ಸೋಮವಾರ, ಏಪ್ರಿಲ್ 28, 2025
HomeSportsCricketRohit Sharma : ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು 15 ವರ್ಷ ; ಭಾವುಕ ಶಬ್ದಗಳಲ್ಲಿ ಪತ್ರ...

Rohit Sharma : ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು 15 ವರ್ಷ ; ಭಾವುಕ ಶಬ್ದಗಳಲ್ಲಿ ಪತ್ರ ಬರೆದ ರೋಹಿತ್ ಶರ್ಮಾ

- Advertisement -

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (India Cricket Team Captain Rohit Sharma) ಅವರ ವೃತ್ತಿಬದುಕಿನಲ್ಲಿಂದು ಮಹತ್ವದ ದಿನ. ಏಕದಿನ ಕ್ರಿಕೆಟ್’ನಲ್ಲಿ ವಿಶ್ವದಾಖಲೆಯ 3 ದ್ವಿಶತಕಗಳನ್ನು ಬಾರಿಸಿರುವ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಅಂತರಾಷ್ಟ್ರೀಯ ಕ್ರಿಕೆಟ್”ಗೆ ಪದಾರ್ಪಣೆ ಮಾಡಿ ಗುರುವಾರಕ್ಕೆ ಭರ್ತಿ 15 ವರ್ಷ (Rohit Sharma completed 15 years in International Cricket). ಇಂಟರ್”ನ್ಯಾಷನಲ್ ಕ್ರಿಕೆಟ್”ನಲ್ಲಿ ಈ ಮಹತ್ವದ ಮೈಲುಗಲ್ಲು ನೆಟ್ಟಿರುವ ರೋಹಿತ್ ಶರ್ಮಾ ಆ ಸಂಭ್ರಮವನ್ನು ಟ್ವಿಟರ್”ನಲ್ಲಿ ಹಂಚಿಕೊಂಡಿದ್ದಾರೆ.

“ಇವತ್ತು ನಾನು ಅಂತರಾಷ್ಟ್ರೀಯ ಕ್ರಿಕೆಟ್”ಗೆ ಕಾಲಿಟ್ಟು 15 ವರ್ಷ ತುಂಬಿದೆ. ಇದೊಂದು ಅದ್ಭುತ ಪಯಣ. ಈ ಪ್ರಯಾಣದಲ್ಲಿ ನನ್ನ ಜೊತೆ ಭಾಗಿಯಾದವರಿಗೆಲ್ಲಾ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ಇವತ್ತು ಈ ಹಂತಕ್ಕೇರುವಲ್ಲಿ ನೆರವಾದವರಿಗೆ ವಿಶೇಷ ಕೃತಜ್ಞತೆಗಳು”.

  • ರೋಹಿತ್ ಶರ್ಮಾ, ಭಾರತ ಕ್ರಿಕೆಟ್ ತಂಡದ ನಾಯಕ.

ಮುಂಬೈ ಬ್ಯಾಟ್ಸ್’ಮನ್ ರೋಹಿತ್ ಶರ್ಮಾ 2007ರ ಜೂನ್ 23ರಂದು ಬೆಲ್’ಫಾಸ್ಟ್”ನಲ್ಲಿ ನಡೆದಿದ್ದ ಐರ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್”ಗೆ ಪದಾರ್ಪಣೆ ಮಾಡಿದ್ದರು. ವಿಶೇಷವೆಂದರೆ ರೋಹಿತ್ ಅವರ ಪದಾರ್ಪಣೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕರಾಗಿದ್ದವರು ಭಾರತ ತಂಡದ ಹಾಲಿ ಕೋಚ್ ರಾಹುಲ್ ದ್ರಾವಿಡ್.

2007ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಮೂಲಕ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೂ ರೋಹಿತ್ ಪದಾರ್ಪಣೆ ಮಾಡಿದ್ದರು. 2013ರಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್”ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್’ಗೆ ಕಾಲಿಟ್ಟಿದ್ದ ರೋಹಿತ್ ಶರ್ಮಾ, ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಭರ್ಜರಿ 177 ರನ್ ಸಿಡಿಸಿದ್ದರು. 15 ವರ್ಷಗಳ ವೃತ್ತಿಜೀವನದಲ್ಲಿ ಟೆಸ್ಟ್, ಏಕದಿನ ಹಾಗೂ ಟಿ20 ಸೇರಿ ಇಲ್ಲಿಯವರೆಗೆ ಒಟ್ಟು 400 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ, ಒಟ್ಟು 41 ಶತಕಗಳ ಸಹಿತ 15,733 ರನ್ ಗಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ : ರೋಹಿತ್ ಶರ್ಮಾ (Rohit Sharma) ಸಾಧನೆ

ಪಂದ್ಯ: 45
ರನ್: 3137
ಸರಾಸರಿ: 46.13
ಶತಕ: 08
ಅರ್ಧಶತಕ: 14

ಏಕದಿನ ಕ್ರಿಕೆಟ್: ರೋಹಿತ್ ಶರ್ಮಾ ಸಾಧನೆ

ಪಂದ್ಯ: 230
ರನ್: 9283
ಸರಾಸರಿ: 48.60
ಶತಕ: 29
ಅರ್ಧಶತಕ: 44

T20I ಕ್ರಿಕೆಟ್: ರೋಹಿತ್ ಶರ್ಮಾ ಸಾಧನೆ

ಪಂದ್ಯ: 125
ರನ್: 3313
ಸರಾಸರಿ: 32.48
ಶತಕ: 04

ಇದನ್ನೂ ಓದಿ : Dinesh Karthik : 18 ವರ್ಷ 10 ಮಂದಿಯ ನಾಯಕತ್ವದಲ್ಲಿ ಆಡಿದ ದಿನೇಶ್‌ ಕಾರ್ತಿಕ್

ಇದನ್ನೂ ಓದಿ : Sarfaraz Khan : 6 ಪಂದ್ಯಗಳಲ್ಲಿ 937 ರನ್ ; ಸಾವಿರಕ್ಕೆ 63 ಬಾಕಿ, ಆರ್‌ಸಿಬಿಯ ಸರ್ಫರಾಜ್ ಖಾನ್ ತಾಕತ್ತು ನೋಡಿದ್ರಾ?

Rohit Sharma international cricket journey 15 years, who writes in passionate words for

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular