Edible Oil Price : ಅಡುಗೆ ಎಣ್ಣೆಯ ಬೆಲೆಗಳಲ್ಲಿ ಇಳಿಕೆ! ಯಾವ ಎಣ್ಣೆ ಎಷ್ಟು ಇಳಿಕೆಯಾಗಿದೆ ಗೊತ್ತಾ?

ಚಿಲ್ಲರೆ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಗಳು (Edible Oil Price) ಅಂತರ್‌ರಾಷ್ಟ್ರೀಯ ದರಗಳಲ್ಲಿ ಕಡಿತ ಮತ್ತು ಸರ್ಕಾರದ ಸಕಾಲಿಕ ಮಧ್ಯಪ್ರವೇಶದಿಂದ ಕಡಿಮೆಯಾಗಿದೆ ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ (Food Secretary Sudhanshu Pandey) ಬುಧವಾರ ಹೇಳಿದ್ದಾರೆ. ಸರ್ಕಾರದ ಸಮಯೋಚಿತ ಮಧ್ಯಸ್ಥಿಕೆ ಮತ್ತು ಜಾಗತಿಕ ಬೆಳವಣಿಗೆಯಿಂದಾಗಿ ಖಾದ್ಯ ತೈಲಗಳ ಬೆಲೆಗಳು (Edible Oil Price) ಸಕಾರಾತ್ಮಕವಾಗಿವೆ ಎಂದು ಅವರು ತಿಳಿಸಿದರು.

ಸರ್ಕಾರದ ಅಂಕಿಅಂಶಗಳ ಪ್ರಕಾರ ಈ ತಿಂಗಳ ಆರಂಭದಿಂದ ದೇಶದಾದ್ಯಂತ ಕಡಲೆಕಾಯಿ ಎಣ್ಣೆಯನ್ನು (Ground nut oil) ಹೊರತುಪಡಿಸಿ, ಪ್ಯಾಕ್‌ ಮಾಡಲಾದ ಖಾದ್ಯ ತೈಲಗಳ ಸರಾಸರಿ ಚಿಲ್ಲರೆ ಬೆಲೆಗಳು ಪ್ರತಿ ಕೆಜಿಗೆ 150 ರಿಂದ 190ರ ನಡುವೆ ಮಾರಾಟವಾಗುತ್ತಿದೆ.

ಖಾದ್ಯ ತೈಲ ಸಂಸ್ಥೆಗಳಾದ ಅದಾನಿ ವಿಲ್ಮಾರ್‌ ಮತ್ತು ಮದರ್‌ ಡೈರಿ ಕಂಪನಿಗಳು ವಿವಿಧ ಬಗೆಯ ಅಡುಗೆ ಎಣ್ಣೆಗಳ MRP ಅನ್ನು ಲೀಟರ್‌ಗೆ 10–15 ರೂ. ಕಡಿಮೆ ಮಾಡಿತ್ತು. ಕಳೆದ ವಾರ ಈ ಎರಡೂ ಕಂಪನಿಗಳು ಶೀಘ್ರದಲ್ಲೇ ಹೊಸ MRP ಗಳನ್ನು ಹೊಂದಿರುವ ಉತ್ಪನ್ನಗಳು ಮಾರುಕಟ್ಟೆಗೆ ಬರಲಿವೆ ಎಂದು ಕೂಡಾ ತಿಳಿಸಿವೆ.

ಖಾದ್ಯ ತೈಲಗಳಷ್ಟೇ ಅಲ್ಲದೇ ಗೋಧಿ ಮತ್ತು ಗೋಧಿ ಹಿಟ್ಟಿನ ರಿಟೇಲ್‌ ದರಗಳು ಸ್ಥಿರವಾಗಿವೆ. ದೇಶೀಯ ದರಗಳನ್ನು ನಿಯಂತ್ರಣದಲ್ಲಿಡುವ ನಿಯಮಗಳು ಉಪಯುಕ್ತವಾಗಿವೆ ಎಂದು ಪಾಂಡೆ ಹೇಳಿದರು.

ಪ್ರಮುಖ ಖಾದ್ಯ ತೈಲ ಬ್ರಾಂಡ್‌ಗಳು MRPಯನ್ನು ಪ್ರತಿ ಲೀಟರ್‌ಗೆ 10–15 ರೂಪಾಯಿಗಳಷ್ಟು ಬೆಲೆಯನ್ನು ಇತ್ತೀಚೆಗಷ್ಟೇ ಕಡಿತಗೊಳಿಸಿವೆ ಎಂದು ಆಹಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಗ್ರಾಹಕ ವ್ಯವಹಾರಗಳ ಇಲಾಖೆಯು ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ ಖಾದ್ಯ ತೈಲಗಳ ಬೆಲೆಗಳು ಹೀಗಿವೆ:

ಜೂನ್‌ 1ರಂದು ಪ್ರತಿ ಕೆಜಿಗೆ 188.14ರೂ ಗಳಿದ್ದ ಪ್ಯಾಕ್‌ ಮಾಡಿದ ಶೇಂಗಾ ಎಣ್ಣೆಯ ಸರಾಸರಿ ಚಿಲ್ಲರೆ ಬೆಲೆಯು ಜೂನ್‌ 21 ಕ್ಕೆ 186.43 ರಷ್ಟು ಇಳಿಕೆಯಾಗಿದೆ.

ಸಾಸಿವೆ ಎಣ್ಣೆಯ ದರವು ಜೂನ್ 1ರಂದು ಪ್ರತಿ ಕೆಜಿಗೆ 183.68 ರೂ. ಗಳಿದ್ದದ್ದು ಜೂನ್‌ 21 ರಂದು 180.85 ರೂ. ಕಡಿಮೆಯಾಗಿದೆ.

ವನಸ್ಪತಿ ಬೆಲೆಯು ಪ್ರತಿ ಕೆಜಿಗೆ 165 ರೂ.

ಸೋಯಾ ಎಣ್ಣೆಯ ಬೆಲೆಯು 169.65 ರಿಂದ 167.67 ರೂ. ಗಳಷ್ಟು ಕಡಿಮೆಯಾಗಿದೆ.

ಸೂರ್ಯಕಾಂತಿ ದರವು ಕೆಜಿಗೆ 193ರೂ. ರಿಂದ 189.99 ರೂ. ಕ್ಕೆ ಕುಸಿದಿದೆ.

ಜೂನ್‌ 1 ರಂದು ಪ್ರತಿ ಕೆಜಿಗೆ 156.4 ರೂ ಗಳಿದ್ದ ತಾಳೆ ಎಣ್ಣೆ ದರವು ಜೂನ್‌ 21 ರಂದು 152.52 ರೂ. ಕಡಿಮೆಯಾಗಿದೆ.

ಇದನ್ನೂ ಓದಿ : Karnataka Bank : ಮನೆಯಲ್ಲೇ ಕುಳಿತು ತೆರೆಯಬಹುದು ಹೊಸ ಬ್ಯಾಂಕ್​ ಖಾತೆ : ಕರ್ಣಾಟಕ ಬ್ಯಾಂಕ್​ನಿಂದ ಹೊಸ ಸೌಕರ್ಯ

ಇದನ್ನೂ ಓದಿ : Karnataka cabinet expansion : ಮತ್ತೊಮ್ಮೆ ದೆಹಲಿಗೆ ಸಿಎಂ ಬೊಮ್ಮಾಯಿ : ಮುನ್ನಲೆಗೆ ಬಂತು ಸಂಪುಟ ವಿಸ್ತರಣೆ ಸರ್ಕಸ್

(Edible oil prices become cheaper, major brands cut MRP by Rs 10-15 per liter)

Comments are closed.