಧಾರ” ಸಿನಿಮಾತಂಡ ಹೊಸ ವರ್ಷಕ್ಕೆಂದೇ ಹೊಸ ಹಾಡು ರಿಲೀಸ್ ಮಾಡಲು (Dash Song Release) ಸಜ್ಜಾಗಿದೆ.

ಸಾಮಾನ್ಯವಾಗಿ ಹೊಸ ವರ್ಷಕ್ಕೊಂದು ಹೊಸ ಹಾಡು ರಿಲೀಸ್ ಮಾಡೋದು ಚಂದನ್ ಶೆಟ್ಟಿ ಸಂಪ್ರದಾಯ. ಈ ಬಾರಿ ಚಂದನ್ ಶೆಟ್ಟಿ ಅಭಿನಯದ ಸಿನಿತಂಡ ಹೊಸ ವರ್ಷಕ್ಕೆ ಹೊಸ ಹಾಡು ಕೊಟ್ಟಿದೆ. ಎಂದಿನಂತೆ ಚಂದನ್‌ ಶೆಟ್ಟಿ ಹಾಡು ಅವರಷ್ಟೇ ವಿಶೇಷವಾಗಿದೆ. ನನ್ನ ಡ್ಯಾಶ್ ಮಾಡ್ಕೊಳ್ಳೇ.. ಎಂದು ಚಂದನ್ ಶೆಟ್ಟಿ ಹಾಡಿದ ಹಾಡನ್ನು ಕೇಳುವುದಕ್ಕೆ ಅವರ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

ಈ ಸಿನಿಮಾದ “ಡ್ಯಾಶ್‌ ಮಾಡಕೊಳ್ಳೇ” ಹಾಡಿನಲ್ಲಿ ಚಂದನ್‌ ಶೆಟ್ಟಿ ಜೊತೆಯಾಗಿ ಸಲಗ ಖ್ಯಾತಿಯ ಸಂಜನಾ ಆನಂದ್‍ ಅವರು ನಟಿಸಿದ್ದಾರೆ. ಡ್ಯಾಶ್‌ ಅಂದ್ರೆ ಏನು ಎಂದು ಸಿನಿಮಾದ ನಿರ್ದೇಶಕರನ್ನು ಕೇಳಿದರೆ,”ಡ್ಯಾಶ್‌ ಎಂದರೆ ಖಾಲಿ ಜಾಗ ನೀವೇ ತುಂಬಿಕೊಳ್ಳಿ” ಎನ್ನುತ್ತಾರೆ ನಿರ್ದೇಶಕ ಕಿರಣ್ ಕುಮಾರ್. ಸಿನಿಮಾಕ್ಕೆ ನವರಸನ್ ನಿರ್ಮಾಪಕರಾಗಿದ್ದು ಹಾಡಿಗೆ ಚಂದನ್ ಶೆಟ್ಟಿ ಹಾಗೂ ಚೇತನ್ ಕುಮಾರ್ ಸೇರಿ ಸಾಹಿತ್ಯವನ್ನು ನೀಡಿದ್ದಾರೆ. ಅಷ್ಟೇ ಅಲ್ಲದೇ ಚಂದನ್ ಶೆಟ್ಟಿಯೇ ಮ್ಯೂಸಿಕ್ ನೀಡಿದ್ದು, ಹಾಡನ್ನೂ ಕೂಡ ಅವರೇ ಹಾಡಿದ್ದಾರೆ.

ಇದನ್ನೂ ಓದಿ : Pak Movie in India: ದಶಕಗಳ ಬಳಿಕ ಭಾರತದಲ್ಲಿ ರಿಲೀಸ್ ಆಗ್ತಿದೆ ಪಾಕಿಸ್ತಾನದ ಸೂಪರ್ ಹಿಟ್ ಸಿನಿಮಾ; ಹೊಸ ಸಾಹಸಕ್ಕೆ ಮುಂದಾದ ಐನಾಕ್ಸ್..!

ಇದನ್ನೂ ಓದಿ : Indian movie industry : 2022 ವರ್ಷದ ಕೊನೆಯ ಶುಕ್ರವಾರ ರಿಲೀಸ್‌ ಆಗುವ ವಿವಿಧ ಇಂಡಸ್ಟ್ರಿಯ ಸಿನಿಮಾ ಯಾವುವು ಗೊತ್ತಾ ?

ಇದನ್ನೂ ಓದಿ : Salman Khan birthday celebration : ಸಲ್ಮಾನ್‌ ಖಾನ್‌ ಬರ್ತಡೆಗೆ ತಡವಾಗಿ ಬಂದ ಶಾರುಖ್‌ ಸಖತ್‌ ವೈರಲ್ ಆಯ್ತು ವಿಡಿಯೋ

“ಸೂತ್ರಧಾರ” ಸಿನಿಮಾಕ್ಕೆ ನಾಯಕಿಯಾಗಿ ಅಪೂರ್ವ ನಟಿಸಿದ್ದು, ಆದರೆ ಈ ಹಾಡಿನಲ್ಲಿ ಮಾತ್ರ ಸಂಜನಾ ಆನಂದ್ ಮೊದಲ ಬಾರಿಗೆ ಸೊಂಟ ಕುಣಿಸಿದ್ದಾರೆ. ಸ್ಪೆಷಲ್ ಸಾಂಗಿನಲ್ಲಿ ಹೆಜ್ಜೆ ಹಾಕುವುದು ನನಗೂ ಹೊಸ ಅನುಭವ. ಹಾಡು ಸಖತ್ತಾಗಿದ್ದು, ಹೊಸ ವರ್ಷಕ್ಕಾಗಿಯೇ ಬಿಡುಗಡೆ ಮಾಡಿರುವ ಹಾಡು ನೋಡುಗರಿಗೂ ಇಷ್ಟವಾಗಿದ್ದು, ಈಗಾಗಲೇ ಲಕ್ಷಾಂತರ ಜನ ಹಾಡು ನೋಡಿ ಮೆಚ್ಚಿದ್ದಾರೆ ಎಂದು ನಟಿ ಸಂಜನಾ ಆನಂದ್‌ ಹೇಳಿದ್ದಾರೆ.

Dash Song Release: Chandan Shetty Sutradhara Movie Dash Song Release For New Year

Comments are closed.